
ನೀವೇನಾದರೂ ಹರಕೆ ಹೊತ್ತುಕೊಂಡಿದ್ದು, ಅದನ್ನು ಪೂರ್ಣಗೊಳಿಸದೆ ಹಾಗೇ ಉಳಿಸಿಕೊಂಡಿದ್ದಲ್ಲಿ ಅದನ್ನು ಸಂಪೂರ್ಣ ಮಾಡುವ ಕಡೆಗೆ ಲಕ್ಷ್ಯವನ್ನು ನೀಡಿ. ಇದರಿಂದ ಆರೋಗ್ಯ ಸಮಸ್ಯೆ ನಿವಾರಣೆ, ನಿದ್ದೆಯ ತೊಂದರೆಯಿಂದ ಬಳಲುತ್ತಾ ಇದ್ದಲ್ಲಿ ಅದು ಕೂಡ ಸರಿಹೋಗುತ್ತದೆ.
ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4):
ನಿಮ್ಮಲ್ಲಿ ಯಾರು ಫೋಟೋಗ್ರಾಫರ್ ಇದ್ದೀರಿ, ಸ್ಟುಡಿಯೋಗಳನ್ನು ನಡೆಸುತ್ತಾ ಇದ್ದೀರಿ ಅಂಥವರು ಹೊಸ ತಂತ್ರಜ್ಞಾನಗಳನ್ನು ವೃತ್ತಿಯಲ್ಲಿ ಅಳವಡಿಸಿಕೊಳ್ಳುವುದಕ್ಕಾಗಿ ಕೆಲವರ ಸಹಾಯವನ್ನು ಪಡೆದುಕೊಳ್ಳಲು ಮುಂದಾಗಲಿದ್ದೀರಿ. ಬೇಗನೇ ಹಣ ಮಾಡಿಬಿಡಬಹುದು, ಅದಕ್ಕೆ ತಾನು ಐಡಿಯಾಗಳನ್ನು ನೀಡುವುದಾಗಿ ನಿಮ್ಮ ಬಳಿ ಬರುವಂಥ ಹೊಸ ಪರಿಚಯಸ್ಥರಿಂದ ಅಂತರ ಕಾಯ್ದುಕೊಳ್ಳುವುದು ಕ್ಷೇಮ. ಈ ವಿಚಾರದಲ್ಲಿ ನಿಮ್ಮ ಸ್ನೇಹಿತರಿಗೋ ಸಂಬಂಧಿಗಳಿಗೋ ರೆಫರ್ ಕೂಡ ಮಾಡಬೇಡಿ.
ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5):
ಎಲ್ಲಿಯಾದರೂ ಬರಿಗಾಲಲ್ಲಿ ನಡೆದಾಡುವ ಸಂದರ್ಭದಲ್ಲಿ ಎಚ್ಚರಿಕೆಯನ್ನು ವಹಿಸಿ. ನಿಮ್ಮಲ್ಲಿ ಕೆಲವರಿಗೆ ಚೂಪಾದ ಗಾಜು, ಮುಳ್ಳು ಅಥವಾ ಕಲ್ಲು ಚುಚ್ಚಿಕೊಂಡು, ಪಾದದಲ್ಲಿ ತೀವ್ರ ಸ್ವರೂಪದ ಗಾಯ ಆಗುವ ಸಾಧ್ಯತೆ ಇದೆ. ಸದ್ಯಕ್ಕೆ ಬೇಡ ಅಂದುಕೊಂಡಿದ್ದ ಕೆಲವೊಂದರ ನಿಮಿತ್ತವಾಗಿ ಸಾಲ ಪಡೆದುಕೊಳ್ಳುವುದಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳಲಿದ್ದೀರಿ. ನಿಮ್ಮಲ್ಲಿ ಕೆಲವರಿಗೆ ತೀವ್ರವಾದ ಹೊಟ್ಟೆನೋವು ಹಾಗೂ ಅದಕ್ಕೆ ಸಂಬಂಧಿಸಿದ ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ.
ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6):
ಚರ್ಮಕ್ಕೆ ಸಂಬಂಧಿಸಿದ ವ್ಯಾಧಿಗಳಿಂದ ಬಳಲುತ್ತಾ ಇರುವವರಿಗೆ ಪರಿಣಾಮಕಾರಿಯಾದ ಔಷಧೋಪಚಾರ ದೊರೆಯುವ ಮಾಹಿತಿ ಸಿಗಲಿದೆ. ನಿಮಗೆ ಬಹಳ ಆಪ್ತರಾದವರು ತಮ್ಮ ಜೊತೆಗೇ ಕರೆದುಕೊಂಡು ಹೋಗಿ, ವೈದ್ಯರ ಬಳಿ ಚಿಕಿತ್ಸೆಗೆ ಸಹಾಯ ಮಾಡಲಿದ್ದಾರೆ. ಮಾಂಸಾಹಾರ ಸೇವನೆ ಮಾಡುವವರಿದ್ದಲ್ಲಿ ಅತಿಯಾದ ಜಿಡ್ಡು, ಅತಿಯಾದ ಮಸಾಲೆಯುಕ್ತ ಮಾಂಸಹಾರ ಸೇವನೆಯಿಂದ ದೂರ ಇರುವುದು ಒಳ್ಳೆಯದು.
ಲೇಖನ- ಸ್ವಾತಿ ಎನ್.ಕೆ.