Headlines

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಮಾರ್ಚ್ 4ರ ದಿನಭವಿಷ್ಯ

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಮಾರ್ಚ್ 4ರ ದಿನಭವಿಷ್ಯ

ಒಂದು ಸಣ್ಣ ಬಟ್ಟಲಿನಲ್ಲಿ ನೀರು ತೆಗೆದುಕೊಂಡು ಅದಕ್ಕೆ ಒಂದು ಚಿಟಿಕೆ ಅರಿಶಿನ ಹಾಕಿ ಮನೆಯ ಮೂಲೆ ಮೂಲೆಗೆ ಪ್ರೋಕ್ಷಣೆ ಮಾಡಿ. ಅರಿಶಿನವು ಗುರು ಬಲವನ್ನು ಹೆಚ್ಚಿಸಿ, ನಕಾರಾತ್ಮಕ ಶಕ್ತಿಯನ್ನು ದೂರ ಮಾಡುತ್ತದೆ. ಈ ದಿನ ಯಾರೊಂದಿಗೂ ವಾದಕ್ಕೆ ಇಳಿಯಬೇಡಿ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1):

ತುಂಬ ಒತ್ತಡದಲ್ಲಿಯೂ ಅದ್ಭುತವಾದ ಫಲಿತಾಂಶವನ್ನು ಪಡೆಯಲಿದ್ದೀರಿ. ವೃತ್ತಿ ಅಥವಾ ವ್ಯವಹಾರದಲ್ಲಿ ಇರುವವರು ಜೊತೆಯಲ್ಲಿ ಕಾರ್ಯ ನಿರ್ವಹಿಸುವವರಿಗೆ ಅನುಕೂಲಗಳನ್ನು ಮಾಡಿಕೊಡಲಿದ್ದೀರಿ. ಬಹಳ ಸಮಯದಿಂದ ಒಂದು ಅವಕಾಶ ಎಂಬಂತೆ ಎದುರು ನೋಡುತ್ತಾ ಇದ್ದದ್ದು ಅದೀಗ ನಿಮ್ಮ ಕಡೆಗೆ ಬರುವಂಥ ಸುಳಿವು ದೊರೆಯಲಿದೆ. ಮಾನಸಿಕವಾಗಿ ಈ ದಿನ ಬಹಳ ಗಟ್ಟಿಯಾಗಿ ಇರಲಿದ್ದೀರಿ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2):

ಇತರರಿಗೆ ಕಷ್ಟ ಎನಿಸಿದ ವಿಷಯಗಳನ್ನು ಸಹ ಅರ್ಥ ಮಾಡಿಕೊಳ್ಳುವಿರಿ. ಆಧ್ಯಾತ್ಮಿಕ ವ್ಯಕ್ತಿಯೊಬ್ಬರ ಜೊತೆಗಿನ ಒಡನಾಟದಿಂದ ನಿಮ್ಮಲ್ಲಿಯೂ ಕೆಲವು ಬದಲಾವಣೆಗಳು ಆಗಲಿದ್ದು, ಮಾನಸಿಕವಾಗಿ ಒಂದು ಬಗೆಯ ಸಮಾಧಾನ ದೊರೆಯಲಿದೆ. ಫ್ಲ್ಯಾಟ್ ಅಥವಾ ಸೈಟು ಖರೀದಿಗಾಗಿ ಹುಡುಕಾಟ ನಡೆಸುತ್ತಾ ಇರುವವರಿಗೆ ಮನಸ್ಸಿಗೆ ಒಪ್ಪುವಂಥದ್ದು ದೊರೆಯುವ ಯೋಗ ಇದೆ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3):

ನಿಮಗೆ ಇಷ್ಟವಾದದ್ದನ್ನು ಖರೀದಿ ಮಾಡಿಬಿಡಬೇಕು ಎಂಬ ಚಡಪಡಿಕೆ ನಿಮ್ಮಲ್ಲಿ ಇರಲಿದೆ. ನಿಶ್ಚಿತವಾದ ಆದಾಯ ಬರುವಂತೆ ಮಾಡಿಕೊಳ್ಳಬೇಕು ಎಂಬ ಪ್ರಯತ್ನಗಳು ಗುರಿಯ ಕಡೆಗೆ ಸಾಗಲಿವೆ. ಶಿಕ್ಷಕರಿಗೆ ನಿಯೋಜನೆ ಮೇರೆಗೆ ದೊಡ್ಡ ಜವಾಬ್ದಾರಿಗಳು ನಿರ್ವಹಿಸಬೇಕಾಗಿ ಬರಲಿದೆ. ಆರಂಭದಲ್ಲಿ ಅದು ನಿಮ್ಮಿಂದ ಸಾಧ್ಯವೇ ಎಂಬ ಆತಂಕವಾದರೂ ಇದರಿಂದ ನಿಮಗೆ ಹೆಸರು ಬರುವಂಥ ಸಾಧ್ಯತೆ ಇದೆ.

ಲೇಖನ- ಸ್ವಾತಿ ಎನ್.ಕೆ.

Source link

Leave a Reply

Your email address will not be published. Required fields are marked *