Headlines

ಹಾರರ್ ಪ್ರಿಯರಿಗೆ ಸವಾಲು; ನೈಜ ಘಟನೆ ಆಧರಿಸಿದ ಈ ಸರಣಿ ನೋಡಲು ಎರಡು ಗುಂಡಿಗೆ ಬೇಕು – Kannada News | Do Not miss This Web Series Bhay: The Gaurav Tiwari Mystery Must watch Series

ದೆವ್ವ ಅಥವಾ ಇಲ್ಲ ಎಂಬ ಚರ್ಚೆ ತುಂಬಾನೇ ಹಳೆಯದು. ಇದೇ ಕಲ್ಪನೆ ಇಟ್ಟುಕೊಂಡು ಸಾಕಷ್ಟು ಸಿನಿಮಾ ಹಾಗೂ ವೆಬ್ ಸರಣಿಗಳು ಬಂದು ಹೋಗಿವೆ. ಕೆಲವು ಹಿಟ್ ಆದರೆ, ಇನ್ನೂ ಕೆಲವು ಫ್ಲಾಪ್ ಆಗಿವೆ. ಈಗ ಹಾರರ್ ಸಿನಿಮಾ ಪ್ರಿಯರ ಎದೆಯೂ ನಡುಗುವ ರೀತಿಯ ಹಾರರ್ ಚಿತ್ರವೊಂದು ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ರಿಲೀಸ್ ಆಗಿದೆ. ಅಷ್ಟಕ್ಕೂ ಯಾವುದು ಈ ಸರಣಿ? ‘ಭಯ್: ದಿ ಗೌರವ್ ತಿವಾರಿ ಮಿಸ್ಟರಿ’. ಈ ಸರಣಿ ಹಿಂದಿಯಲ್ಲಿ ಮಾತ್ರ ವೀಕ್ಷಣೆಗೆ ಲಭ್ಯವಿದೆ.

ಮಿಸ್ಟರಿ ಹಾಗೂ ಥ್ರಿಲ್ಲರ್ ಶೈಲಿಯಲ್ಲಿ ‘ಭಯ್’ ಸರಣಿ ಮೂಡಿ ಬಂದಿದೆ. ರಾಬಿ ಗ್ರೇವಲ್ ಅವರು ಇದನ್ನು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ‘ಘೋಸ್ಟ್ ಹಂಟರ್ ಗೌರವ್ ತಿವಾರಿ: ದಿ ಲೈಫ್ ಆ್ಯಂಡ್ ಲೆಗಸಿ ಆಫ್ ಇಂಡಿಯಾಸ್ ಫೋರ್​​ಮೋಸ್ಟ್ ಪ್ಯಾನಾರ್ಮಲ್ ಇನ್ವೆಸ್ಟಿಗೇಟರ್’ ಹೆಸರಿನ ಪುಸ್ತಕ ಆಧರಿಸಿ ಸಿದ್ಧವಾಗಿದೆ. ಕರಣ್ ಟಾಕರ್ ಅವರು ಗೌರವ್ ತಿವಾರಿ ಪಾತ್ರ ಮಾಡಿದ್ದಾರೆ.

ಗೌರವ್ ತಿವಾರಿ ಅವರು 1984ರಲ್ಲಿ ಜನಿಸಿದರು. ಇವರು ಹುಟ್ಟಿದ್ದು ಬಿಹಾರದಲ್ಲಿ. ಇವರು ಪೈಲಟ್ ಆಗಬೇಕು ಎಂದು ಕನಸು ಕಂಡವರು. ಆ ಕನಸು ನನಸಾಗುತ್ತದೆ ಕೂಡ. ಆತ್ಮಗಳು ಇರೋ ವಿಷಯ ಅವರ ಅನುಭವಕ್ಕೆ ಬರುತ್ತದೆ. ಒಂದು ಆತ್ಮ ಅವರನ್ನು ವಿಮಾನ ಅಪಘಾತದಿಂದ ಕಾಪಾಡುತ್ತದೆ. ಅವರು ಪೈಲಟ್​ ಕೆಲಸ ತೊರೆದು ಘೋಸ್ಟ್ ಹಂಟರ್ ಆಗುತ್ತಾರೆ. ಅಲ್ಲಿಂದ ಅವರ ಪ್ರಯಾಣ ಶುರು. ಕೇವಲ 31ನೇ ವಯಸ್ಸಿಗೆ ಮಿಸ್ಟರಿ ರೀತಿಯಲ್ಲಿ ಗೌರವ್ ನಿಧನ ಹೊಂದುತ್ತಾರೆ.

ಇದನ್ನೂ ಓದಿ: ಈ ವಾರ ಒಟಿಟಿಗೆ ಬಂದಿವೆ ಭರ್ಜರಿ ಸಿನಿಮಾಗಳು: ನೀವೂ ನೋಡಿ

ಗೌರವ್ ಜೀವನ ಆಧರಿಸಿ ಸಿದ್ಧವಾದ ಪುಸ್ತಕ ಇಟ್ಟುಕೊಂಡು ‘ಭಯ್’ ವೆಬ್ ಸೀರಿಸ್ ಮಾಡಲಾಗಿದೆ. 8 ಎಪಿಸೋಡ್​​ಗಳನ್ನು ಈ ಸರಣಿ ಹೊಂದಿದೆ. ನೈಜ ಘಟನೆ ಆಗಿರುವುದರಿಂದ ಹೆಚ್ಚು ಥ್ರಿಲ್ ಕೊಡುತ್ತವೆ. ಕೆಲವು ಒರಿಜಿನಲ್ ಕ್ಲಿಪ್​​​ಗಳನ್ನು ಕೂಡ ಹಾಕಲಾಗಿದೆ. ಗೌರವ್ ಎದುರಿಸಿದ ಸವಲಾಗಳನ್ನು ಕಣ್ಣಿಗೆ ಕಟ್ಟುವಂತೆ ತೋರಿಸಲಾಗಿದೆ. ಗಟ್ಟಿ ಗುಂಡಿಗೆ ಇರುವವರು ಈ ಸರಣಿ ನೋಡಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *