
ಎಲೆಕ್ಟ್ರಿಕ್ ರೈಲಾಗಿರಬಹುದು ಅಥವಾ ಸಾಮಾನ್ಯ ರೈಲಾಗಿರಬಹುದು ರೈಲು ಬರುವ ಮುನ್ನ ಹಳಿಯಿಂದ ಅಂತರ ಕಾಯ್ದುಕೊಳ್ಳಲಾಗುತ್ತದೆ. ರೈಲಿಗಾಗಿ ಕಾಯುತ್ತಿದ್ದ ಪ್ರಯಾಣಿಕನನ್ನು ರೈಲು ಬಂದಾಕ್ಷಣ ಅಪರಿಚಿತ ವ್ಯಕ್ತಿಯೊಬ್ಬ ತಳ್ಳಿರುವ ವಿಡಿಯೋ ವೈರಲ್ ಆಗಿದೆ.ಅಮೆರಿಕದ ಸಿಯಾಟಲ್‌ನಲ್ಲಿರುವ ನಾರ್ತ್‌ಗೇಟ್ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಈ ಘಟನೆ ಮಾರ್ಚ್ 19 ರಂದು ನಡೆದಿರುವುದಾಗಿ ವರದಿಯಾಗಿದೆ. ಆರೋಪಿ ಅಲ್ಲಿಂದ ಓಡುವ ಮೊದಲು ಎರಡು ಬಾರಿ ಪ್ರಯಾಣಿಕನನ್ನು ತಳ್ಳಲು ಯತ್ನಿಸಿದ್ದಾನೆ. ಅದೃಷ್ಟವಶಾತ್ ಪ್ರಯಾಣಿಕ ತಪ್ಪಿಸಿಕೊಂಡಿದ್ದಾರೆ. ಪೊಲೀಸರು ಅಂತಿಮವಾಗಿ ಆರೋಪಿ 26 ವರ್ಷದ ಎಲಿಸಿಯೊ ಮೆಲೆಂಡೆಜ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾದರು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ