Headlines

ಶುಗರ್ ರಿಪೋರ್ಟ್ ನಾರ್ಮಲ್ ಬಂದ್ರೂ ಸುಸ್ತು ಅನಿಸುವುದಕ್ಕೆ ಈ ಹಿಡನ್ ಡಯಾಬಿಟಿಸ್ ಲಕ್ಷಣ ಕಾರಣವೇ? – Kannada News | Hidden Diabetes Symptoms: Don’t Ignore These Signs

ಮಧುಮೇಹ (Diabetes) ಸಾಮಾನ್ಯ ಕಾಯಿಲೆ ಅಲ್ಲವೇ ಅಲ್ಲ. ಅದರಿಂದ ದೂರ ಇರುವುದು ಈಗಿನ ಪರಿಸ್ಥಿತಿಯಲ್ಲಿ ಒಂದು ಸವಾಲಿನ ಕೆಲಸ. ಅದರಲ್ಲಿಯೂ ಕೆಲವರಿಗೆ ಶುಗರ್ ಲೆವೆಲ್ ಪರೀಕ್ಷೆ ಮಾಡಿದಾಗ ಯಾವಾಗಲೂ ಸಾಮಾನ್ಯವಾಗಿರುತ್ತದೆ ಆದರೆ ಸುಸ್ತು, ದಣಿವು ಕಡಿಮೆಯಾಗುವುದೇ ಇಲ್ಲ. ಈ ರೀತಿ ಆಗುವುದನ್ನು ಸಾಮಾನ್ಯ ಸಮಸ್ಯೆ ಎಂದು ನಿರ್ಲಕ್ಷ್ಯ ಮಾಡುತ್ತಾರೆ. ಆದ್ರೆ ಆರೋಗ್ಯ ತಜ್ಞರು ಹೇಳುವ ಪ್ರಕಾರ, ಇದು ದೇಹದಲ್ಲಿ ಗುಪ್ತ ಮಧುಮೇಹದ ಸಂಕೇತವೂ ಆಗಿರಬಹುದು. ಹಾಗಾದರೆ ಗುಪ್ತ ಮಧುಮೇಹ ಎಂದರೇನು ಮತ್ತು ಅದು ಪರೀಕ್ಷೆಗಳಲ್ಲಿ ಏಕೆ ಸುಲಭವಾಗಿ ಕಾಣಿಸಿಕೊಳ್ಳುವುದಿಲ್ಲ, ಇದನ್ನು ಕಂಡುಹಿಡಿಯಲು ಏನು ಮಾಡಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಗಾಜಿಯಾಬಾದ್‌ನ ಜಿಲ್ಲಾ ಆಸ್ಪತ್ರೆಯ ಡಾ. ಸಂತ್ರಮ್ ವರ್ಮಾ ಹೇಳುವ ಪ್ರಕಾರ, ಅನೇಕರ ಶುಗರ್ ಲೆವೆಲ್ ವರದಿ ಸಾಮಾನ್ಯವಾಗಿರುತ್ತದೆ, ಆದರೆ ಅವರಿಗೆ ಇನ್ಸುಲಿನ್ ಪ್ರತಿರೋಧವಿರುತ್ತದೆ. ಇದರರ್ಥ ವರದಿಯಲ್ಲಿನ ಸಕ್ಕರೆ ಮಟ್ಟವು ಸರಿಯಾಗಿ ಕಾಣಿಸಬಹುದು, ಆದರೆ ಇನ್ಸುಲಿನ್ ಸರಿಯಾಗಿ ಕಾರ್ಯನಿರ್ವಹಿಸುತ್ತಿರುವುದಿಲ್ಲ. ಈ ಪರಿಸ್ಥಿತಿಯಲ್ಲಿ, ರಕ್ತದಲ್ಲಿನ ಸಕ್ಕರೆ ಸ್ವಲ್ಪ ಸಮಯದ ವರೆಗೆ ಸಾಮಾನ್ಯವಾಗಿ ಕಾಣಿಸಬಹುದು, ಆದರೆ ದೇಹದ ಜೀವಕೋಶಗಳು ಗ್ಲೂಕೋಸ್ ಅನ್ನು ಸರಿಯಾಗಿ ಬಳಸಲು ಸಾಧ್ಯವಾಗುವುದಿಲ್ಲ. ಗ್ಲೂಕೋಸ್‌ನ ಅಸಮರ್ಪಕ ಬಳಕೆಯಿಂದಾಗಿ, ದೇಹದಲ್ಲಿ ಮಧುಮೇಹದ ಇತರ ಕೆಲವು ಲಕ್ಷಣಗಳ ಜೊತೆಗೆ ಆಯಾಸವೂ ಕಂಡುಬರುತ್ತದೆ.

ಶುಗರ್ ಲೆವೆಲ್ ಸರಿಯಾಗಿದ್ದರೂ ಕಂಡುಬರುವ ಈ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡಬಾರದು!

  • ನಿರಂತರ ಆಯಾಸ
  • ಆಹಾರ ಸೇವನೆ ಮಾಡಿದ ನಂತರ ತುಂಬಾ ನಿದ್ದೆ ಬರುತ್ತಿರುವಂತೆ ಅನಿಸುವುದು
  • ಹೊಟ್ಟೆಯ ಸುತ್ತ ಕೊಬ್ಬಿನ ಅಂಶ ಹೆಚ್ಚಾಗುವುದು
  • ಪದೇ ಪದೇ ಸಿಹಿತಿಂಡಿಗಳನ್ನು ತಿನ್ನುವ ಹಂಬಲ
  • ಸ್ವಲ್ಪ ಮಸುಕಾದ ದೃಷ್ಟಿ
  • ಚರ್ಮದ ಮೇಲೆ, ವಿಶೇಷವಾಗಿ ಕುತ್ತಿಗೆ ಮತ್ತು ಕೆನ್ನೆಯ ಭಾಗದಲ್ಲಿ ಕಪ್ಪು ಕಲೆಗಳು
  • ಶುಗರ್ ಲೆವೆಲ್ ಸರಿಯಾಗಿದ್ದರೂ ಆಯಾಸ ಉಂಟಾಗುವುದಕ್ಕೆ ಕಾರಣವೇನು?

ಇದನ್ನೂ ಓದಿ: ಚರ್ಮದ ಮೇಲೆ ಕಾಣಿಸಿಕೊಳ್ಳುವ ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ, ಅವು ಮಧುಮೇಹ ಬರುವ ಮುನ್ಸೂಚನೆಯಾಗಿರಬಹುದು

ಡಾ. ಸಂತ್ರಮ್ ಹೇಳುವ ಪ್ರಕಾರ, ಅನೇಕರು ಖಾಲಿ ಹೊಟ್ಟೆಯಲ್ಲಿ ಸಕ್ಕರೆ ಮಟ್ಟವನ್ನು ಮಾತ್ರ ಪರಿಶೀಲಿಸುತ್ತಾರೆ ಆದರೆ ಅವರ HbA1c ಪರೀಕ್ಷೆಯನ್ನು ಮಾಡಿಸಿಕೊಳ್ಳುವುದಿಲ್ಲ. ಆದರೆ ಈ ಪರೀಕ್ಷೆಯು ಸಹ ಮುಖ್ಯವಾಗಿದೆ. ಈ ರೋಗಲಕ್ಷಣಗಳೊಂದಿಗೆ HbA1c ಮಟ್ಟವು 6.6 ಕ್ಕಿಂತ ಹೆಚ್ಚಿದ್ದರೆ, ನೀವು ವಿಶೇಷ ಕಾಳಜಿ ವಹಿಸಬೇಕು. ಜೊತೆಗೆ ಇನ್ಸುಲಿನ್ ಪ್ರತಿರೋಧವನ್ನು ನಿಯಂತ್ರಿಸುವುದು ಅವಶ್ಯಕ. ಇಲ್ಲವಾದಲ್ಲಿ ನಿಮ್ಮ ಸಕ್ಕರೆ ಮಟ್ಟ ಈಗ ಸರಿಯಾಗಿದ್ದರೂ ಸಹ, ಅದು ನಂತರ ಮಧುಮೇಹಕ್ಕೆ ಕಾರಣವಾಗಬಹುದು.

ಏನು ಮಾಡಬೇಕು?

  • ಪ್ರತಿದಿನ 30 ನಿಮಿಷಗಳ ಕಾಲ ನಡೆಯಿರಿ
  • ಪ್ರತಿನಿತ್ಯ ವ್ಯಾಯಾಮ ಮಾಡಿ
  • ಸಕ್ಕರೆ ಸೇವಿಸಬೇಡಿ
  • ಹೆಚ್ಚು ಪ್ರೋಟೀನ್ ಸೇವಿಸಿ

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *