15 ವರ್ಷಗಳ ಬಳಿಕ ಮೊದಲ ಸುತ್ತಿನಲ್ಲೇ ಗಂಟು ಮೂಟೆ ಕಟ್ಟಿದ ಆಸ್ಟ್ರೇಲಿಯಾ – Kannada News | How many times australia knocked out in group stage in icc tournament

T20 World Cup 2026: ಟಿ20 ವಿಶ್ವಕಪ್​​ 2026 ರಿಂದ ಆಸ್ಟ್ರೇಲಿಯಾ ತಂಡ ಹೊರಬಿದ್ದಿದೆ. ಐರ್ಲೆಂಡ್ ಮತ್ತು ಝಿಂಬಾಬ್ವೆ ನಡುವಣ ಪಂದ್ಯವು ಮಳೆಯಿಂದಾಗಿ ರದ್ದಾಗಿದ್ದು, ಇದರಿಂದ ಉಭಯ ತಂಡಗಳು ಒಂದೊಂದು ಅಂಕಗಳನ್ನು ಪಡೆದುಕೊಂಡಿದೆ. ಅತ್ತ ಝಿಂಬಾಬ್ವೆ ತಂಡವು ಒಂದು ಅಂಕ ಪಡೆಯುವುದರೊಂದಿಗೆ ಒಟ್ಟು 5 ಪಾಯಿಂಟ್ಸ್​ನೊಂದಿಗೆ ಸೂಪರ್-8 ಹಂತಕ್ಕೆ ಅರ್ಹತೆ ಪಡೆದುಕೊಂಡಿದೆ. ಇತ್ತ ಆಸ್ಟ್ರೇಲಿಯಾ ತಂಡವು ತನ್ನ ಕೊನೆಯ ಪಂದ್ಯದಲ್ಲಿ ಒಮಾನ್ ವಿರುದ್ಧ ಗೆದ್ದರೂ ಗರಿಷ್ಠ 4 ಅಂಕಗಳನ್ನು ಮಾತ್ರ ಪಡೆಯಲು ಸಾಧ್ಯ. ಹೀಗಾಗಿ 6 ಅಂಕಗಳನ್ನು ಪಡೆದಿರುವ ಶ್ರೀಲಂಕಾ ಮತ್ತು 5 ಅಂಕಗಳಿಸಿರುವ ಝಿಂಬಾಬ್ವೆ ಗ್ರೂಪ್-ಸಿ ಯಿಂದ ಸೂಪರ್-8 ಹಂತಕ್ಕೇರಿದೆ.

15 ವರ್ಷಗಳ ಬಳಿಕ ನಾಕೌಟ್:

ಟಿ20 ವಿಶ್ವಕಪ್ ಇತಿಹಾಸದಲ್ಲಿ ಆಸ್ಟ್ರೇಲಿಯಾ ತಂಡವು ಕೇವಲ 2 ಬಾರಿ ಮಾತ್ರ ಗ್ರೂಪ್ ಸ್ಟೇಜ್​​ನಿಂದ ಹೊರಬಿದ್ದಿದೆ. 2009 ರ ವಿಶ್ವಕಪ್​​ನಲ್ಲಿ ಆಸೀಸ್ ಪಡೆ ಎರಡೂ ಪಂದ್ಯಗಳಲ್ಲೂ ಸೋತು ಮೊದಲ ಸುತ್ತಿನಲ್ಲೇ ಹೊರಬಿದ್ದಿತ್ತು. ಇದೀಗ ಬರೋಬ್ಬರಿ 15 ವರ್ಷಗಳ ಬಳಿಕ ಮತ್ತೊಮ್ಮೆ ದ್ವಿತೀಯ ಸುತ್ತಿಗೇರದೇ ಆಸ್ಟ್ರೇಲಿಯಾ ತಂಡ ಟಿ20 ವಿಶ್ವಕಪ್ ಅಭಿಯಾನ ಅಂತ್ಯಗೊಳಿಸಿದೆ.

8 ಬಾರಿ ಮೊದಲ ಸುತ್ತಿನಲ್ಲೇ ಔಟ್:

ಆಸ್ಟ್ರೇಲಿಯಾ ತಂಡವು ಐಸಿಸಿ ಪ್ರಮುಖ ಟೂರ್ನಿಗಳ ಗುಂಪು ಹಂತದಲ್ಲಿ ಈವರೆಗೆ ಒಟ್ಟು 8 ಬಾರಿ ಹೊರಬಿದ್ದಿದೆ. ಮೊದಲ ಬಾರಿ ಮೊದಲ ಸುತ್ತಿನಲ್ಲೇ ಹೊರಬಿದ್ದಿದ್ದು 1979 ರಲ್ಲಿ. ಇದಾದ ಬಳಿಕ 1983 ರ ಏಕದಿನ ವಿಶ್ವಕಪ್​ನಲ್ಲೂ ದ್ವಿತೀಯ ಸ್ಥಾನಕ್ಕೇರಲು ಸಾಧ್ಯವಾಗಿರಲಿಲ್ಲ. ಇನ್ನು 1992 ರ ಏಕದಿನ ವಿಶ್ವಕಪ್​​ನಲ್ಲೂ ಆಸೀಸ್ ಪಡೆ ತನ್ನ ಕಳಪೆ ಪ್ರದರ್ಶನವನ್ನು ಮುಂದುವರೆಸಿದ್ದರು.

ಇದಾದ ಬಳಿಕ ಆಸ್ಟ್ರೇಲಿಯಾ ತಂಡ ಏಕದಿನ ವಿಶ್ವಕಪ್​​​​ನಲ್ಲಿ ಒಮ್ಮೆಯೂ ಮೊದಲ ಸುತ್ತಿನಲ್ಲೇ ಹೊರಬಿದ್ದಿಲ್ಲ ಎಂಬುದು ಉಲ್ಲೇಖಾರ್ಹ. ಆದರೆ 2009ರ ಟಿ20 ವಿಶ್ವಕಪ್​​ನಲ್ಲಿ ದ್ವಿತೀಯ ಸುತ್ತಿಗೇರಲು ವಿಫಲವಾಗಿತ್ತು.

ಇನ್ನು 2013ರ ಚಾಂಪಿಯನ್ಸ್ ಟ್ರೋಫಿಯಲ್ಲೂ ಗ್ರೂಪ್ ಸ್ಟೇಜ್​​ನಲ್ಲೇ ತನ್ನ ಅಭಿಯಾನ ಅಂತ್ಯಗೊಳಿಸಿದ್ದರು. ಇದಾದ ಬಳಿಕ 2017ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಮೊದಲ ಸುತ್ತಿನಲ್ಲೇ ಸೋತು ಹೊರಬಿದ್ದಿದ್ದರು.

ಇದೀಗ 2026ರ ಟಿ20 ವಿಶ್ವಕಪ್​ನಲ್ಲಿ ಆಡಿದ ಮೂರು ಪಂದ್ಯಗಳಲ್ಲಿ ಎರಡರಲ್ಲಿ ಸೋತು ಆಸ್ಟ್ರೇಲಿಯಾ ತಂಡ ಮೊದಲ ಸುತ್ತಿನಲ್ಲೇ ಹೊರಬಿದ್ದಿದೆ.

ಇದನ್ನೂ ಓದಿ: W,W,W,W,W,W,W,W: ವಿಕೆಟ್ ಮೇಲೆ ವಿಕೆಟ್: ಶಮಿ ಬೆಂಕಿ ಬೌಲಿಂಗ್

ಆಸ್ಟ್ರೇಲಿಯಾ ತಂಡ ಮೊದಲ ಸುತ್ತಿನಲ್ಲೇ ಹೊರಬಿದ್ದ ಟೂರ್ನಿ ಮತ್ತು ವರ್ಷ:

  • ಏಕದಿನ ವಿಶ್ವಕಪ್: 1979, 1983, 1992
  • ಟಿ20 ವಿಶ್ವಕಪ್: 2009, 2026
  • ಚಾಂಪಿಯನ್ಸ್ ಟ್ರೋಫಿ: 2013, 2017

Source link

Leave a Reply

Your email address will not be published. Required fields are marked *