ಸಿಎಂ ಸಿದ್ದರಾಮಯ್ಯಗೆ ಬಾಗಲಕೋಟೆ ಸೋಲಿನ ಭಯ ಇದೆ ಎಂದಿದ್ಯಾಕೆ ಶ್ರೀರಾಮುಲು?

ಸಿಎಂ ಸಿದ್ದರಾಮಯ್ಯಗೆ ಬಾಗಲಕೋಟೆ ಸೋಲಿನ ಭಯ ಇದೆ ಎಂದಿದ್ಯಾಕೆ ಶ್ರೀರಾಮುಲು?

ಬಾಗಲಕೋಟೆ, (ಮಾರ್ಚ್ 30): ಕಾಂಗ್ರೆಸ್​​ನ  (Congress) ಎಚ್​​ವೈ ಮೇಟಿ ನಿಧನದಿಂದ ತೆರವಾದ ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆ (Bagalkot By Election) ಇದೇ ಏಪ್ರಿಲ್ 9ರಂದು ನಡೆಯಲಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್​​ನ ನಾಯಕರಿಂದ ಭರ್ಜರಿ ಮತಬೇಟೆ ನಡೆದಿದೆ. ಇನ್ನು ಇಂದಿನಿಂದ (ಮಾರ್ಚ್ 30) ಸಿಎಂ ಸಿದ್ದರಾಮಯ್ಯ ಸಹ ಪ್ರಚಾರಕ್ಕಿಳಿದಿದ್ದು, ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಪರ ಭರ್ಜರಿ ಕ್ಯಾಂಪೇನ್ ನಡೆಸಿದ್ದಾರೆ. ಇನ್ನೊಂದೆಡೆ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಪರವಾಗಿ ಶ್ರೀರಾಮುಲು ಸಹ ಪ್ರಚಾರ ನಡೆಸಿದ್ದು, ಈ ವೇಳೆ ಟಿವಿ9 ಜತೆ ಮಾತನಾಡಿದ ರಾಮುಲು, ಸಿದ್ದರಾಮಯ್ಯ ಬಾದಾಮಿ ಶಾಸಕರಾಗಿದ್ದಾಗ ಅಭಿವೃದ್ಧಿ ಮಾಡಿಲ್ಲ. ಆಗ ಕಳ್ಳ ಮತಗಳಿಂದ ನನ್ನ ವಿರುದ್ಧ ಗೆದ್ದಿದ್ದರು. ಈ ವೇಳೆ ಸಿ.ಎಂ.ಇಬ್ರಾಹಿಂ ಅವರೇ ಹೇಳಿದ್ದಾರೆ.ಸಿಎಂ ಸಿದ್ದರಾಮಯ್ಯಗೆ ಬಾಗಲಕೋಟೆ ಸೋಲಿನ ಭಯ ಇದೆ. ಹೀಗಾಗಿ 5 ದಿನ ಬಾಗಲಕೋಟೆ ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತಿದ್ದಾರೆ.ಸಿದ್ದರಾಮಯ್ಯ ಪ್ರಚಾರ ಮಾಡಿದರೂ ಕಾಂಗ್ರೆಸ್​ ಗೆಲ್ಲುವುದಿಲ್ಲ. ಇಡೀ ಸಚಿವ ಸಂಪುಟ ಸಮೇತ ಬಂದರೂ ಬಿಜೆಪಿ ಗೆಲುವು ಗ್ಯಾರಂಟಿ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *