
ದಾವಣಗೆರೆ, ಏಪ್ರಿಲ್ 04: ಕೆಲಸವಿಲ್ಲದ ಮಂತ್ರಿ ಎಂದು ಸಿಎಂ ಸಿದ್ದರಾಮಯ್ಯ ತಮ್ಮ ಮೇಲೆ ಮಾಡಿದ್ದ ಆರೋಪಕ್ಕೆ ಕೇಂದ್ರ ಸಚಿವ ವಿ.ಸೋಮಣ್ಣ ಕೌಂಟರ್ ನೀಡಿದ್ದಾರೆ. ಚುನಾವಣೆ ಮುಗಿದ ಮೇಲೆ ಸಿದ್ದರಾಮಯ್ಯನವರು ಬಂದು ನಮ್ಮ ಕಚೇರಿಯಲ್ಲಿ 1 ಗಂಟೆ ಇರಲಿ. ನಾನು ಅವರ ಕಚೇರಿಯಲ್ಲಿ ಒಂದು ತಿಂಗಳು ಇರುತ್ತೇನೆ. ಸಿದ್ದರಾಮಯ್ಯನವರು ಹಳೆಯ ಕಾಲದಲ್ಲಿದ್ದಾರೆ ಎಂದು ಟೀಕಿಸಿದ ಸೋಮಣ್ಣ, ತಾಂತ್ರಿಕ ವ್ಯವಸ್ಥೆ ಬಹಳಷ್ಟು ಮುಂದುವರಿದಿದೆ. ರಾಜ್ಯದ ಮುಖ್ಯಮಂತ್ರಿಯಾಗಿ ಮಾತನಾಡುವಾಗ ಅಂಕಿಅಂಶಗಳೊಂದಿಗೆ, ಗಾಂಭೀರ್ಯದಿಂದ ಮಾತನಾಡಬೇಕು ಎಂದಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.