Headlines

ಜಪಾನ್ ರಾಯಭಾರಿಗೂ ಇಷ್ಟ ಬೆಂಗಳೂರಿನ ಪಿಜ್ಜಾ! ಓನೋ ಕೈಇಚಿ ಪೋಸ್ಟ್​ಗೆ ತೇಜಸ್ವಿ ಸೂರ್ಯ ರಿಯಾಕ್ಷನ್ – Kannada News | Japanese Ambassador Ono Keiichi Loves Bengaluru Pizza! Tejasvi Surya Reacts to Viral X post

ಜಪಾನ್ ಎಂಬಾಸಿಡರ್​ಗೂ ಇಷ್ಟ ಬೆಂಗಳೂರಿನ ಪಿಜ್ಜಾ! ಓನೋ ಕೈಇಚಿ ಪೋಸ್ಟ್​ಗೆ ತೇಜಸ್ವಿ ಸೂರ್ಯ ರಿಯಾಕ್ಷನ್

ಬೆಂಗಳೂರು, ಫೆಬ್ರುವರಿ 01: ಭಾರತದಲ್ಲಿನ ಜಪಾನ್ ರಾಯಭಾರಿ (Japanese Ambassador) ಓನೋ ಕೈಇಚಿ ಬೆಂಗಳೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ನಗರದ ಪ್ರಸಿದ್ಧ ಪಿಜ್ಜಾ ರೆಸ್ಟೋರೆಂಟ್‌ನಲ್ಲಿ ಊಟ ಮಾಡಿದ ಅನುಭವವನ್ನು ಸಾಮಾಜಿಕ ಜಾಲತಾಣ ಎಕ್ಸ್ (X) ನಲ್ಲಿ ಹಂಚಿಕೊಂಡಿದ್ದು, ಇದು ವ್ಯಾಪಕ ಗಮನ ಸೆಳೆದಿದೆ. ಅವರ ಪೋಸ್ಟ್ಗೆ ಸಂಸದ ತೇಜಸ್ವಿ ಸೂರ್ಯ (Tejaswi Surya) ಸಹ ಪ್ರತಿಕ್ರಿಯಿಸಿದ್ದು, ಇದು ಜಪಾನ್–ಬೆಂಗಳೂರು ಸ್ನೇಹದ ಪ್ರತೀಕ ಎಂದಿದ್ದಾರೆ.

ಬೆಂಗಳೂರಿನ ಜನಪ್ರಿಯ ‘ಪಿಜ್ಜಾ 4ಪಿ’ಸ್ ರೆಸ್ಟೋರೆಂಟ್‌ನಲ್ಲಿ ಪಿಜ್ಜಾ ಆಸ್ವಾದಿಸುತ್ತಿರುವ ತಮ್ಮ ಫೋಟೋವನ್ನು ಹಂಚಿಕೊಂಡಿರುವ ಕೈಇಚಿ, ಹೋ ಚಿ ಮಿನ್ ಸಿಟಿಯಲ್ಲಿ ಜಪಾನೀ ಉದ್ಯಮಿಗಳು ಆರಂಭಿಸಿದ ಪಿಜ್ಜಾ 4ಪಿ’ಸ್ ಇಂದು ಏಷ್ಯಾದಾದ್ಯಂತ ಜನಪ್ರಿಯವಾಗಿದೆ. ಜಪಾನ್ ಹಾಗೂ ಭಾರತದಲ್ಲಿಯೂ ಶಾಖೆಗಳಿವೆ. ಭಾರತದಲ್ಲಿ ನಾನು ಸೇವಿಸಿದ ಅತ್ಯುತ್ತಮ ಪಿಜ್ಜಾ ಇದು ಎಂದು ಬರೆದುಕೊಂಡಿದ್ದಾರೆ.

ಓನೋ ಕೈಇಚಿ ಎಕ್ಸ್ ಪೋಸ್ಟ್ ಇಲ್ಲಿದೆ

ರಾಯಭಾರಿಯ ಈ ಪೋಸ್ಟ್‌ಗೆ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಪ್ರತಿಕ್ರಿಯಿಸಿದ್ದು, ನಿಮಗೆ ಪಿಜ್ಜಾ ಇಷ್ಟವಾದುದಕ್ಕೆ ಸಂತೋಷ. ನನಗೂ ಅಲ್ಲಿನ ಪೀಜ್ಜಾ ಇಷ್ಟ. ಅದು ಜಪಾನ್–ಬೆಂಗಳೂರು ಸ್ನೇಹದ ಪ್ರತೀಕವಾಗಿದೆ. ನಿಮ್ಮ ಬೆಂಗಳೂರು ಭೇಟಿ ಚನ್ನಾಗಿರಲಿ ಎಂದು ತಿಳಿಸಿದ್ದಾರೆ.

ತೇಜಸ್ವಿ ಎಕ್ಸ್ ಪೋಸ್ಟ್ ಇಲ್ಲಿದೆ

ನೆಟ್ಟಿಗರ ಭರ್ಜರಿ ಪ್ರತಿಕ್ರಿಯೆ

ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕಡಿಮೆ ಸಮಯದಲ್ಲೇ 70 ಸಾವಿರಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ. ಅನೇಕ ಬಳಕೆದಾರರು ತಮ್ಮ ಪ್ರತಿಕ್ರಿಯೆಗಳನ್ನು ಹಂಚಿಕೊಂಡಿದ್ದಾರೆ.

ಇಲ್ಲಿ ಟೇಬಲ್ ಸಿಗುವುದು ತುಂಬಾ ಕಷ್ಟ ಎಂದು ಒಬ್ಬರು ಬರೆದಿದ್ದರೆ, ಮತ್ತೊಬ್ಬರು ಜಪಾನ್ ರಾಯಭಾರಿಗೂ ಬೆಂಗಳೂರು ಪಿಜ್ಜಾ ಇಷ್ಟವಾಗಿದೆ ಎಂದರೆ ಅದೊಂದು ವಿಶೇಷ ಎಂದು ಹೇಳಿದ್ದಾರೆ. ಇನ್ನೂ ಕೆಲವರು ನೀವು ದೆಹಲಿಯನ್ನು ಕಡೆಗಣಿಸುತ್ತಿದ್ದೀರಾ ಎಂದರೆ, ಇನ್ನೂ ಕೆಲವರು ಬೆಂಗಳೂರಿಗೆ ಬಂದಾಗ ನಾನೂ ಆ ಜಾಗಗ್ಗೆ ಹೋಗುತ್ತೇನೆಂದು ಬರೆದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *