ಜೀವನದಲ್ಲಿ ಯಶಸ್ಸನ್ನು ಸಾಧಿಸಬೇಕು, ಶ್ರೀಮಂತಿಕೆಯನ್ನು (richness) ಗಳಿಸಬೇಕು ಎಂದು ಪ್ರತಿಯೊಬ್ಬರೂ ಕನಸು ಕಾಣುತ್ತಾರೆ. ಆದರೆ ಈ ಕನಸನ್ನು ನನಸಾಗಿಸುವುದು ಅಷ್ಟು ಸುಲಭದ ಮಾತಲ್ಲ. ಹಲವರಿಗೆ ಹಣ, ಶ್ರೀಮಂತಿಕೆಯನ್ನು ಗಳಿಸಲು ಏನು ಮಾಡಬೇಕು ಎಂಬುದರ ಬಗ್ಗೆಯೂ ತಿಳಿದಿಲ್ಲ. ಹೀಗಿರುವಾಗ ಶ್ರೀಮಂತ ವ್ಯಕ್ತಿಗಳು ಪಾಲಿಸುವಂತಹ ಈ ಒಂದಷ್ಟು ಅಭ್ಯಾಸಗಳನ್ನು ನೀವು ಸಹ ಪಾಲಿಸುವ ಮೂಲಕ ಜೀವನದಲ್ಲಿ ಶ್ರೀಮಂತಿಕೆಯನ್ನು ಗಳಿಸಬಹುದು. ಶ್ರೀಮಂತರ ಆ ರಹಸ್ಯ ಅಭ್ಯಾಸಗಳು ಯಾವುವು ಎಂಬ ಮಾಹಿತಿ ಇಲ್ಲಿದೆ.
ಶ್ರೀಮಂತಿಕೆಯನ್ನು ಗಳಿಸಲು ನೀವು ಪಾಲಿಸಬೇಕಾದ ಅಭ್ಯಾಸಗಳಿವು:
ಹಣದ ಮೌಲ್ಯವನ್ನು ಕಲಿಯಿರಿ: ಹೆಚ್ಚಿನ ಜನರು ಹಣ ಗಳಿಸಿದ ಹಣವನ್ನು ತಕ್ಷಣ ಖರ್ಚು ಮಾಡಲು ಪ್ರಾರಂಭಿಸುತ್ತಾರೆ. ಈ ರೀತಿ ಮಾಡಿದರೆ ಖಂಡಿತವಾಗಿಯೂ ಉಳಿತಾಯ ಮಾಡಲು ಸಾಧ್ಯವಾಗುವುದಿಲ್ಲ ಹಾಗಾಗಿ ಹಣದ ಮೌಲ್ಯವನ್ನು ಕಲಿಯಿರಿ. ನಿಮ್ಮ ಸಂಬಳವನ್ನು ಯಾವಾಗಲೂ 4 ಭಾಗಗಳಾಗಿ ವಿಂಗಡಿಸಿ – ಅಗತ್ಯ ವೆಚ್ಚಗಳು, ತುರ್ತು ನಿಧಿ, ಹೂಡಿಕೆ ಮತ್ತು ಮನರಂಜನೆ. ನೀವು ಅಗತ್ಯ ವೆಚ್ಚಗಳನ್ನು ಕಡಿಮೆ ಮಾಡಲು ಸಾಧ್ಯವಿಲ್ಲ, ಆದರೆ ಮನರಂಜನೆಯ ವೆಚ್ಚವನ್ನು ಆದಷ್ಟು ಕಡಿಮೆ ಮಾಡಲು ಪ್ರಯತ್ನಿಸಿ. ಈ ಅಭ್ಯಾಸ ಹಣ ಉಳಿತಾಯಕ್ಕೆ ಸಹಾಯವಾಗಲಿದೆ.
ಕಲಿಕೆಯ ಕೌಶಲ್ಯಗಳು ಅತ್ಯಗತ್ಯ: ಕೇವಲ ಒಂದು ಕೆಲಸ ಮಾಡುವುದರಿಂದ ಯಾರೂ ಶ್ರೀಮಂತರಾಗಲು ಸಾಧ್ಯವಿಲ್ಲ. ನೀವು ಶ್ರೀಮಂತರಾಗಲು ಬಯಸಿದರೆ, ಯಾವಾಗಲೂ ಹೊಸ ಕೌಶಲ್ಯಗಳನ್ನು ಕಲಿಯಿರಿ ಮತ್ತು ಬಹು ಆದಾಯದ ಮೂಲಗಳನ್ನು ಸೃಷ್ಟಿಸಿ. ಉದಾಹರಣೆಗೆ, ನೀವು ವ್ಯವಹಾರವನ್ನು ಪ್ರಾರಂಭಿಸಬಹುದು ಅಥವಾ ಸ್ವಯಂ ಉದ್ಯೋಗಿಯಾಗಬಹುದು. ಹೀಗೆ ಬಹು ಮೂಲಗಳಿಂದ ಹಣ ಸಂಪಾದಣೆ ಮಾಡುವುದರಿಂದ ಶ್ರೀಮಂತಿಕೆಯನ್ನು ಗಳಿಸಬಹುದು.
ಓದುವ ಅಭ್ಯಾಸವನ್ನು ಬೆಳೆಸಿಕೊಳ್ಳಿ: ಪುಸ್ತಕಗಳು ಒಬ್ಬ ವ್ಯಕ್ತಿಯ ಅತ್ಯುತ್ತಮ ಸ್ನೇಹಿತ. ನೀವು ಹೆಚ್ಚು ಪುಸ್ತಕಗಳನ್ನು ಓದಿದಷ್ಟು, ನೀವು ಹೆಚ್ಚು ಜ್ಞಾನವನ್ನು ಪಡೆಯುತ್ತೀರಿ. ಶ್ರೀಮಂತರಾಗಲು, ಹಣಕಾಸು ಮತ್ತು ಜೀವನದ ಕುರಿತಾದ ಪುಸ್ತಕಗಳನ್ನು ಓದಿ. ಪ್ರತಿದಿನ ಮಲಗುವ ಮುನ್ನ ಪುಸ್ತಕದ ಒಂದು ಪುಟವನ್ನು ಓದುವುದನ್ನು ರೂಢಿಸಿಕೊಳ್ಳಿ. ನಿಮ್ಮೊಂದಿಗೆ ಒಂದು ಡೈರಿ ಮತ್ತು ಪೆನ್ನು ಇಟ್ಟುಕೊಳ್ಳಿ. ನೀವು ಪ್ರತಿದಿನ ಕಲಿಯುವ ಹೊಸ ವಿಷಯಗಳನ್ನು ಬರೆಯಿರಿ. ಅಲ್ಲದೆ, ಯಾವುದೇ ಹೊರೆಗಳು ನಿಮ್ಮನ್ನು ಆವರಿಸದಂತೆ ನಿಮ್ಮ ಆಲೋಚನೆಗಳನ್ನು ಅದರಲ್ಲಿ ಬರೆಯಿರಿ.
ಇದನ್ನೂ ಓದಿ: ಯೌವನದಲ್ಲಿ ಈ ಕೆಲಸಗಳನ್ನು ಮಾಡಿದರೆ ವೃದ್ಧಾಪ್ಯವು ಸಂತೋಷದಿಂದಿರುವುದು
ವ್ಯಾಯಾಮ ಮಾಡಿ: ಶ್ರೀಮಂತರು ಬೆಳಕ್ಕೆ ಬೇಗನೆ ಎದ್ದು ತಮ್ಮ ಆರೋಗ್ಯಕ್ಕೆ ಸಮಯ ಮೀಸಲಿಡುತ್ತಾರೆ. ಅದೇ ರೀತಿ ನೀವು ಸಹ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ನಿಮಗಾಗಿ ಸ್ವಲ್ಪ ಸಮಯವನ್ನು ಮೀಸಲಿಡಿ. ಪ್ರತಿದಿನ ಬೆಳಿಗ್ಗೆ 5 ಗಂಟೆಗೆ ಎದ್ದು ವ್ಯಾಯಾಮ, ವಾಕಿಂಗ್, ಜಾಗಿಂಗ್, ಯೋಗ ಮತ್ತು ಧ್ಯಾನ ಮಾಡಿ. ನೀವು ಕ್ರೀಡೆಗಳನ್ನು ಆನಂದಿಸುತ್ತಿದ್ದರೆ, ಅವುಗಳನ್ನು ಆಡಿ. ಹೀಗೆ ಪ್ರತಿದಿನ 40 ರಿಂದ 2 ಗಂಟೆಗಳ ಕಾಲ ನಿಮಗಾಗಿ ಸಮಯ ಮೀಸಲಿಡಿ. ಇದು ಒತ್ತಡವನ್ನು ಕಡಿಮೆ ಮಾಡುತ್ತದೆ, ಉತ್ಪಾದಕತೆ ಮತ್ತು ಸೃಜನಶೀಲತೆಯನ್ನು ಹೆಚ್ಚಿಸುತ್ತದೆ,
ಹಣವನ್ನು ಸರಿಯಾಗಿ ಹೂಡಿಕೆ ಮಾಡಿ: ಶ್ರೀಮಂತರು ಯಾವಾಗಲೂ ಸ್ಮಾರ್ಟ್ ಹೂಡಿಕೆಯಲ್ಲಿ ನಂಬಿಕೆ ಇಡುತ್ತಾರೆ. ಅವರು ಎಂದಿಗೂ ತಮ್ಮ ಹಣವನ್ನು ಉಳಿತಾಯ ಖಾತೆಗಳಲ್ಲಿ ಸಂಗ್ರಹಿಸುವುದಿಲ್ಲ. ಅವರು ಷೇರುಗಳು, ಮ್ಯೂಚುವಲ್ ಫಂಡ್ಗಳು ಮತ್ತು ರಿಯಲ್ ಎಸ್ಟೇಟ್ನಲ್ಲಿ ಹೂಡಿಕೆ ಮಾಡುತ್ತಾರೆ. ಅವರು ಮತ್ತು ಅವರ ಕುಟುಂಬಗಳು ಆರ್ಥಿಕ ಸಂಕಷ್ಟವನ್ನು ಎದುರಿಸದಂತೆ ನೋಡಿಕೊಳ್ಳಲು ಅವರು ಯಾವಾಗಲೂ ವೈದ್ಯಕೀಯ ಸೇರಿದಂತೆ ಇನ್ನಿತರ ವಿಮೆಗಳನ್ನು ಸಹ ಹೊಂದಿರುತ್ತಾರೆ. ಅದೇ ರೀತಿ ನೀವು ಕೂಡ ಉಳಿತಾಯ ಖಾತೆಯಲ್ಲಿ ಹಣ ಸಂಗ್ರಹಿಸಿಡುವ ಬದಲು ಸರಿಯಾದ ಜಾಗದಲ್ಲಿ ಹಣವನ್ನು ಹೂಡಿಕೆ ಮಾಡಲು ಕಲಿಯಿರಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ