Headlines

ಹಣ್ಣುಗಳಿಗೆ ಇಲಿ ಪಾಷಾಣ ಸವರುತ್ತಿದ್ದ ವೇಳೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ವ್ಯಾಪಾರಿ – Kannada News | Food Safety Crisis: Malad Vendor Poisons Fruits with Ratol; Public Outrage in Mumbai

ಮುಂಬೈ: ಮುಂಬೈನ ಮಾಲಾಡ್ ಪ್ರದೇಶದಲ್ಲಿ ನಡುರಸ್ತೆಯಲ್ಲೇ ಹಣ್ಣುಗಳ ವ್ಯಾಪಾರಿಯೊಬ್ಬರು ಹಣ್ಣುಗಳಿಗೆ ‘ರಾಟೋಲ್’ (Ratol) ಎಂಬ ಇಲಿ ಪಾಷಾಣವನ್ನು ಸವರುತ್ತಿದ್ದ ದೃಶ್ಯವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಈ ಕೃತ್ಯವನ್ನು ಗಮನಿಸಿದ ಸಾರ್ವಜನಿಕರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವ್ಯಾಪಾರಿಯು ತನ್ನ ಹಣ್ಣಿನ ತಳ್ಳುಗಾಡಿಯ ಮೇಲೆ ಹಣ್ಣುಗಳನ್ನು ಜೋಡಿಸುವ ಮೊದಲು ಅವುಗಳಿಗೆ ಇಲಿ ಪಾಷಾಣವನ್ನು ಹಚ್ಚುತ್ತಿರುವುದು ಕಂಡುಬಂದಿದೆ. ಸಾಮಾನ್ಯವಾಗಿ ಹಣ್ಣುಗಳಿಗೆ ಇಲಿಗಳು ಬರದಂತೆ ತಡೆಯಲು ಇಂತಹ ಅಪಾಯಕಾರಿ ಕೆಲಸ ಮಾಡುತ್ತಿರಬಹುದು ಎಂದು ಶಂಕಿಸಲಾಗಿದೆ. ಆದರೆ, ಮನುಷ್ಯರು ಸೇವಿಸುವ ಹಣ್ಣುಗಳ ಮೇಲೆ ಇಂತಹ ವಿಷಕಾರಿ ರಾಸಾಯನಿಕ ಬಳಸುವುದು ಕ್ರಿಮಿನಲ್ ಅಪರಾಧವಾಗಿದೆ.

ವಿಡಿಯೋದಲ್ಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *