
ಹುಬ್ಬಳ್ಳಿ, ಏಪ್ರಿಲ್ 05: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಎರಡು ದಿನದ ಹಿಂದಷ್ಟೇ ನಡೆದ ಲವ್ ಜಿಹಾದ್ (Love Jihad) ಆರೋಪ ಪ್ರಕರಣ ರಾಜ್ಯಾದ್ಯಂತ ದೊಡ್ಡ ಸುದ್ದಿಯಾಗಿತ್ತು. ಈ ಬೆನ್ನಲ್ಲೇ ನಗರದಲ್ಲಿ ಮತ್ತೊಂದು ಲವ್ ಜಿಹಾದ್ ಆರೋಪ ಕೇಳಿ ಬಂದಿದೆ. ಮುಸ್ಲಿಂ ಯುವಕನೋರ್ವ ಪ್ರೀತಿಯ ಹೆಸರಲ್ಲಿ ನಾಟಕವಾಡಿ ಹಿಂದೂ ಯುವತಿಯ ಮೇಲೆ ಅತ್ಯಾಚಾರ ಎಸಗಿ, ವಿಡಿಯೋ ಮಾಡಿಕೊಂಡು ಬ್ಲ್ಯಾಕ್ಮೇಲ್ ಮಾಡಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ಮುಫಿಜ್ ಮಿಯಾನ್ನವರ್ ವಿರುದ್ಧ ದೂರು ದಾಖಲಾಗಿತ್ತು. ಇದೀಗ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದ್ದು, ಯುವತಿ ಮಾಡಿದ್ದು ಎನ್ನಲಾಗುತ್ತಿರುವ ಹೇಳಿಕೆಗಳ ಅನೇಕ ವಿಡಿಯೋಗಳು ವೈರಲ್ ಆಗಿವೆ.
ಹಿಂದೂ ಯುವತಿ ಮಾಡಿದ್ದು ಎನ್ನಲಾದ ವಿಡಿಯೋ ವೈರಲ್
ಹುಬ್ಬಳ್ಳಿ ಮತ್ತೊಂದು ಲವ್ ಜಿಹಾದ್ ಆರೋಪ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ವರ್ಷದ ಹಿಂದೆ ಯುವತಿ ಮಾಡಿದ್ದು ಎಂದು ಹೇಳಲಾಗುತ್ತಿರುವ ಹೇಳಿಕೆಗಳ ಅನೇಕ ವಿಡಿಯೋಗಳು ಇದೀಗ ವೈರಲ್ ಆಗಿವೆ. ನಾವಿಬ್ಬರು ಇಷ್ಟಪಟ್ಟಿದ್ದೆವು. ಅದರಂತೆ ಧಾರವಾಡ ಸಬ್ ರಿಜಿಸ್ಟರ್ ಕಚೇರಿಯಲ್ಲಿ ವಿವಾಹ ನೋಂದಣಿ ಮಾಡಿಸಿದ್ದೆವು ಎನ್ನಲಾಗಿದೆ.
ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್ ಕೇಸ್: ಪ್ರೀತಿ ಹೆಸರಲ್ಲಿ ಯುವತಿ ಮೇಲೆ ಅತ್ಯಾಚಾರ ಆರೋಪ; ದೂರು ದಾಖಲು
ನಾನು ನೋಂದಣಿಗೆ ಸಹಿ ಮಾಡಿದ್ದು ಆರ್ಎಸ್ಎಸ್ನವರಿಗೆ ಗೊತ್ತಾಗಿತ್ತು. ಹೀಗಾಗಿ ನಮ್ಮ ಮನೆಗೆ ಬಂದು ಅನೇಕ ಬಾರಿ ಕೌನ್ಸಿಲಿಂಗ್ ಮಾಡಿದ್ದರು. ಅವರ ಧರ್ಮ ಬೇರೆ, ನಮ್ಮ ಧರ್ಮ ಬೇರೆ ಅಂತ ಹೇಳಿದ್ದರು. ನಾನು ಮುಫಿಜ್ ಮದುವೆಯಾಗದೇ ಇದ್ದರೆ ಸಾಯುತ್ತೇನೆ ಅಂತ ಹೇಳಿದ್ದೆ. ಹೀಗಾಗಿ ಆತನ ಹೆತ್ತವರು ಮದುವೆಗೆ ಒಪ್ಪಿಕೊಂಡಿದ್ದರು.
ಇದನ್ನೂ ಓದಿ: ಲವ್ ಜಿಹಾದ್ ಕೇಸ್: 50ಕ್ಕೂ ಹೆಚ್ಚು ಜನರಿಂದ ಸಮೀರ್ಗೆ ಮನಸೋ ಇಚ್ಛೆ ಥಳಿತ; ವಿಡಿಯೋ ವೈರಲ್
ಆರ್ಎಸ್ಎಸ್ನವರು ಬಂದು ಅನೇಕ ಬಾರಿ ಕೌನ್ಸಿಲಿಂಗ್ ಮಾಡಿದ್ದಾರೆ. ಮುಫಿಜ್ ಮೇಲೆ ಕೇಸ್ ಹಾಕಿಸುತ್ತೇವೆ ಅಂತ ಹೇಳಿದ್ದರು. ಆತನ ಮೇಲೆ ಕೇಸ್ ಹಾಕಲು ನನ್ನ ಒಪ್ಪಿಗೆ ಇಲ್ಲಾ ಎಂದಿದ್ದ ಯುವತಿ ಆದರೆ ಇದೀಗ ಮುಫಿಜ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾಳೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.