Headlines

ಹೊಸ ವರ್ಷಕ್ಕೆ ಭರ್ಜರಿ ಕಿಕ್​​ ಕೊಟ್ಟ ಮದ್ಯ: ಅಬಕಾರಿ ಇಲಾಖೆಗೆ ಕೋಟ್ಯಂತರ ರೂ ಆದಾಯ – Kannada News | Karnataka New Year Liquor Sales Soar: 587 Cr Excise Revenue Boost

ಬೆಂಗಳೂರು, ಜನವರಿ 01: ರಾಜ್ಯಾದ್ಯಂತ ಹೊಸ ವರ್ಷಾಚರಣೆ (New Year 2026) ಸಂಭ್ರಮ ಜೋರಾಗಿತ್ತು. ಪಬ್‌, ಬಾರ್‌, ರೆಸ್ಟೋರೆಂಟ್​​ಗಳು ಝಗಮಗಿಸಿದ್ದವು. ಕುಡಿದು ಟೈಟಾದ ಯುವಕ, ಯುವತಿಯರು ಡಿಜೆ ಸದ್ದಿಗೆ ಹುಚ್ಚೆದ್ದು ಕುಣಿದರು. ಇನ್ನು ಮದ್ಯ (Liquor) ಮಾರಾಟದ ಅವಧಿಯನ್ನು ವಿಸ್ತರಿಸಲಾಗಿತ್ತು. ಹೀಗಾಗಿ ಹೊಸ ವರ್ಷದಂದು ಮದ್ಯ ಮಾರಾಟದಿಂದ ರಾಜ್ಯ ಸರ್ಕಾರಕ್ಕೆ ಭರ್ಜರಿ ಆದಾಯವಾಗಿದೆ. ಈ ವರ್ಷ ಅಬಕಾರಿ ಇಲಾಖೆ ಒಟ್ಟು 587.51 ಕೋಟಿ ರೂ. ಆದಾಯ ಗಳಿಸಿದೆ.

ಈ ವರ್ಷ ಹೆಚ್ಚಿನ ಮದ್ಯ ಮಾರಾಟ: 587.51 ಕೋಟಿ ರೂ ಆದಾಯ

ಹೊಸ ವರ್ಷಾಚರಣೆ ಹಿನ್ನೆಲೆ ಮದ್ಯ ಮಾರಾಟಕ್ಕೆ ನಿಗದಿತ ಸಮಯವನ್ನು ಬೆಳಿಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 1 ಗಂಟೆಯವರೆಗೆ ವಿಸ್ತರಿಸಲಾಗಿತ್ತು. ಆ ಮೂಲಕ ಮದ್ಯ ಪ್ರಿಯರಿಗೆ ಗುಡ್​ ನ್ಯೂಸ್​​ ಸಿಕ್ಕಿತ್ತು. ಸೂರ್ಯೋದಕ್ಕೂ ಮುನ್ನವೇ ಬಾರ್​​​​​ಗಳು ಓಪನ್ ಆಗಿದ್ದವು. ಹಾಗಾಗಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಹೆಚ್ಚಿನ ಮದ್ಯ ಮಾರಾಟ ಆಗಿದೆ.

ಇದನ್ನೂ ಓದಿ: ಹೊಸ ವರ್ಷದಂದು ಬಿಎಂಟಿಸಿಗೆ ಭರ್ಜರಿ ಆದಾಯ: ನಿನ್ನೆ ಒಂದೇ ದಿನ ಗಳಿಸಿದ್ದೆಷ್ಟು ಗೊತ್ತಾ?

ಐಎಂಎಲ್, ಬಿಯರ್ ಮಾರಾಟದಿಂದ 587.51 ಕೋಟಿ ಆದಾಯವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಹೆಚ್ಚುವರಿಯಾಗಿ 166.74 ಕೋಟಿ ರೂ ಈ ವರ್ಷ ಅಬಕಾರಿ ಇಲಾಖೆ ಬೊಕ್ಕಸಕ್ಕೆ ಭರ್ಜರಿ ಆದಾಯ ಹರಿದುಬಂದಿದೆ.

ಇದನ್ನೂ ಓದಿ: ಹೊಸ ವರ್ಷದ ದಿನ ನಮ್ಮ ಮೆಟ್ರೋಗೆ ಬಂಪರ್​ ಆದಾಯ: ಆದ ಕಲೆಕ್ಷನ್​ ಎಷ್ಟು?

2024ರ ಡಿ.29, 30, 31ರಂದು 8.25 ಲಕ್ಷ ಬಾಕ್ಸ್ IML ಮತ್ತು 5.03 ಲಕ್ಷ ಬಾಕ್ಸ್ ಬಿಯರ್ ಮಾರಾಟವಾಗುವ ಮೂಲಕ 2024ರಲ್ಲಿ 420.77 ಕೋಟಿ ರೂ ಆದಾಯ ಗಳಿಸಲಾಗಿತ್ತು. 2025ರ ಡಿ.29, 30, 31ರಂದು 9.84 ಲಕ್ಷ ಬಾಕ್ಸ್ IML, ಅಂದರೆ ಕಳೆದ ವರ್ಷಕ್ಕೆ ಹೋಲಿಸಿದರೆ 1.59 ಲಕ್ಷ ಬಾಕ್ಸ್ ಹೆಚ್ಚುವರಿ ಮಾರಾಟವಾಗಿದೆ. ಮತ್ತು ಇದೇ ದಿನದಂದು 6.64 ಲಕ್ಷ ಬಾಕ್ಸ್ ಬಿಯರ್ ಮಾರಾಟವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ 1.61 ಲಕ್ಷ ಬಾಕ್ಸ್ ಹೆಚ್ಚುವರಿ ಮಾರಾಟವಾಗಿದೆ. ಐಎಂಎಲ್, ಬಿಯರ್ ಮಾರಾಟದಿಂದ ಈ ವರ್ಷ ಅಬಕಾರಿ 587.51 ಕೋಟಿ ಆದಾಯವಾಗಿದೆ. ಇದನ್ನು ಕಳೆದ ವರ್ಷಕ್ಕೆ ಹೋಲಿಸಿದರೆ ಹೆಚ್ಚುವರಿಯಾಗಿ 166.74 ಕೋಟಿ ರೂ ಆದಾಯ ಹರದಿಬಂದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *