
ಬೆಂಗಳೂರು, ಏಪ್ರಿಲ್ 02: ಹಣಕಾಸಿನ ವಿಚಾರಕ್ಕೆ ಪತ್ನಿ ಮತ್ತು ಗಂಡನ ನಡುವೆ ಆರಂಭವಾದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬೆಂಗಳೂರಿನ (Bengaluru) ಪೀಣ್ಯಾ ಪೊಲೀಸ್ ಠಾಣಾ ವ್ಯಾಪ್ತಿಯ ನಾಗಸಂದ್ರದಲ್ಲಿ ನಡೆದಿದೆ. ಕಾವ್ಯಾ (34) ಮೃತಳಾಗಿದ್ದು, ಹೆಂಡ್ತಿ ಕುತ್ತಿಗೆ ಮೇಲೆ ಕಾಲಿಟ್ಟು ತುಳಿದು ಪತಿ ದರಿಯಪ್ಪ ಎಂಬಾತ ಹತ್ಯೆ ಮಾಡಿದ್ದಾನೆ. ಹಣಕಾಸಿನ ವಿಚಾರಕ್ಕೆ ದಂಪತಿ ನಡುವೆ ಒಂದು ವಾರದಿಂದ ಗಲಾಟೆ ನಡೆಯುತ್ತಿತ್ತು. ನಿನ್ನೆ ಎರಡು ಲಕ್ಷ ಹಣವನ್ನು ಮನೆಯಲ್ಲಿ ತಂದು ಗಂಡ ದರಿಯಪ್ಪಇಟ್ಟಿದ್ದ. ಆ ಹಣವನ್ನು ತನ್ನ ಅಣ್ಣನಿಗೆ ಕೊಡೋದಾಗಿ ಪತ್ನಿ ಗಲಾಟೆ ಮಾಡಿದ್ದು, ಇದೇ ವಿಚಾರಕ್ಕೆ ಕೊಲೆ ನಡೆದಿದೆ.
ಬೆಳಗಾಂ ಮೂಲದವರಾಗಿದ್ದ ದಂಪತಿಗೆ ಇಬ್ಬರು ಮಕ್ಕಳಿದ್ದು, ಸದಾ ಆಸ್ತಿ ಮತ್ತು ಹಣಕಾಸಿನ ವಿಚಾರಕ್ಕೆ ಗಲಾಟೆ ಮಾಡಿಕೊಳ್ಳುತ್ತಿದ್ದರು. ದರಿಯಪ್ಪ ನಗರದಲ್ಲಿ ಗುತ್ತಿಗೆ ಕೆಲಸ ಮಾಡ್ತಿದ್ದ ಎನ್ನಲಾಗಿದೆ ಘಟನಾ ಸ್ಥಳಕ್ಕೆ ಪೀಣ್ಯ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಈ ನಡುವೆ ದರಿಯಪ್ಪ ಸ್ನೇಹಿತ ವೆಂಕಟಾಚಲಯ್ಯ ಸ್ಫೋಟಕ ಆರೋಪ ಮಾಡಿದ್ದು, ಆತನಿಗೆ ಹುಡುಗಿಯರ ಶೋಕಿ ವಿಪರೀತವಾಗಿತ್ತು. ಬೇರೆ ಹೆಣ್ಣುಮಕ್ಕಳ ಜೊತೆ ಇರುವ ಫೋಟೊವನ್ನ ತನ್ನ ಹೆಂಡತಿಗೇ ತೋರಿಸುತ್ತಿದ್ದ. ಇದರಿಂದಾಗಿ ಕಾವ್ಯಾ ಸಾಕಷ್ಟು ನೊಂದಿದ್ದರು. ಇದೇ ವಿಚಾರವಾಗಿ ನಾನು ಹಲವು ಬಾರಿ ರಾಜಿ ಮಾಡಿಸಿದ್ದೆ. ನಂತರ ಇತ್ತೀಚೆಗೆ ಮನೆ ಖಾಲಿ ಮಾಡಿ ಇಲ್ಲಿಗೆ ಬಂದು, ನಮ್ಮ ಸಂಪರ್ಕ ತಪ್ಪಿಸಿದ್ದ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಪ್ರಾಧ್ಯಾಪಕನ ಜತೆ ಸಂಬಂಧ ಕಲ್ಪಿಸಿ ಅಪಪ್ರಚಾರ; ಆತ್ಮಹತ್ಯೆಗೂ ಮುನ್ನ ವಿದ್ಯಾರ್ಥಿನಿ ಬರೆದ ಡೆತ್ನೋಟ್ನಲ್ಲಿ ಸ್ಫೋಟಕ ಮಾಹಿತಿ
ವಿದ್ಯುತ್ ಶಾಕ್ ತಗುಲಿ ಮಹಿಳೆ ದುರ್ಮರಣ
ಮನೆಯಲ್ಲಿ ನೀರು ಕಾಯಿಸುವಾಗ ವಿದ್ಯುತ್ ಸ್ಪರ್ಶಿಸಿ ಗೃಹಿಣಿಯೋರ್ವಳು ದಾರುಣವಾಗಿ ಮೃತಪಟ್ಟಿರುವ ಘಟನೆ ಧಾರವಾಡ ತಾಲೂಕಿನ ದೇವರ ಹುಬ್ಬಳ್ಳಿ ಗ್ರಾಮದಲ್ಲಿ ನಡೆದಿದೆ. ನಿವೇದಿತಾ ನಾಯ್ಕರ್(24) ಮೃತರಾಗಿದ್ದು, ಬಕೆಟ್ನಲ್ಲಿ ಕ್ವಾಯಿಲ್ ಮೂಲಕ ಕಾಯಿಸಲು ಇಟ್ಟ ನೀರಿನ ಬಕೆಟ್ನ ಆಕಸ್ಮಿಕವಾಗಿ ಮುಟ್ಟಿದ ಕಾರಣ ವಿದ್ಯುತ್ ಶಾಕ್ ತಗುಲು ಪ್ರಾಣ ಬಿಟ್ಟಿದ್ದಾರೆ, ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.