Headlines

ಮೂವರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆಗೆ ಯತ್ನ, ದುಡುಕಿನ‌ ನಿರ್ಧಾರಕ್ಕೆ 3 ಜೀವಗಳು ಬಲಿ – Kannada News | Mother kills three children in Bagalkot, then attempts suicide for Family Dispute

ಪರಿಶೀಲನೆ ಮಾಡುತ್ತಿರುವ ಪೊಲೀಸ್ರು

ಬಾಗಲಕೋಟೆ, (ಫೆಬ್ರವರಿ 01): ಮಹಿಳೆಯೊಬ್ಬರು (Woman) ತನ್ನ ಮೂವರು ಮಕ್ಕಳನ್ನು ಕೊಂದು ತಾನೂ ಸಹ ಆತ್ಮಹತ್ಯೆಗೆ ಯತ್ನಿಸಿರುವ ದಾರುಣ ಘಟನೆ ಬಾಗಲಕೋಟೆ (Bagalkot) ಜಿಲ್ಲೆ ಬಾದಾಮಿ ತಾಲೂಕಿನ ಹಿರೇಮುಚ್ಚಳಗುಡ್ಡ ಗ್ರಾಮದಲ್ಲಿ ನಡೆದಿದೆ. ಕೌಟುಂಬಿಕ ಕಲಹದಿಂದ ಬೇಸತ್ತು ರೂಪಾ ಎನ್ನುವ ಮಹಿಳೆ ತನ್ನ ಮೂರು ಮಕ್ಕಳನ್ನು ನೇಣಿಗೆ ಹಾಕಿ ಕೊಂದು ಬಳಿಕ ತಾನೂ ಡೀಸೆಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಸಮೃದ್ಧಿ(5), ಪ್ರೀತಮ್(4), ಸುಕ್ಷಿತ್(2) ಮೃತ ಮಕ್ಕಳು. ಇನ್ನು ಡೀಸೆಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿರುವ ರೂಪಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ರೂಪಾ 2018ರಲ್ಲಿ ಹನಮಂತ ಬಾದಾಮಿ ಎನ್ನುವಾತನೊಂದಿಗೆ ಮದುವೆ ಮಾಡಿಕೊಂಡಿದ್ದು, ದಂಪತಿಗೆ ಮೂರು ಮಕ್ಕಳು ಸಹ ಇದ್ದವು. ಆದ್ರೆ, ಅತ್ತೆ ರೇಣವ್ವ ಕಿರುಕುಳ ಹೆಚ್ಚಾಗಿತ್ತು. ಇದರಿಂದ ಬೇಸತ್ತು ರೂಪಾ ಮೊದಲು ತನ್ನ ಮೂವರು ಮಕ್ಕಳಿಗೆ ಹಗ್ಗದಿಂದ ಮನೆಯ ಜಂತಿಗೆ ನೇಣು ಹಾಕಿ ಕೊಂದಿದ್ದಾಳೆ. ಬಳಿಕ ತಾನೂ ಡೀಸೆಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದು, ಅದೃಷ್ಟವಶಾತ್ ಬದುಕುಳಿದಿದ್ದು ಬಾಗಲಕೋಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಇದನ್ನೂ ಓದಿ: ಕೊಳಚೆ ನೀರಲ್ಲಿ ಶಾಲಾ ವಿದ್ಯಾರ್ಥಿಗಳು ಪ್ಲೇಟ್ ತೊಳೆದ ವೈರಲ್ ಫೋಟೋ ಅಸಲಿಯತ್ತು ಬಿಚ್ಚಿಟ್ಟ ಬಿಇಓ

ಇನ್ನು ಘಟನಾ ಸ್ಥಳಕ್ಕೆ ಬಾದಾಮಿ ಠಾಣೆ ಪೊಲೀಸರ ಹಾಗೂ ಬಾಗಲಕೋಟೆ ಎಸ್ ಪಿ ಸಿದ್ದಾರ್ಥ ಗೋಯೆಲ್ ಭೇಟಿ ಪರಿಶೀಲನೆ ನಡೆಸಿದ್ದಾರೆ.  ಕೌಟುಂಬಿಕ ಕಲಹಕ್ಕೆ ರೂಪಾಳ ದುಡುಕಿನ‌ ನಿರ್ಧಾರಕ್ಕೆ ಅನಾಯಸವಾಗಿ ಮೂವರು ಮಕ್ಕಳ ಜೀವ ಹೋಗಿದ್ದು ದುರಂತವೇ ಸರಿ.

ಘಟನೆಗೆ ಬಗ್ಗೆ ಪ್ರಾಥಮಿಕ ಮಾಹಿತಿ ಬಿಚ್ಚಿಟ್ಟ ಎಸ್ಪಿ

ಹಿರೇಮಚ್ಚಳಗುಡ್ಡದಲ್ಲಿ ತಾಯಿ ಮೂರು ಮಕ್ಕಳ ಕೊಂದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಮಕ್ಕಳು ಮೃತಪಟ್ಟಿವೆ. ತಾಯಿಗೆ ಸೀರಿಯಸ್ ಆಗಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆಗೆ ಕಾರಣ ಗಂಡ ಹೆಂಡತಿ ಜಗಳ , ಅತ್ತೆ ಮಾವ ಕಿರುಕಳ ಬಗ್ಗೆ ಪ್ರಾಥಮಿಕ ಮಾಹಿತಿ ಇದೆ. ಈ ಬಗ್ಗೆ ಪೂರ್ಣ ತನಿಖೆ ನಡೆಸಲಾಗುತ್ತಿದೆ. ಈಗಾಗಲೇ ಸ್ಥಳದಲ್ಲೇ ಸಿಪಿಐ ಮತ್ತು ಪಿಎಸ್ಐ ಇದ್ದು ಪರಿಶೀಲನೆ ನಡೆಸುತ್ತಿದ್ದಾರೆ. ಅತ್ತೆ ಮಾವನ ಕಿರುಕಳ ಬಗ್ಗೆ ಹೆಚ್ಚು ಆರೋಪ ಇದೆ. ಆದ್ರೆ ತಾಯಿ ಕಂಡಿಷನ್ ನೋಡಿಕೊಂಡು, ವೈದ್ಯರ ಸಲಹೆ ಮೇರೆಗೆ ತಾಯಿ ಹೇಳಿಕೆ ಪಡೆಯುತ್ತೇವೆ ಎಂದು ಮಾಹಿತಿ ನೀಡಿದರು.

ನಾವು ಮತ್ತು ಎಕ್ಸಿಕ್ಯುಟಿವ್ ಮೆಜಿಸ್ಟ್ರೇಟ್ ಕಡೆಯಿಂದ ರೆಕಾರ್ಡ್ ಮಾಡಿ ಮಾಹಿತಿ ಪಡೆಯುತ್ತೇವೆ‌. ಇಂದು ಮಧ್ಯಾಹ್ನ 1.30 ಗಂಟೆಯೊಳಗೆ ಈ ಘಟನೆ ‌ನಡೆದಿದೆ‌. ಗಂಡ ಮನೆಗೆ ಬಂದು ನೋಡಿದಾಗ ಘಟನೆ ಗೊತ್ತಾಗಿದೆ ಅಂತಿದ್ದಾರೆ. ಒಟ್ಟಾರೆ ಸಂಪೂರ್ಣ ತನಿಖೆ ನಂತರವೇ ಘಟನೆಗೆ ನಿಖರ ಕಾರಣ ತಿಳಿಯಲಿದೆ ಎಂದರು.

ಕರ್ನಾಟದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 5:36 pm, Sun, 1 February 26

Source link

Leave a Reply

Your email address will not be published. Required fields are marked *