ಹತ್ತೇ ದಿನದಲ್ಲಿ ‘KGF 2’ ಲೈಫ್​​ ಟೈಮ್ ಕಲೆಕ್ಷನ್ ಬ್ರೇಕ್ ಮಾಡಲಿದೆ ‘ಧುರಂಧರ್ 2’

ಹತ್ತೇ ದಿನದಲ್ಲಿ ‘KGF 2’ ಲೈಫ್​​ ಟೈಮ್ ಕಲೆಕ್ಷನ್ ಬ್ರೇಕ್ ಮಾಡಲಿದೆ ‘ಧುರಂಧರ್ 2’

‘ಧುರಂಧರ್ 2’ ಸಿನಿಮಾ (Dhurandhar 2 Movie) ಬಾಕ್ಸ್ ಆಫೀಸ್​​​ನಲ್ಲಿ ಅಬ್ಬರಿಸುತ್ತಿದೆ. ಈ ಚಿತ್ರದ ಕಲೆಕ್ಷನ್ ದಿನ ಕಳೆದಂತೆ ಹೆಚ್ಚುತ್ತಲೇ ಇದೆ. ಈ ಸಿನಿಮಾ ಒಂದೇ ವಾರಕ್ಕೆ ಸಾವಿರ ಕೋಟಿ ರೂಪಾಯಿ ಗಳಿಕೆ ಮಾಡಿದೆ. ಇನ್ನು 10 ದಿನಕ್ಕೆ ‘ಕೆಜಿಎಫ್ 2’ ಲೈಫ್​​ಟೈಮ್ ದಾಖಲೆಯನ್ನು ಬ್ರೇಕ್ ಮಾಡುವ ಎಲ್ಲಾ ಸೂಚನೆ ಸಿಕ್ಕಿದೆ. ಹೀಗೆಯೇ ಗಳಿಕೆ ಮುಂದುವರಿದರೆ ಸಿನಿಮಾ ಮತ್ತಷ್ಟು ದಾಖಲೆಗಳನ್ನು ಬ್ರೇಕ್ ಮಾಡುವ ಸಾಧ್ಯತೆ ಇದೆ.

‘ಧುರಂಧರ್ 2’ ಸಿನಿಮಾದಲ್ಲಿ ರಣವೀರ್ ಸಿಂಗ್ ನಟಿಸಿದ್ದಾರೆ. ಈ ಚಿತ್ರದಲ್ಲಿ ಸಾರಾ ಅರ್ಜುನ್, ಸಂಜಯ್ ದತ್, ಅರ್ಜುನ್ ರಾಮ್​ ಪಾಲ್ ಮೊದಲಾದವರು ಬಣ್ಣ ಹಚ್ಚಿದ್ದಾರೆ. ಈ ಸಿನಿಮಾ ವಿಶ್ವ ಮಟ್ಟದಲ್ಲಿ 1,128 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಇಂದು ಚಿತ್ರದ ಕಲೆಕ್ಷನ್ 100 ಕೋಟಿ ರೂಪಾಯಿ ದಾಟಲಿದೆ. ಹಾಗಾದಲ್ಲಿ ‘ಕೆಜಿಎಫ್ 2’ ದಾಖಲೆಯನ್ನು ಈ ಸಿನಿಮಾ 10 ದಿನದಲ್ಲಿ ಬ್ರೇಕ್ ಮಾಡಿದಂತೆ ಆಗಲಿದೆ.

ಯಶ್​ ನಟನೆಯ ‘ಕೆಜಿಎಫ್ 2’ ಸಿನಿಮಾ 2022ರಲ್ಲಿ ರಿಲೀಸ್ ಆಯಿತು. ಈ ಸಿನಿಮಾ ಬಾಕ್ಸ್ ಆಫೀಸ್​​​ನಲ್ಲಿ 1200 ಕೋಟಿ ರೂಪಾಯಿ ಬಾಚಿಕೊಂಡಿತ್ತು. ಬಾಲಿವುಡ್​​ನಲ್ಲೂ ಈ ಸಿನಿಮಾ ಹಲವು ದಾಖಲೆಗಳನ್ನು ಬರೆದಿತ್ತು. ಈಗ ಆ ದಾಖಲೆ ಕೇವಲ 10 ದಿನದಲ್ಲಿ ‘ಧುರಂಧರ್ 2’ ಉಡೀಸ್ ಮಾಡಿದೆ.

ಇದನ್ನೂ ಓದಿ: ನಮಗೆ ರಸ್ತೆ ಇಲ್ಲ, 500 ಕೋಟಿ ರೂ. ಕೊಡಿ: ‘ಧುರಂಧರ್ 2’ ತಂಡಕ್ಕೆ ಪಾಕಿಸ್ತಾನಿಗಳ ಮನವಿ

‘ಧುರಂಧರ್ 2’ ಸಿನಿಮಾ ಇಷ್ಟು ಅಬ್ಬರದ ಕಲೆಕ್ಷನ್ ಮಾಡಲು ಚಿತ್ರದ ಟಿಕೆಟ್ ಬೆಲೆ ಕೂಡ ಕಾರಣ. ಹೌದು, ಸಿನಿಮಾ ಟಿಕೆಟ್ ದರವನ್ನು ತಂಡದವರು ಬೇಕಾಬಿಟ್ಟಿ ಏರಿಕೆ ಮಾಡಿದ್ದಾರೆ. ಕರ್ನಾಟಕದಲ್ಲಂತೂ ಮಲ್ಟಿಪ್ಲೆಕ್ಸ್​​ಗಳಲ್ಲಿ 400 ರೂಪಾಯಿಯಿಂದ ಟಿಕೆಟ್ ದರ ಆರಂಭ ಆಗುತ್ತದೆ. ಇದು ಚಿತ್ರಕ್ಕೆ ಲಾಭ ತಂದಿದೆ. ಈ ಸಿನಿಮಾದಿಂದ ಜಿಯೋ ಪ್ರೊಡಕ್ಷನ್ಸ್ ದೊಡ್ಡ ಲಾಭ ಕಾಣುತ್ತಿದೆ. ಈ ಗಳಿಕೆ ಇನ್ನೂ ಕೆಲವು ವಾರ ಮುಂದುವರಿಯುವ ನಿರೀಕ್ಷೆ ಇದೆ. ಈ ಚಿತ್ರದ ಒಟ್ಟಾರೆ ಕಲೆಕ್ಷನ್ 2000 ಸಾವಿರ ಕೋಟಿ ರೂಪಾಯಿ ದಾಟುವ ನಿರೀಕ್ಷೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Source link

Leave a Reply

Your email address will not be published. Required fields are marked *