ವಾಷಿಂಗ್ಟನ್, ಫೆಬ್ರವರಿ 21: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಕ್ಷಣವೇ ಜಾರಿಗೆ ಬರುವಂತೆ ಜಾಗತಿಕ ಸುಂಕವನ್ನು ಶೇ. 10ರಿಂದ ಶೇ. 15ಕ್ಕೆ ಹೆಚ್ಚಿಸುವುದಾಗಿ ಘೋಷಿಸಿದ್ದಾರೆ. ಡೊನಾಲ್ಡ್ ಟ್ರಂಪ್ ವಿಧಿಸಿದ್ದ ಸುಂಕವನ್ನು ಅಮೆರಿಕದ ಸುಪ್ರೀಂ ಕೋರ್ಟ್ ರದ್ದುಗೊಳಿಸಿದ ಬೆನ್ನಲ್ಲೇ ಇಂದು ಮತ್ತೆ ಟ್ರಂಪ್ ಹೊಸ ಸುಂಕ ಘೋಷಣೆ ಮಾಡಿದ್ದಾರೆ. “ನಾನು, ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕದ ಅಧ್ಯಕ್ಷನಾಗಿ, ತಕ್ಷಣವೇ ಜಾರಿಗೆ ಬರುವಂತೆ ಜಗತ್ತಿನ ಎಲ್ಲ ದೇಶಗಳ ಮೇಲಿನ ಶೇ. 10ರಷ್ಟು ಸುಂಕವನ್ನು ಕಾನೂನುಬದ್ಧವಾಗಿಯೇ ಶೇ. 15ಕ್ಕೆ ಹೆಚ್ಚಿಸಿದ್ದೇನೆ” ಎಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ಟ್ರಂಪ್ ಘೋಷಣೆ ಮಾಡಿದ್ದಾರೆ.
Published On – 10:28 pm, Sat, 21 February 26