Headlines

ಹರ್ ಘರ್ ಜಲ್ ಯೋಜನೆ ಹಳ್ಳ ಹಿಡಿಸಿದ ಅಧಿಕಾರಿಗಳು: ಕಾಮಗಾರಿ ಮುಗಿಸಿ 5 ವರ್ಷವಾದ್ರೂ ಬಾರದ ನೀರು – Kannada News | Haveri’s Har Ghar Jal Failure: Neshvi Villagers Lack Water Despite 50 Lakh Scheme

ಹಾವೇರಿ, ಫೆಬ್ರವರಿ 16: ಗ್ರಾಮೀಣ ಭಾಗದ ಊರುಗಳಲ್ಲಿ ಮನೆ ಮನೆಗೆ ಕುಡಿಯುವ ನೀರು (water) ಕೊಡುವ ಉದ್ದೇಶದಿಂದ ಹರ್ ಘರ್ ಜಲ್ ಯೋಜನೆಯನ್ನ (Har Ghar Jal project) ಜಾರಿಗೆ ತಂದಿದೆ. ಆದರೆ ಕೋಟ್ಯಂತರ ರೂ ವೆಚ್ಚದಲ್ಲಿ ಮಾಡಿದ ಯೋಜನೆ ಸದ್ಯ ಹಳ್ಳ ಹಿಡಿದು ಹೋಗಿದೆ. ಕಾಮಗಾರಿ ಮಾಡಿ ಐದು ವರ್ಷ ಕಳೆದರೂ ಮನೆಗೆ ನೀರು ಬರುತ್ತಿಲ್ಲ. ಸಾರ್ವಜನಿಕ ನಳದಲ್ಲಿ ನೀರು ಹಿಡಿಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲ್ಲೂಕಿನ ನೆಶ್ವಿ ಗ್ರಾಮದಲ್ಲಿ ಸುಮಾರು 50 ಲಕ್ಷ ರೂ ವೆಚ್ಚದಲ್ಲಿ ಮನೆ ಮನೆಗೆ ಗಂಗೆ ಯೋಜನೆಯನ್ನ ಜಾರಿಗೊಳಿಸಲಾಗಿದೆ. ಗ್ರಾಮದ 600ಕ್ಕೂ ಅಧಿಕ ಮನೆಗಳಿಗೆ ಜಲಜೀವನ್ ಮಿಷನ್ ನಳಗಳನ್ನ ಹಾಕಲಾಗಿದೆ. ಆದರೆ ಈಗ ಮನೆಗಳಿಗೆ ನೀರು ಬರುತ್ತಿಲ್ಲ. ಸಾರ್ವಜನಿಕ ನಳಗಳಲ್ಲಿ ನೀರು ತುಂಬುವ ಪರಸ್ಥಿತಿ ಬಂದಿದೆ. ಇನ್ನೂ ಕೆಲವು ಜನಪ್ರತಿನಿಧಿಗಳ ಮನೆಗಳ ಮುಂದೆ ನಳಗಳು‌ ಇವೆ.‌ ಜನರು ಮಾತ್ರ ನೀರು ತರಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಹಾವೇರಿಯಲ್ಲಿ ಕಾಂಗ್ರೆಸ್​​ ಸಾಧನಾ ಸಮಾವೇಶ: 1000 ದಿನಗಳ ಸಂಭ್ರಮ; ಒಂದು ಲಕ್ಷ ಕುಟುಂಬಗಳಿಗೆ ಭೂಗ್ಯಾರಂಟಿ

ನೆಶ್ವಿ ಗ್ರಾಮದಲ್ಲಿ ಗುತ್ತಿಗೆದಾರ ಕೆಲಸ ಮಾಡಿ ಐದು ವರ್ಷ ಕಳೆದಿದೆ. ಅಲ್ಲದೆ ಗ್ರಾಮ ಪಂಚಾಯತಿಯಿಂದ ಎನ್​ಓಸಿ ಸಹ ನೀಡಲಾಗಿದೆ. ನೀರು ಬಾರದೆ ಹೇಗೆ ಎನ್​ಓಸಿ ಕೊಟ್ಟಿದ್ದಾರೆ. 50 ರಿಂದ 100 ಕುಟುಂಬಗಳ ನಡುವೆ ಒಂದು ಸಾರ್ವಜನಿಕ ನಳ ಇದ್ದು, ಅದರಲ್ಲಿ ಒಂದು ಗಂಟೆಗಳ ಕಾಲ ನೀರು ಹಿಡಿಯುವ ಪರಸ್ಥಿತಿ ಬಂದಿದೆ. ಅಲ್ಲದೇ ಮನೆ ಮನೆಗೆ ಅಳವಡಿಸಿರುವ ನಳಗಳು ತಕ್ಕು ಹಿಡಿದು ಹಾಳಾಗುತ್ತಿವೆ. ಗುತ್ತಿಗೆದಾರ ನಮ್ಮ ಕೆಲಸ ಮುಗಿದಿದೆ. ನಮ್ಮದು ಏನೋ ಇಲ್ಲ ಅಂತಾರೆ. ಈಗ ಅಧಿಕಾರಿಗಳು ಮಾತ್ರ ಇವತ್ತು, ನಾಳೆ ಅಂದು ಜನರನ್ನ ಓಡಿಸುತ್ತಾರೆ. ಗುತ್ತಿಗೆದಾರ ಮತ್ತು ಪಿಡಿಓ ಸೇವೆ ಗ್ರಾಮ ಪಂಚಾಯತಿ ಸದಸ್ಯರ ಹೊಂದಾಣಿಕೆಯಿಂದ ನೀರು ಬರುತ್ತಿಲ್ಲ. ಸರ್ಕಾರದ ಕೋಟ್ಯಂತರ ರೂ ಹಾಳು ಮಾಡಿದ್ದಾರೆ ಎಂದು ಸ್ಥಳೀಯರಾದ ಚನ್ನಬಸಪ್ಪ ಎಂಬುವವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಹಾವೇರಿ: ಶಾಲೆ ಆವರಣದಲ್ಲೇ ಪುಂಡರಂತೆ ಹೊಡೆದಾಡಿಕೊಂಡ ಅತಿಥಿ ಶಿಕ್ಷಕ, ಎಸ್‌ಡಿಎಂಸಿ ಅಧ್ಯಕ್ಷ, ವಿಡಿಯೋ ವೈರಲ್

ಒಟ್ಟಿನಲ್ಲಿ ಸರ್ಕಾರದ ಗ್ರಾಮೀಣ ಪ್ರದೇಶಗಳಲ್ಲಿ ಜನರಿಗೆ ಕುಡಿಯುವ ನೀರು ಮನೆಮನೆಗೂ ಬರಲಿ ಅನ್ನೋ ಉದ್ದೇಶದಿಂದ ಮಾಡಿದ್ದಾರೆ. ಅದರೆ ಈಗ ಪಿಡಿಓ ಮತ್ತು ಅಧಿಕಾರಿಗಳ ಯಡವಟ್ಟಿನಿಂದ ನೀರು ಬಾರದೇ ಜನರು ಪರದಾಡುತ್ತಿದ್ದಾರೆ. ಇನ್ನಾದರೂ ಅಧಿಕಾರಿಗಳು ಎಚ್ಚತ್ತುಕೊಂಡು ಗುತ್ತಿಗೆದಾರ ವಿರುದ್ಧ ಕ್ರಮ ತೆಗೆದುಕೊಂಡು ನೀರು ಹರಿಸುವ ಕೆಲಸ ಮಾಡಬೇಕಿದೆ.

ವರದಿ: ಅಣ್ಣಪ್ಪ ಬಾರ್ಕಿ ಟಿವಿ 9 ಹಾವೇರಿ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *