ಸನ್ ಫಾರ್ಮಾ ‘ಹಾರ್ಟ್ ಕೆ ಲಿಯೇ 8- ಮೇಕಿಂಗ್ ಇಂಡಿಯಾ ಹಾರ್ಟ್ ಸ್ಟ್ರಾಂಗ್’ ಅಭಿಯಾನ; ಹೃದಯದ ಆರೋಗ್ಯದ ಬಗ್ಗೆ ಅರಿವು ಮೂಡಿಸಲು ಯತ್ನ

ಸನ್ ಫಾರ್ಮಾ ‘ಹಾರ್ಟ್ ಕೆ ಲಿಯೇ 8- ಮೇಕಿಂಗ್ ಇಂಡಿಯಾ ಹಾರ್ಟ್ ಸ್ಟ್ರಾಂಗ್’ ಅಭಿಯಾನ; ಹೃದಯದ ಆರೋಗ್ಯದ ಬಗ್ಗೆ ಅರಿವು ಮೂಡಿಸಲು ಯತ್ನ

ಮುಂಬೈ ಮಾರ್ಚ್ 26: ಸನ್ ಫಾರ್ಮಸ್ಯುಟಿಕಲ್ಸ್ ಲಿಮಿಟೆಡ್ (ಸನ್ ಫಾರ್ಮಾ) 2026ರ ಫೆಬ್ರವರಿ 26ರಂದು ತನ್ನ ‘ಹಾರ್ಟ್ ಕೆ ಲಿಯೆ 8- ಮೇಕಿಂಗ್ ಇಂಡಿಯಾ ಹಾರ್ಟ್ ಸ್ಟ್ರಾಂಗ್’ ಎಂಬ ಅಭಿಯಾನವನ್ನು ಪ್ರಾರಂಭಿಸಿದೆ. ಉತ್ತಮ ಹೃದಯ ಆರೋಗ್ಯಕ್ಕಾಗಿ ಸರಳವಾದ ದೈನಂದಿನ ಅಭ್ಯಾಸಗಳನ್ನು ಅಳವಡಿಸಿಕೊಳ್ಳಲು ಭಾರತೀಯರನ್ನು ಉತ್ತೇಜಿಸಲೆಂದು ಈ ಕೆಂಪೇನ್ ನಡೆಸಲಾಗುತ್ತಿದೆ. ಕಾರ್ಡಿಯೊ-ಮೆಟಬಾಲಿಕ್ ಥೆರಪಿಯಲ್ಲಿ ಭಾರತದ ನಂ.1 ಫಾರ್ಮಸ್ಯುಟಿಕಲ್ ಕಂಪನಿಯಾಗಿ ಸನ್ ಫಾರ್ಮಾ ಸಂಸ್ಥೆಯು ಹೆಚ್ಚುತ್ತಿರುವ ಹೃದಯರೋಗಗಳ ಸಮಸ್ಯೆಯನ್ನು ಎದುರಿಸಲು ಪ್ರಮುಖ ಪಾತ್ರ ವಹಿಸುತ್ತಿದೆ. ಲಿಪಿಡ್ ತಗ್ಗಿಸುವ ಥೆರಪಿಗಳಲ್ಲಿ ಮುಂಚೂಣಿಯಲ್ಲಿದೆ. ರಕ್ತದೊತ್ತಡ, ಮಧುಮೇಹ ಚಿಕಿತ್ಸೆಗಳಲ್ಲಿ ಬಲವಾದ ಉಪಸ್ಥಿತಿ ಹೊಂದಿದೆ.

ಭಾರತದಲ್ಲಿ ಹೃದಯರೋಗಗಳಿಂದ (CVD- Cardio Vascular Disease) ಆಗುವ ಮರಣಗಳು ಒಟ್ಟು ಜಾಗತಿಕ ಹೃದಯರೋಗಗಳ ಮರಣದಲ್ಲಿ ಐದನೇ ಒಂದು ಭಾಗದಷ್ಟಿದೆ ಮತ್ತು ಅವು ಹಲವು ಪಾಶ್ಚಿಮಾತ್ಯ ಜನಸಂಖ್ಯೆಗಳಿಗಿಂತ ಭಾರತೀಯರನ್ನು ಒಂದು ದಶಕ ಮುಂಚೆಯೇ ಬಾಧಿಸುತ್ತವೆ. `ಹಾರ್ಟ್ ಕೆ ಲಿಯೆ 8- ಮೇಕಿಂಗ್ ಇಂಡಿಯಾ ಹಾರ್ಟ್ ಸ್ಟ್ರಾಂಗ್’ ಅಭಿಯಾನವು ಹೃದಯದ ಆರೋಗ್ಯವನ್ನು ಆಗಾಗ್ಗೆ ನೆಸುವ ಪ್ರಯತ್ನಗಳಿಂದಲ್ಲ, ಬದಲಿಗೆ ಪ್ರತಿನಿತ್ಯದ ಜೀವನದ ಭಾಗವಾಗುವ ಸಣ್ಣ, ಸ್ಥಿರವಾದ ಪ್ರಯತ್ನಗಳು ಅಗತ್ಯ ಎನ್ನುತ್ತದೆ.

“ಚಿಕಿತ್ಸೆಯಷ್ಟೇ ಮುಖ್ಯವಾದದು ರೋಗ ನಿಯಂತ್ರಣ ಎಂಬ ನಂಬಕೆ ಸನ್ ಫಾರ್ಮಾದಲ್ಲಿ ಇದೆ. `ಹಾರ್ಟ್ ಕೆ ಲಿಯೆ 8- ಮೇಕಿಂಗ್ ಇಂಡಿಯಾ ಹಾರ್ಟ್ ಸ್ಟ್ರಾಂಗ್’ಮೂಲಕ ನಾವು ಹೃದಯದ ಆರೋಗ್ಯದ ಸುತ್ತಲಿನ ಪ್ರತಿನಿತ್ಯದ ಸಂವಹನಗಳನ್ನು ಉತ್ತೇಜಿಸುವ ಮತ್ತು ಭಾರತೀಯರಿಗೆ ಪ್ರತಿನಿತ್ಯ ಆಚರಿಸುವ ಸಣ್ಣ, ಸ್ಥಿರವಾದ ಕ್ರಮಗಳು ಮಹತ್ತರ ವ್ಯತ್ಯಾಸ ತರಬಲ್ಲವು ಎಂದು ತಿಳಿಯಲು ನೆರವಾಗಲು ಬಯಸುತ್ತೇವೆ. ಸದೃಢ ಹೃದಯ ಎನ್ನುವುದು ಅದಾಗಿ ಬರುವುದಲ್ಲ, ಬದಲಿಗೆ ನಾವು ಪ್ರತಿನಿತ್ಯ ಮಾಡುವ ಆಯ್ಕೆಗಳಿಂದ ನಿರ್ಮಿಸುವುದಾಗಿದೆ” ಎಂದು ಸನ್ ಫಾರ್ಮಾದ ಸೀನಿಯರ್ ವೈಸ್ ಪ್ರೆಸಿಡೆಂಟ್ ಶೈಲೇಶ್ ಜೋಶಿ ಹೇಳಿದರು.

ಹಾರ್ಟ್​ಕೇಲಿಯೇ8, ಒಂದು ಕಿರುಚಿತ್ರ ವೀಕ್ಷಿಸಿ

ಹೃದಯದ ಆರೋಗ್ಯ ಉತ್ತಮವಾಗಿರುವ ವ್ಯಕ್ತಿ ಈ ಅಭಿಯಾನದ ಕೇಂದ್ರಬಿಂದುವಾಗಿದ್ದಾರೆ. ಸಮತೋಲನ, ಅರವು, ನಿತ್ಯ ಆರೈಕೆ ಮೂಲಕ ಹೃದಯದ ಆರೋಗ್ಯವನ್ನು ಕಾಳಜಿ ಮಾಡುವ ವ್ಯಕ್ತಿಯ ಪ್ರತಿರೂಪ ಈತ. ಈ ಫಿಲಂನಲ್ಲಿ ಸಕಾರಾತ್ಮಕವಾದ ಮತ್ತು ವಾಸ್ತವಿಕ ಮಾತುಗಳಿದ್ದು, ಯಾವುದೇ ವ್ಯಕ್ತಿಗಳು ಹೃದಯದ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಪ್ರೇರೇಪಿಸಲ್ಲಂತಿದೆ. ಹಲವು ಭಾರತೀಯ ಭಾಷೆಗಳಲ್ಲಿ ಈ ಸಿನಿಮಾ ಇದೆ. ಈ ಅಭಿಯಾನವು ಹೃದಯ ಆರೋಗ್ಯದ ಎಂಟು ಅಗತ್ಯ ಸ್ತಂಭಗಳ ಮೇಲೆ ನಿಂತಿದೆ:

  1. ಉತ್ತಮ ಆಹಾರ ಸೇವನೆ
  2. ದೈಹಿಕವಾಗಿ ಕ್ರಿಯಾಶೀಲವಾಗಿರುವುದು
  3. ತೂಕ ನಿರ್ವಹಿಸುವುದು
  4. ರಕ್ತದೊತ್ತಡ, ಬ್ಲಡ್ ಶುಗರ್ ಮತ್ತು ಕೊಲೆಸ್ಟ್ರಾಲ್ ನಿಯಂತ್ರಿಸುವುದು
  5. ತಂಬಾಕು ತ್ಯಜಿಸುವುದು
  6. ನಿಯಮಿತ ಹೃದಯ ಆರೋಗ್ಯ ಪರೀಕ್ಷೆಗೆ ಒಳಪಡುವುದು
  7. ಒತ್ತಡ ನಿಭಾಯಿಸುವುದು
  8. ಗುಣಮಟ್ಟದ ನಿದ್ರೆ ಮಾಡುವುದು

ಸನ್ ಫಾರ್ಮಾದ `ಮೇಕಿಂಗ್ ಇಂಡಿಯಾ ಹಾರ್ಟ್ ಸ್ಟ್ರಾಂಗ್’ ಉಪಕ್ರಮವು ರೋಗನಿಯಂತ್ರಣ, ತುರ್ತು ಸ್ಪಂದನೆ ಮತ್ತು ರೋಗಿ ಶಿಕ್ಷಣದ ಮೂಲಕ ಹೃದಯ ಆರೋಗ್ಯಕ್ಕೆ ಸಮಗ್ರ ವಿಧಾನವನ್ನು ಅನುಸರಿಸುತ್ತದೆ. ಈ ಕೆಳಗಿನ ಕ್ರಮಗಳು ಈ ವಿಧಾನದಲ್ಲಿ ಇರುತ್ತವೆ:

  • ದೊಡ್ಡ ಪ್ರಮಾಣದ ಹೃದಯಪರೀಕ್ಷಾ ಶಿಬಿರಗಳ ಮೂಲಕ ಪ್ರಾರಂಭಿಕ ರೋಗಪತ್ತೆ- ವಾರ್ಷಿಕ 1.2 ಲಕ್ಷಕ್ಕೂ ಹೆಚ್ಚು ಜನರನ್ನು ಒಳಗೊಂಡ 10,000 ಶಿಬಿರಗಳು.
  • ವಾರ್ಷಿಕ 1.5 ಲಕ್ಷ ಜನರಿಗೆ ಸಿ.ಪಿ.ಆರ್. ತರಬೇತಿ ಮೂಲಕ ತುರ್ತು ಸನ್ನದ್ಧತೆ
  • ರಿಸ್ಕ್ ನಿರ್ವಹಣೆ ಮತ್ತು ರೋಗಿ ಫಲಿತಾಂಶಗಳನ್ನು ಸುಧಾರಿಸಲು ಪುರಾವೆಗಳ ಒಗ್ಗೂಡಿಕೆ
  • ಪ್ರತಿ ವರ್ಷ ಇನ್-ಕ್ಲಿನಿಕ್ ಮುದ್ರಣ ಮತ್ತು ಅರಿವಿನ ಕಾರ್ಯಕ್ರಮಗಳ ಮೂಲಕ 15 ಮಿಲಿಯನ್​ಗೂ ಹೆಚ್ಚು ರೋಗಿಗಳಿಗೆ ಅರಿವು

ಒಟ್ಟಿಗೆ ಈ ಪ್ರಯತ್ನಗಳು ರೋಗತಡೆ, ಪ್ರತಿಕ್ರಿಯೆ ಮತ್ತು ಅರಿವನ್ನು ಸದೃಢಗೊಳಿಸುವ ಗುರಿ ಹೊಂದಿದ್ದು ಭಾರತದಲ್ಲಿ ಹೃದಯರೋಗಗಳನ್ನು ಕಡಿಮೆ ಮಾಡಲು ದೀರ್ಘಾವಧಿ ಪ್ರಯತ್ನಗಳಿಗೆ ಕೊಡುಗೆ ನೀಡುತ್ತಿದೆ.

About Sun Pharmaceutical Industries Limited (CIN – L24230GJ1993PLC019050)

Sun Pharma is the world’s leading specialty generics company with a presence in innovative medicines, generics and consumer healthcare products. It is the largest pharmaceutical company in India and is a leading generic company in the U.S. as well as global Emerging Markets. Sun Pharma’s high-growth global Innovative Medicines portfolio spans innovative products in dermatology, ophthalmology, and onco-dermatology and accounts for about 20% of company sales. The company’s vertically integrated operations deliver high-quality medicines, trusted by physicians and consumers in over 100 countries. Its manufacturing facilities are spread across five continents. Sun Pharma is proud of its multicultural workforce drawn from over 50 nations. For further information, please visit www.sunpharma.comand follow us on LinkedInand X(Formerly Twitter).

(ಗಮನಿಸಿ: ಇದು ಪ್ರಾಯೋಜಿತ ಬರಹವಾಗಿದೆ)

Source link

Leave a Reply

Your email address will not be published. Required fields are marked *