
ಈ ದಿನ ಕನಿಷ್ಠ 15 ನಿಮಿಷಗಳ ಕಾಲ ಸಂಪೂರ್ಣ ಮೌನವಾಗಿರಿ. ಹೀಗೆ ಮಾಡುವುದರಿಂದ ಅಭಿಪ್ರಾಯ ಭೇದ- ಮನಸ್ತಾಪಗಳು ಆಗುವ ಸಂಭವವನ್ನು ದೂರ ಮಾಡುತ್ತದೆ.
ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4):
ಭರತನಾಟ್ಯ ಕಲಾವಿದರಿಗೆ ಪ್ರತಿಷ್ಠಿತ ವೇದಿಕೆಯಲ್ಲಿ ಪ್ರದರ್ಶನ ನೀಡುವುದಕ್ಕೆ ಅವಕಾಶ ದೊರೆಯಲಿದೆ. ಇಷ್ಟು ಕಾಲ ಯಾವುದು ನಿಮಗೆ ಹವ್ಯಾಸ ಆಗಿತ್ತೋ ಅದನ್ನೇ ಆದಾಯ ಮೂಲ ಆಗುವಂಥ ವೃತ್ತಿಯಾಗಿ ಮಾಡಿಕೊಳ್ಳುವ ಬಗ್ಗೆ ಆಲೋಚನೆ ಬರಲಿದೆ. ಪಶು ಸಾಕಣೆ ಮಾಡುತ್ತಾ ಇರುವವರಿಗೆ ವ್ಯವಹಾರ ವಿಸ್ತಣೆಗೆ ಅವಕಾಶಗಳು ತೆರೆದುಕೊಳ್ಳಲಿವೆ. ನಿಮ್ಮ ಬಗ್ಗೆ ಹರಿದಾಡುವಂಥ ಗಾಸಿಪ್ ಗಳ ಕುರಿತು ತಲೆ ಕೆಡಿಸಿಕೊಳ್ಳಬೇಡಿ.
ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5):
ಪರಿಚಿತರ ಅಗತ್ಯಗಳಿಗೆ ನೆರವು ನೀಡಲಿದ್ದೀರಿ. ಸೈಟು- ಮನೆ ಖರೀದಿ ಮಾಡಬೇಕು ಎಂದಿರುವವರು ತಮ್ಮ ನಿರ್ಧಾರದಲ್ಲಿ ಬದಲಾವಣೆ ಮಾಡಿಕೊಳ್ಳುವ ಸಾಧ್ಯತೆ ಇದೆ. ಚೌಕಾಶಿ ಮಾಡಿ, ಈ ದಿನ ಕೆಲವು ಸೆಕೆಂಡ್ ಹ್ಯಾಂಡ್ ವಸ್ತುಗಳನ್ನು ಖರೀದಿ ಮಾಡಲಿದ್ದೀರಿ. ಬರೀ ಮಾತಿನಿಂದ ಆಗುವುದಿಲ್ಲ ಎಂಬಂಥ ಕಡೆಗಳಲ್ಲಿ ಕೆಲಸ- ಕಾರ್ಯಗಳನ್ನು ಪೂರ್ಣ ಮಾಡುವುದಕ್ಕೆ ಪ್ರಭಾವ ಬಳಕೆ ಮಾಡಲಿದ್ದೀರಿ.
ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6):
ಮಕ್ಕಳ ಶಿಕ್ಷಣದ ಬಗ್ಗೆ ಚಿಂತೆ ಹೆಚ್ಚಾಗಲಿದೆ. ನಿಮ್ಮಲ್ಲಿ ಕೆಲವರು ಮಕ್ಕಳನ್ನು ಹಾಸ್ಟೆಲ್ ನಲ್ಲಿ ಬಿಟ್ಟು ಓದಿಸುವ ಬಗ್ಗೆ ಆಲೋಚನೆ ಮಾಡಲಿದ್ದೀರಿ. ನಿಮ್ಮ ಹಳೇ ಚಿನ್ನದ ಆಭರಣಗಳ ವಿನಿಮಯಕ್ಕೆ ನಿರ್ಧಾರ ಕೈಗೊಳ್ಳುವ ಯೋಗ ಇದೆ. ಸ್ವಲ್ಪ ಪ್ರಮಾಣದಲ್ಲಿಯಾದರೂ ಸಾಲ ಮಾಡುವ ಸಾಧ್ಯತೆ ಇದೆ. ಅಥವಾ ಕೆಲವರು ಪಿಎಫ್, ಎಫ್.ಡಿ., ಇಂಥವುಗಳಿಂದ ಹಣ ತೆಗೆದುಕೊಳ್ಳಲು ಪ್ರಯತ್ನ ಮಾಡಲಿದ್ದೀರಿ.
ಲೇಖನ- ಸ್ವಾತಿ ಎನ್.ಕೆ.