Headlines

ಸಲ್ಲು ತಂದೆ ಆರೋಗ್ಯ ಸ್ಥಿತಿ ಗಂಭೀರ? ಮೆದುಳು ಭಾಗದಲ್ಲಿ ಸರ್ಜರಿ – Kannada News | Salim Khan Hospitalized: Salman Khan’s Father in ICU with Brain Hemorrhage

ನಟ ಸಲ್ಮಾನ್ ಖಾನ್ ಅವರ ತಂದೆ ಮತ್ತು ಹಿರಿಯ ಕಥೆ ಬರಹಗಾರ ಸಲೀಂ ಖಾನ್ (Salim Khan) ಅವರನ್ನು ಮಂಗಳವಾರ (ಫೆಬ್ರವರಿ 17)ಅನಾರೋಗ್ಯದ ಕಾರಣ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಯಿತು. ಈಗ ಅವರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಂಗಳವಾರ ಬೆಳಿಗ್ಗೆ ಅವರ ಸ್ಥಿತಿ ಹದಗೆಟ್ಟ ನಂತರ ಆಸ್ಪತ್ರೆಗೆ ಕರೆತರಲಾಯಿತು. ಅಲ್ಲಿ ಅವರಿಗೆ ತಕ್ಷಣ ವೈದ್ಯಕೀಯ ಚಿಕಿತ್ಸೆ ಆರಂಭಿಸಲಾಯಿತು. 90 ವರ್ಷದ ಸಲೀಂ ಖಾನ್ ಅವರ ರಕ್ತದೊತ್ತಡ ಹಠಾತ್ತನೆ ಹೆಚ್ಚಾಯಿತು. ಇದರಿಂದಾಗಿ ಅವರ ಮೆದುಳಿನ ಬಲಭಾಗದಲ್ಲಿ ಆಂತರಿಕ ರಕ್ತಸ್ರಾವವಾಗಿದೆ. ಇದರಿಂದಾಗಿ ಅವರನ್ನು ವೆಂಟಿಲೇಟರ್‌ನಲ್ಲಿ ಇರಿಸಲಾಗಿದೆ. ಇಂದು (ಫೆಬ್ರವರಿ 18) ಶಸ್ತ್ರಚಿಕಿತ್ಸೆ ನಡೆಯಲಿದೆ.

ಮಾಧ್ಯಮಗಳ ವರದಿಯ ಪ್ರಕಾರ, ಅಧಿಕ ರಕ್ತದೊತ್ತಡದಿಂದಾಗಿ ಅವರ ಮೆದುಳಿನ ಬಲಭಾಗದಲ್ಲಿರುವ ರಕ್ತನಾಳಗಳು ಛಿದ್ರಗೊಂಡು ಆಂತರಿಕ ರಕ್ತಸ್ರಾವಕ್ಕೆ ಕಾರಣವಾಯಿತು. ಶಸ್ತ್ರಚಿಕಿತ್ಸೆ ಮಾಡುವ ಮೂಲಕ ರಕ್ತಸ್ರಾವವನ್ನು ನಿಲ್ಲಿಸಲು ವೈದ್ಯರು ಪ್ರಯತ್ನಿಸಲಿದ್ದಾರೆ. ಮಂಗಳವಾರ ಸಂಜೆ ವೈದ್ಯಕೀಯ ಬುಲೆಟಿನ್ ಬಿಡುಗಡೆ ಮಾಡಲಾಗಿದ್ದು, ಸಲೀಂ ಖಾನ್ ಅವರ ಸ್ಥಿತಿ ಸ್ಥಿರವಾಗಿದೆ ಎಂದು ಸ್ಪಷ್ಟಪಡಿಸಲಾಗಿದೆ.

ಸಲ್ಮಾನ್ ಖಾನ್ ಮಂಗಳವಾರ ಆಸ್ಪತ್ರೆಗೆ ಧಾವಿಸಿದರು. ಅದಾದ ನಂತರ, ಸಲೀಂ ಖಾನ್ ಅವರ ಮೊದಲ ಪತ್ನಿ ಸಲ್ಮಾ ಮತ್ತು ಎರಡನೇ ಪತ್ನಿ ಹೆಲೆನ್ ಕೂಡ ಆಸ್ಪತ್ರೆಗೆ ಬಂದರು. ಅರ್ಬಾಜ್ ಖಾನ್, ಅಲ್ವಿರಾ ಮತ್ತು ಅರ್ಪಿತಾ ಖಾನ್, ಅಳಿಯ ಆಯುಷ್ ಶರ್ಮಾ, ಮೊಮ್ಮಕ್ಕಳಾದ ನಿರ್ವಾಣ ಮತ್ತು ಅರ್ಹಾನ್ ಎಲ್ಲರೂ ಆಸ್ಪತ್ರೆಯಲ್ಲಿದ್ದರು. ಸಂಜಯ್ ದತ್ ಕೂಡ ಆಸ್ಪತ್ರೆಗೆ ಬಂದು ಆರೋಗ್ಯ ವಿಚಾರಿಸಿದ್ದಾರೆ.

ಇದನ್ನೂ ಓದಿ: ಹೇಗಿದೆ ಸಲೀಂ ಖಾನ್ ಆರೋಗ್ಯ ಸ್ಥಿತಿ? ಸಲ್ಮಾನ್ ಖಾನ್ ತಂದೆಗೆ ಐಸಿಯುನಲ್ಲಿ ಚಿಕಿತ್ಸೆ

ಸಲೀಂ ಖಾನ್ ಬಾಲಿವುಡ್ ಉದ್ಯಮದಲ್ಲಿ ಪ್ರಸಿದ್ಧ ಚಿತ್ರಕಥೆಗಾರ. ಜಾವೇದ್ ಅಖ್ತರ್ ಅವರ ಜೋಡಿ ಬಹಳ ಪ್ರಸಿದ್ಧವಾಗಿತ್ತು. ಅವರನ್ನು ಸಲೀಂ-ಜಾವೇದ್ ಎಂದು ಕರೆಯಲಾಗುತ್ತಿತ್ತು. ಅವರು ಇತ್ತೀಚೆಗೆ ತಮ್ಮ 61 ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡರು. ಸಲೀಂ ಖಾನ್ 1964 ರಲ್ಲಿ ಸಲ್ಮಾ ಅವರನ್ನು ವಿವಾಹವಾದರು. ಇಬ್ಬರಿಗೆ ಸಲ್ಮಾನ್, ಅರ್ಬಾಜ್, ಸೊಹೈಲ್ ಮತ್ತು ಅಲ್ವಿರಾ ಎಂಬ ನಾಲ್ಕು ಮಕ್ಕಳಿದ್ದಾರೆ. ನಂತರ 1981 ರಲ್ಲಿ ಅವರು ನಟಿ ಹೆಲೆನ್ ಅವರನ್ನು ವಿವಾಹವಾದರು. ಸಲೀಂ ಅವರು ಅರ್ಪಿತಾ ಅವರನ್ನು ದತ್ತು ಪಡೆದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *