Headlines

ಜೊಕೊವಿಕ್ ಮಣಿಸಿ ಚೊಚ್ಚಲ ಆಸ್ಟ್ರೇಲಿಯನ್ ಓಪನ್ ಗೆದ್ದ ಕಾರ್ಲೋಸ್ ಅಲ್ಕರಾಝ್ – Kannada News | Carlos Alcaraz Wins Australian Open, Defeats Djokovic for First Title

ಆಸ್ಟ್ರೇಲಿಯನ್ ಓಪನ್ ಪುರುಷರ ಸಿಂಗಲ್ಸ್ ಕಿರೀಟ ಸ್ಪ್ಯಾನಿಷ್ ಟೆನಿಸ್ ಆಟಗಾರ ಕಾರ್ಲೋಸ್ ಅಲ್ಕರಾಝ್ ಮುಡಿಗೇರಿದೆ. ಇಂದು ನಡೆದ ಫೈನಲ್‌ನಲ್ಲಿ ಟೆನಿಸ್ ದಿಗ್ಗಜ ನೊವಾಕ್ ಜೊಕೊವಿಕ್ ಅವರನ್ನು ಎದುರಿಸಿದ್ದ ಅಲ್ಕರಾಝ್ ತಮ್ಮ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿಯನ್ನು ಗೆದ್ದ ಸಾಧನೆ ಮಾಡಿದ್ದಾರೆ. ಇತ್ತ 25 ನೇ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿ ಗೆಲ್ಲುವ ಇರಾದೆಯೊಂದಿಗೆ ಫೈನಲ್​ಗೆ ಲಗ್ಗೆ ಇಟ್ಟಿದ್ದ ನೊವಾಕ್ ಜೊಕೊವಿಕ್ ಸೋಲಿನ ನಿರಾಶೆ ಎದುರಿಸಬೇಕಾಯಿತು. ಇತ್ತ ಅಲ್ಕರಾಝ್ ಮೊದಲ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿಯಾಗಿದ್ದರೂ, ಈ ಹಿಂದೆ ಆರು ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

ಫೈನಲ್‌ನಲ್ಲಿ ಸೆರ್ಬಿಯಾದ ನೊವಾಕ್ ಜೊಕೊವಿಕ್ ಅವರನ್ನು 2-6, 6-2, 6-3, 6-4 ಅಂತರದಲ್ಲಿ ಸೋಲಿಸಿದ ಅಲ್ಕರಾಝ್ ತಮ್ಮ ಏಳನೇ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿ ಗೆಲ್ಲುವ ಮೂಲಕ 22 ವರ್ಷ ಮತ್ತು 272 ದಿನಗಳಲ್ಲಿ ವೃತ್ತಿಜೀವನದ ಗ್ರ್ಯಾಂಡ್ ಸ್ಲ್ಯಾಮ್ ಪೂರ್ಣಗೊಳಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ಇತಿಹಾಸ ಸೃಷ್ಟಿಸಿದರು. ಅಲ್ಕರಾಝ್ ಈ ಹಿಂದೆ ವಿಂಬಲ್ಡನ್ (2023, 2024), ಫ್ರೆಂಚ್ ಓಪನ್ (2024, 2025), ಯುಎಸ್ ಓಪನ್ (2022), ಗೆದ್ದಿದ್ದರು. ಈಗ ಆಸ್ಟ್ರೇಲಿಯನ್ ಓಪನ್ (2026) ತನ್ನದಾಗಿಸಿಕೊಂಡಿದ್ದಾರೆ.

ಮೊದಲ ಸೆಟ್‌ನಲ್ಲಿ ತಮ್ಮ ಅನುಭವ ಧಾರೆ ಎರೆದ ಜೊಕೊವಿಕ್ ಸೆಟ್ ಅನ್ನು 6-2 ರಿಂದ ಗೆದ್ದರು. ಆದಾಗ್ಯೂ, ಎರಡನೇ ಸೆಟ್‌ನಲ್ಲಿ ಅದ್ಭುತ ಪುನರಾಗಮನ ಮಾಡಿದ ಅಲ್ಕರಾಝ್ ಸೆಟ್ ಅನ್ನು 6-2 ರಿಂದ ಗೆಲ್ಲುವಲ್ಲಿ ಯಶಸ್ವಿಯಾದರು. ಮೂರನೇ ಸೆಟ್‌ನಲ್ಲೂ ಅದ್ಭುತವಾಗಿ ಆಡಿದ ಅಲ್ಕರಾಝ್ ಸೆಟ್ ಅನ್ನು 6-3 ರಿಂದ ಗೆದ್ದುಕೊಂಡರು. ಹೀಗಾಗಿ ಜೊಕೊವಿಕ್‌ಗೆ ನಾಲ್ಕನೇ ಸೆಟ್ ನಿರ್ಣಾಯಕವಾಗಿತ್ತು. ಅದರಂತೆ ಇಬ್ಬರೂ ಆಟಗಾರರು ನಾಲ್ಕನೇ ಸೆಟ್‌ನಲ್ಲಿ ನಿಕಟ ಪೈಪೋಟಿ ನೀಡಿ ಒಂದು ಹಂತದಲ್ಲಿ 4-4 ರಲ್ಲಿ ಸಮಬಲ ಸಾಧಿಸಿದರು. ಇದರ ನಂತರ ಕಾರ್ಲೋಸ್ ಸತತ 2 ಪಾಯಿಂಟ್ ಕಲೆಹಾಕಿ ಸೆಟ್ ಅನ್ನು 7-5 ರಲ್ಲಿ ಗೆದ್ದು, ಪಂದ್ಯವನ್ನು ಗೆದ್ದುಕೊಂಡರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *