ಮೈಸೂರು, ಫೆಬ್ರವರಿ 19: ಸಿಎಂ ಸಿದ್ದರಾಮಯ್ಯ ಪುತ್ರ, ವಿಧಾನ ಪರಿಷತ್ ಕಾಂಗ್ರೆಸ್ ಸದಸ್ಯ ಡಾ.ಯತೀಂದ್ರ ಕಟೌಟ್ ನಿಲ್ಲಿಸಲು ರಸ್ತೆಯನ್ನೇ ಬ್ಲಾಕ್ ಮಾಡಿದ ಪ್ರಸಂಗವೊಂದು ಸಿಎಂ ಸ್ವಕ್ಷೇತ್ರ ವರುಣಾದಲ್ಲಿ ನಡೆದಿದೆ. ಮೈಸೂರು-ಟಿ ನರಸೀಪುರ ಮುಖ್ಯ ರಸ್ತೆಯ ಎಂಸಿ ಹುಂಡಿ ಬಳಿ ಸುಮಾರು 50 ಅಡಿ ಎತ್ತರದ ಕಟೌಟ್ ಅನ್ನು ಕಾಂಗ್ರೆಸ್ ಕಾರ್ಯಕರ್ತರು ನಿಲ್ಲಿಸುತ್ತಿದ್ದರು. ಈ ಹಿನ್ನೆಲೆ ರಸ್ತೆ ಬ್ಲಾಕ್ ಮಾಡಲಾಗಿದೆ. ಸುಮಾರು 20 ನಿಮಿಷ ವಾಹನಗಳ ಸಂಚಾರಕ್ಕೆ ಅಡ್ಡಿ ಉಂಟಾಗಿದ್ದು, ಈ ವೇಳೆ ಜನ ಆಕ್ರೋಶ ವ್ಯಕ್ತಪಡಿಸಿದರು.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.