25 ದಿನದೊಳಗೆ ಎಲ್​ಪಿಜಿ ಸಿಲಿಂಡರ್ ಬುಕ್ ಮಾಡುವಂತಿಲ್ಲ; ಸರ್ಕಾರದಿಂದ ಹೊಸ ನಿಯಮ ಜಾರಿ

25 ದಿನದೊಳಗೆ ಎಲ್​ಪಿಜಿ ಸಿಲಿಂಡರ್ ಬುಕ್ ಮಾಡುವಂತಿಲ್ಲ; ಸರ್ಕಾರದಿಂದ ಹೊಸ ನಿಯಮ ಜಾರಿ

ನವದೆಹಲಿ, ಮಾರ್ಚ್ 11: ದೇಶೀಯ LPG ಸಿಲಿಂಡರ್ (LPG cylinder) ರೀಫಿಲ್ಲಿಂಗ್ ಕಾಯ್ದಿರಿಸಲು ಕನಿಷ್ಠ ಕಾಯುವ ಅವಧಿಯನ್ನು ಸರ್ಕಾರ 21 ದಿನಗಳಿಂದ 25 ದಿನಗಳಿಗೆ ಹೆಚ್ಚಿಸಿದೆ. ಹೀಗಾಗಿ, ನೀವು ಒಮ್ಮೆ ಸಿಲಿಂಡರ್ ಬುಕ್ ಮಾಡಿದರೆ 25 ದಿನಗಳು ಕಳೆಯುವವರೆಗೆ ಇನ್ನೊಂದು ಸಿಲಿಂಡರ್ ಬುಕ್ ಮಾಡುವಂತಿಲ್ಲ. ಅಡುಗೆ ಅನಿಲ ಕೊರತೆಯ ಬಗ್ಗೆ ದೇಶಾದ್ಯಂತ ಭಯ ಆವರಿಸಿದೆ. ಆತಂಕಗೊಂಡ ಗ್ರಾಹಕರಿಂದ ಗ್ಯಾಸ್ ಏಜೆನ್ಸಿಗಳಿಗೆ ಕರೆಗಳು ಮತ್ತು ಸಿಲಿಂಡರ್‌ಗಳಿಗಾಗಿ ಬಹು ವಿನಂತಿಗಳು ಬರುತ್ತಿವೆ.

ಜನರು ಮುಗಿಬಿದ್ದು ಗ್ಯಾಸ್ ಬುಕ್ ಮಾಡಲು ಕರೆ ಮಾಡುತ್ತಾ ಇರುವುದರಿಂದ ಸರ್ವರ್ ಬ್ಯುಸಿ ಆಗಿದೆ. ಗ್ರಾಹಕರು ಸಾವಧಾನವಾಗಿ ನಿಮ್ಮ ಸಿಲಿಂಡರ್ ಬುಕ್ ಮಾಡಿಕೊಳ್ಳಿ. ಗೃಹಬಳಕೆ ಸಿಲಿಂಡರ್ ಬಗ್ಗೆ ಸದ್ಯಕ್ಕೆ ಆತಂಕ ಬೇಡ. ಬೇಕಾದಷ್ಟು ಸ್ಟಾಕ್ ಬರುತ್ತಿದೆ. ಆದರೆ ಕಡ್ಡಾಯವಾಗಿ ನಿಯಮಗಳನ್ನು ಪಾಲಿಸಬೇಕು ಎಂದು ಸೂಚಿಸಲಾಗಿದೆ.

ಇದನ್ನೂ ಓದಿ: ಎಲ್​ಪಿಜಿ ಕೊರತೆ: ರಿಲಯನ್ಸ್‌ನಿಂದ ಜಾಮ್‌ನಗರದಲ್ಲಿ ಅನಿಲ ಉತ್ಪಾದನೆ ಹೆಚ್ಚಳದ ಬಗ್ಗೆ ಘೋಷಣೆ

ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ದೇಶೀಯ ಎಲ್‌ಪಿಜಿ ಸಿಲಿಂಡರ್ ಬುಕಿಂಗ್‌ಗಳ ನಡುವೆ ಕನಿಷ್ಠ 25 ದಿನಗಳ ಅಂತರವನ್ನು ಕಡ್ಡಾಯಗೊಳಿಸಿದೆ ಎಂದು ದೃಢಪಡಿಸಿದೆ. ಇರಾನ್‌ನಲ್ಲಿನ ಯುದ್ಧದಿಂದಾಗಿ ಇಂಧನ ಬಿಕ್ಕಟ್ಟಿನ ಸಾಧ್ಯತೆ ಇರುವುದರಿಂದ ದೇಶೀಯ ಬಳಕೆಗಾಗಿ ಎಲ್‌ಪಿಜಿ ರೀಫಿಲ್ಲಿಂಗ್ ಪಡೆಯಲು ಕಾಯುವ ಅವಧಿಯನ್ನು 21 ದಿನಗಳಿಂದ 25 ದಿನಗಳಿಗೆ ಹೆಚ್ಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಎಲ್​ಪಿಜಿ ಪೂರೈಕೆ ಬಿಕ್ಕಟ್ಟು ಬಗೆಹರಿಸಲು ಸರ್ಕಾರದಿಂದ ಸಮಿತಿ ರಚನೆ

ಇರಾನ್ ಹರ್ಮುಜ್ ಜಲಸಂಧಿಯನ್ನು ನಿರ್ಬಂಧಿಸಿದ ಹಿನ್ನೆಲೆಯಲ್ಲಿ ತೈಲ ಬೆಲೆಗಳಲ್ಲಿ ಏರಿಕೆಯಾಗುವ ಬಗ್ಗೆ ಕಳವಳ ಹೆಚ್ಚಾಗಿದೆ. ಇರಾನ್‌ನ ಕ್ರಾಂತಿಕಾರಿ ಗಾರ್ಡ್‌ಗಳು ಯುಎಸ್, ಇಸ್ರೇಲ್, ಯುರೋಪ್ ಮತ್ತು ಅವರ ಪಾಶ್ಚಿಮಾತ್ಯ ಮಿತ್ರರಾಷ್ಟ್ರಗಳ ಹಡಗುಗಳಿಗೆ ಮಾತ್ರ ಜಲಸಂಧಿಯನ್ನು ಮುಚ್ಚಲಾಗುತ್ತದೆ ಎಂದು ಹೇಳಿದ್ದರೂ ಸಹ ಆತಂಕವಿನ್ನೂ ಕಡಿಮೆಯಾಗಿಲ್ಲ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *