
Puneeth Rajkumar Birthday: ಪುನೀತ್ ರಾಜ್ಕುಮಾರ್ ಅವರಿಗೆ ಇಂದು (ಮಾರ್ಚ್ 17) ಜನ್ಮದಿನ. ಅವರು ಇಂದು ಬದುಕಿದ್ದರೆ ಅಭಿಮಾನಿಗಳು ಅದ್ದೂರಿಯಾಗು ಹುಟ್ಟುಹಬ್ಬದ ಆಚರಿಸಿಕೊಳ್ಳುತ್ತಿದ್ದರು. ಅವರು ಇಲ್ಲದೆ ಇರುವುದು ಅಭಿಮಾನಿಗಳಿಗೆ ಸಾಕಷ್ಟು ಬೇಸರ ಇದೆ. ಪುನೀತ್ ರಾಜ್ಕುಮಾರ್ ಅವರು ಕನ್ನಡದ ಕೋಟ್ಯಧಿಪತಿಯಲ್ಲಿ ನಿರೂಪಕರಾಗಿದ್ದರು. ಈ ವೇಳೆ ಅವರು ಹಲವರ ಸಹಾಯಕ್ಕೆ ನಿಂತಿದ್ದರು. ಈ ಬಗ್ಗೆ ಯಾರೊಬ್ಬರಿಗೂ ಅವರು ಹೇಳಿಕೊಳ್ಳುತ್ತಾ ಇರಲಿಲ್ಲ ಎಂಬುದು ವಿಶೇಷ.
ಪುನೀತ್ ರಾಜ್ಕುಮಾರ್ ಅವರು ಕನ್ನಡದ ಕೋಟ್ಯಧಿಪತಿಯಲ್ಲಿ ನಿರೂಪಕರಾದಾಗ ಹಲವು ಜನರಿಗೆ ಸಹಾಯ ಮಾಡಿದ್ದರು. ಕಷ್ಟದಲ್ಲಿದ್ದು ಬಂದ ಅನೇಕರು ಗೆಲುವು ಕಾಣುತ್ತಿರಲಿಲ್ಲ. ಅಂಥವರಿಗೆ ಪುನಿತ್ ಸಹಾಯ ಮಾಡುತ್ತಿದ್ದರಂತೆ. ಆದರೆ, ಈ ಬಗ್ಗೆ ಯಾರೊಬ್ಬರಿಗೂ ಹೇಳದಂತೆ ಅವರು ಕಂಡೀಷನ್ ಹಾಕುತ್ತಿದ್ದಾರೆ. ಇದು ಅವರ ಹೆಚ್ಚುಗಾರಿಕೆ.
ಇನ್ನು, ಅವರ ಕೊನೆಯ ಪ್ರಾಜೆಕ್ಟ್ ‘ಗಂಧದ ಗುಡಿ’ ಸಾಕಷ್ಟು ಗಮನ ಸೆಳೆಯಿತು. ಈ ಪ್ರಾಜೆಕ್ಟ್ ಶೂಟ್ಗಾಗಿ ಅವರು ಉತ್ತರ ಕನ್ನಡ, ಚಾಮರಾಜ ನಗರ ಸೇರಿದಂತೆ ಅನೇಕ ಕಡೆಗಳಲ್ಲಿ ಸುತ್ತಾಟ ನಡೆಸಿದ್ದರು. ಈ ವೇಳೆ ಸೆಟ್ಗೆ ಸಹಾಯಕ್ಕೆ ಬಂದ ಅನೇಕರಿಗೆ ಅವರು ಸಹಾಯ ಮಾಡುತ್ತಿದ್ದರು.
ಪುನೀತ್ ಅವರು 13 ವರ್ಷಗಳ ಕಾಲ ಉಚಿತವಾಗಿ ಕೆಎಂಎಫ್‌ನ ರಾಯಭಾರಿಯಾಗಿದ್ದರು. ಪ್ರವಾಹ, ಕೊವಿಡ್ ಹೀಗೆ ಪ್ರಕೃತಿ ವಿಕೋಪಗಳ ಸಮಯದಲ್ಲಿ ಅಪ್ಪು ಹಣವನ್ನು ಸರ್ಕಾರ ಮತ್ತು ಸಂಬಂಧಪಟ್ಟವರಿಗೆ ನೀಡಿದ ಹಲವು ಉದಾಹರಣೆಗಳು ಇವೆ. ಇದು ಅಚರ ಹೆಚ್ಚುಗಾರಿಕೆ. ‘ಶಿಕ್ಷಣದ ಹಕ್ಕು’ ಜಾಹೀರಾತಿನಲ್ಲಿಯೂ ಸಂಭಾವನೆ ಪಡೆಯದೇ ನಟಿಸಿದ್ದರು. ಡಾ. ರಾಜಕುಮಾರ್ ಟ್ರಸ್ಟ್ ಮೂಲಕ ಹೆಣ್ಣುಮಕ್ಕಳ ಶೇಯೋಭಿವೃದ್ಧಿಗಾಗಿ ಕೆಲಸ ಮಾಡಿದ್ದಾರೆ. ಇನ್ನೂ ಸಾಕಷ್ಟು ಸಹಾಯವನ್ನು ಅವರು ಮಾಡಿದ್ದಾರೆ. ಆದರೆ, ಅನೇಕ ವಿಷಯಗಳು ಹೊರಗೆ ಬಂದಿಲ್ಲ.
ಇದನ್ನೂ ಓದಿ: ಕೇಳಿಬಂದ ಗಂಭೀರ ಆರೋಪಕ್ಕೆ ಸ್ಪಷ್ಟನೆ ಕೊಟ್ಟಿದ್ದ ಪುನೀತ್ ರಾಜ್ಕುಮಾರ್
ಇಂದು ಕುಟುಂಬದವರು ಪುನೀತ್ ಸಮಾಧಿಗೆ ಪೂಜೆ ಸಲ್ಲಿಸಲಿದ್ದಾರೆ. ಇಡೀ ಕುಟುಂಬ ಕಂಠೀರವ ಸ್ಟುಡಿಯೋದಲ್ಲಿರೋ ಸಮಾಧಿ ಬಳಿ ತೆರಳಲಿದೆ. ಅಭಿಮಾನಿಗಳು ಕೂಡ ದೊಡ್ಡ ಸಂಖ್ಯೆಯಲ್ಲಿ ಸೇರಲಿದ್ದಾರೆ ಎನ್ನಲಾಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.