Headlines

ಸಿ.ಜೆ. ರಾಯ್ ಸತ್ತಿದ್ದು​​ ಐಟಿ ಅಧಿಕಾರಿಗಳ ಕಿರುಕುಳದಿಂದಲ್ಲ?: ರಿವೀಲ್​​ ಆಯ್ತು ಅಸಲಿ ಸತ್ಯ – Kannada News | C.J. Roy Death Mystery: No Evidence of IT Harassment; SIT Probes Business Struggles

ಮೃತಪಟ್ಟ ಉದ್ಯಮಿ ಸಿ.ಜೆ.ರಾಯ್Image Credit source: Google

ಬೆಂಗಳೂರು, ಫೆಬ್ರವರಿ 11: ಸಿ.ಜೆ.ರಾಯ್ ಆತ್ಮಹತ್ಯೆ ಪ್ರಕರಣ ವಿಚಾರವಾಗಿ ಬಿಗ್​​ ಅಪ್ಡೇಟ್​​ ಸಿಕ್ಕಿದ್ದು, ಉದ್ಯಮಿ ಸಾವಿಗೆ ಐಟಿ ಅಧಿಕಾರಿಗಳ ಕಿರುಕುಳವೇ ಕಾರಣ ಎಂದು ಆರೋಪಿಸಲಾಗಿತ್ತಾದರೂ ಈ ಬಗ್ಗೆ ಪ್ರಕರಣ ದಾಖಲಿಸುವಷ್ಟು ಸಾಕ್ಷ್ಯಗಳೂ ತನಿಖೆ ವೇಳೆ ಪೊಲೀಸರಿಗೆ ಸಿಕ್ಕಿಲ್ಲ. ಪ್ರಕರಣ ಸಂಬಂಧ ತನಿಖೆಗೆ ಡಿಐಜಿ ಮತ್ತು ಎಸ್​ಪಿ ಹಂತದ ಅಧಿಕಾರಿಗಳನ್ನೊಳಗೊಂಡ ಎಸ್ಐಟಿ ತಂಡ ರಚನೆ ಮಾಡಿ ಬೆಂಗಳೂರು ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಆದೇಶಿಸಿದ್ದರು. ಎಸ್​ಐಟಿ ಇಷ್ಟು ದಿನಗಳ ಕಾಲ ನಡೆಸಿರುವ ತನಿಖೆ ವೇಳೆ FIR ದಾಖಲಿಸು ಅಗತ್ಯವಿರುವ ಕನಿಷ್ಠ ಸಾಕ್ಷ್ಯವೂ ದೊರೆತಿಲ್ಲ ಎನ್ನಲಾಗಿದೆ.

ಅಸಲಿಗೆ ತನಿಖೆ ವೇಳೆ ಸಿ.ಜೆ.ರಾಯ್ ಆತ್ಮಹತ್ಯೆಗೆ ಇಂತಹ ವ್ಯಕ್ತಿ ಅಥವಾ ಸಂಸ್ಥೆ ಪ್ರಚೋದನೆ ನೀಡಿದೆ ಎಂದು ಸಾಭೀತು ಮಾಡಬಹುದಾದ ಯಾವುದೇ ಮಾಹಿತಿ ಸಿಕ್ಕಿಲ್ಲ. ರಾಯ್​​ ಡೈರಿಯಲ್ಲಿಯೂ ಈ ಬಗ್ಗೆ ಯಾವುದೇ ಉಲ್ಲೇಖ ಇಲ್ಲ. ಜೊತೆಗೆ ಉದ್ಯಮಿ ಆತ್ಮಹತ್ಯೆ ಮಾಡಿಕೊಂಡಿರುವ ದಿನದಂದು ಐಟಿ ಅಧಿಕಾರಿಗಳು ಅವರ ವಿಚಾರಣೆಯನ್ನು ನಡೆಸಿಯೇ ಇಲ್ಲ. ಹೀಗಾಗಿ ವಿಚಾರಣೆ ಹೆಸರಲ್ಲಿ ಮಾನಸಿಕ ಒತ್ತಡಕ್ಕೆ ಒಳಗಾಗಿ ರಾಹ್​​ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಹೇಳುವುದೂ ಕಷ್ಟಸಾಧ್ಯ. ಅಲ್ಲದೆ ಹಲವಾರು ಬಾರಿ ಅದಾಗಲೇ ರಾಯ್​​ ಐಟಿ ವಿಚಾರಣೆಯನ್ನೂ ಎದುರಿಸಿದ್ದು, ಹಿಂದೆ ಆ ಸಮಯದಲ್ಲಿ ಅವರು ಯಾವುದೇ ದುಡುಕಿನ ನಿರ್ಧಾರ ಮಾಡಿರಲಿಲ್ಲ. ಹೀಗಾಗಿ ಅತ್ಮಹತ್ಯೆಗೆ ಪ್ರಚೋದನೆಯಾಗಿಲ್ಲ ಎಂಬ ಲೆಕ್ಕಾಚಾರದಲ್ಲಿ ಎಸ್​ಐಟಿ ಇದೆ ಎನ್ನಲಾಗಿದೆ.

ಇದನ್ನೂ ಓದಿ: ಸಿ.ಜೆ ರಾಯ್ ಸಾವಿನ ಹಿಂದಿತ್ತಾ ಬೇರೆಯದೇ ಕಾರಣ? ಆತ್ಮಹತ್ಯೆಯ ಹಿಂದಿನ ದಿನ ನಡೆದಿದ್ದೇನು?

ಉದ್ಯಮಿ ಜೀವ ಪಡೆದಿದ್ದು ವ್ಯವಹಾರ?

ಆದರೆ ಉದ್ಯಮಿಯ ಆತ್ಮಹತ್ಯೆಗೆ ಅಸಲೀ ಕಾರಣ ಏನೆಂದು ಬಯಲು ಮಾಡಬೇಕಾದ ಅನಿವಾರ್ಯತೆ ತನಿಖಾ ತಂಡದ ಮುಂದಿದೆ. ಈ ಹಿನ್ನೆಲೆ ಎಲ್ಲಾ ಆಯಾಮಗಳಲ್ಲಿಯೂ ತನಿಖೆ ಮುಂದುವರಿದಿದೆ. ವ್ಯಾವಹಾರಿಕವಾಗಿ ರಾಯ್​​ ಕುಗ್ಗಿದ್ದ ರಾಯ್​​, ಅದೇ ಕಾರಣಕ್ಕೆ ಪ್ರಾಣ ಕಳೆದುಕೊಂಡಿದ್ದಾರೆ ಎಂಬ ಪ್ರಾಥಮಿಕ ಮಾಹಿತಿ ತನಿಖಾ ತಂಡಕ್ಕೆ ಸಿಕ್ಕಿದೆ ಎನ್ನಲಾಗಿದೆ.
ಹೀಗಾಗಿ ರಾಯ್ ವ್ಯವಹಾರ, ಲಾಭ ಹಾಗೂ ನಷ್ಟದ ವಿಚಾರವಾಗಿ ಅಧಿಕಾರಿಗಳು ಪರಿಶೀಲನೆಗೆ ಮುಂದಾಗಿದ್ದಾರೆ. ಆದ್ರೆ ಇದುವರೆಗೆ ಜಪ್ತಿ ಮಾಡಿರುವ ದಾಖಲೆಗಳ ಬಗ್ಗೆ ಐಟಿ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡುತ್ತಿಲ್ಲವಂತೆ. ಹೀಗಾಗಿ ಉದ್ಯಮಿ ಸಿ.ಜೆ. ರಾಯ್ ಆತ್ಮಹತ್ಯೆ ಪ್ರಕರಣವನ್ನ ಯುಡಿಆರ್ ಆಗಿಯೇ ಪರಿಗಣಿಸಿ ತನಿಖೆ ನಡೆಸಲಾಗುತ್ತಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 6:32 pm, Wed, 11 February 26

Source link

Leave a Reply

Your email address will not be published. Required fields are marked *