Headlines

Union Budget 2026-27: ಯಾವ ಇಲಾಖೆಗೆ ಎಷ್ಟು ಅನುದಾನ? ಇಲ್ಲಿದೆ ಡಿಟೇಲ್ಸ್​​ – Kannada News | Union Budget 2026 27: Top Allocations for Transport, Defence Sectors

ನವದೆಹಲಿ, ಫೆ. 01: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​​ 2026-27ನೇ ಸಾಲಿನ ಕೇಂದ್ರ ಬಜೆಟ್​​ ಮಂಡಿಸಿದ್ದಾರೆ. ಅವರು ಮಂಡಿಸಿರುವ 9ನೇ ಆಯವ್ಯಯದ ಗಾತ್ರ 53.47 ಲಕ್ಷ ಕೋಟಿ ರೂಪಾಯಿಗಳಾಗಿದ್ದು, ಸಾರಿಗೆ ಹಾಗೂ ರಕ್ಷಣಾ ಇಲಾಖೆಗೆ ಅತಿಹೆಚ್ಚು ಅನುದಾನ ಹಂಚಿಕೆ ಮಾಡಲಾಗಿದೆ. ಗ್ರಾಮೀಣಾಭಿವೃದ್ಧಿ ಮತ್ತು ಗೃಹ ವ್ಯವಹಾರಗಳ ಇಲಾಖೆಗೂ ಹೆಚ್ಚು ಒತ್ತು ನೀಡಲಾಗಿದೆ. ಚುನಾವಣಾ ರಾಜ್ಯಗಳಿಗೂ ಬಂಪರ್​​ ಗಿಫ್ಟ್​​ ಸಿಕ್ಕಿದ್ದು, ಕೇಂದ್ರ ಬಜೆಟ್​ನಲ್ಲಿ ಪ್ರಮುಖ ಇಲಾಖೆಗಳಿಗೆ ಸಿಕ್ಕಿದ ಅನುದಾನದ ಮಾಹಿತಿ ಇಲ್ಲಿದೆ.

ಪ್ರಮುಖ ಇಲಾಖೆಗಳಿಗೆ ಸಿಕ್ಕಿದ ಅನುದಾನ

  • ಸಾರಿಗೆ ಇಲಾಖೆ- 5,98,520 ಕೋಟಿ ರೂ.
  • ರಕ್ಷಣಾ ಇಲಾಖೆ 5,94,585 ಕೋಟಿ ರೂ.
  • ಗ್ರಾಮೀಣಾಭಿವೃದ್ಧಿ ಇಲಾಖೆ- 2,73,108 ಕೋಟಿ ರೂ.
  • ಗೃಹ ವ್ಯವಹಾರಗಳ ಇಲಾಖೆ- 2,55,234 ಕೋಟಿ ರೂ.
  • ಕೃಷಿ ಇಲಾಖೆ- 1,62,671 ಕೋಟಿ ರೂ.
  • ಶಿಕ್ಷಣ ಇಲಾಖೆ- 1,39,289 ಕೋಟಿ ರೂ.
  • ಆರೋಗ್ಯ ಇಲಾಖೆ- 1,04,599 ಕೋಟಿ ರೂ.
  • ಇಂಧನ ಇಲಾಖೆ- 1,09,029 ಕೋಟಿ ರೂ.
  • ನಗರಾಭಿವೃದ್ಧಿ ಇಲಾಖೆ- 85,522 ಕೋಟಿ ರೂ.
  • ಐಟಿ ಮತ್ತು ಟೆಲಿಕಾಂ- 74,560 ಕೋಟಿ ರೂ.
  • ವಾಣಿಜ್ಯ ಮತ್ತು ಕೈಗಾರಿಕೆ- 70,296 ಕೋಟಿ ರೂ.
  • ಸಮಾಜಕಲ್ಯಾಣ ಇಲಾಖೆ- $62,362 ಕೋಟಿ ರೂ.
  • ವೈಜ್ಞಾನಿಕ ಇಲಾಖೆ- 55,756 ಕೋಟಿ ರೂ.
  • ತೆರಿಗೆ ಆಡಳಿತ- 45,500 ಕೋಟಿ ರೂ.
  • ವಿದೇಶಾಂಗ ವ್ಯವಹಾರ ಇಲಾಖೆ- 22,119 ಕೋಟಿ ರೂ.
  • ಹಣಕಾಸು ಇಲಾಖೆ- 20,649 ಕೋಟಿ ರೂ.
  • ಈಶಾನ್ಯ ರಾಜ್ಯಗಳ ಅಭಿವೃದ್ಧಿ- 6,812 ಕೋಟಿ ರೂ.

ಇದನ್ನೂ ಓದಿ: ಬಜೆಟ್​​ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಸಿಕ್ಕಿದ್ದೇನು? ಇಲ್ಲಿದೆ ಮಾಹಿತಿ

ಹೈಸ್ಪೀಡ್ ರೈಲ್ವೆ ಕಾರಿಡಾರ್‌

ಚೆನ್ನೈ ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳನ್ನು ಸಂಪರ್ಕಿಸುವ ಏಳು ಹೈಸ್ಪೀಡ್ ರೈಲ್ವೆ ಕಾರಿಡಾರ್‌ಗಳನ್ನು ಕೇಂದ್ರ ಸರ್ಕಾರ ಘೋಷಿಸಿದೆ. ಮುಂಬೈ–ಪುಣೆ, ಪುಣೆ–ಹೈದರಾಬಾದ್, ಹೈದರಾಬಾದ್–ಬೆಂಗಳೂರು, ಹೈದರಾಬಾದ್–ಚೆನ್ನೈ, ಚೆನ್ನೈ–ಬೆಂಗಳೂರು, ದೆಹಲಿ–ವಾರಾಣಸಿ ಹಾಗೂ ವಾರಾಣಸಿ–ಸಿಲಿಗುರಿ ನಡುವೆ ಹೈಸ್ಪೀಡ್ ರೈಲು ಮಾರ್ಗ ನಿರ್ಮಾಣವಾಗಲಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 4:35 pm, Sun, 1 February 26

Source link

Leave a Reply

Your email address will not be published. Required fields are marked *