Headlines

ಪಾಕ್ ವಿರುದ್ಧದ ಪಂದ್ಯ ಮುಗಿಯುವ ಮುನ್ನವೇ ವಿಶ್ವಕಪ್ ಸೆಮಿಫೈನಲ್‌ಗೇರಿದ ಭಾರತ – Kannada News | U19 World Cup: India Qualifies for Semi finals via NRR after Pakistan Thriller

ಅಂಡರ್-19 ಏಕದಿನ ವಿಶ್ವಕಪ್‌ನ (U19 World Cup 2026) ಮಾಡು-ಮರು ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ (India vs Pakistan) ತಂಡಗಳು ಪರಸ್ಪರ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ, ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 252 ರನ್ ಕಲೆಹಾಕಿತು. ತಂಡದ ಪರ ಮೊದಲ ಮೂವರು ಪ್ರಮುಖ ಬ್ಯಾಟ್ಸ್‌ಮನ್‌ಗಳು ಬೇಗನೇ ಔಟ್ ಆದರು. ಇದರಿಂದಾಗಿ, ಟೀಂ ಇಂಡಿಯಾದ ಮೇಲೆ ಒತ್ತಡ ಹೆಚ್ಚಾಯಿತು. ಆದಾಗ್ಯೂ ಮಧ್ಯಮ ಕ್ರಮಾಂಕದಲ್ಲಿ ವೇದಾಂತ್ ತ್ರಿವೇದಿ ತಂಡದ ಇನ್ನಿಂಗ್ಸ್ ನಿಭಾಯಿಸಿ 68 ರನ್‌ ಬಾರಿಸಿದರು. ಇವರೊಂದಿಗೆ ಆರಂಭಿಕ ವೈಭವ್ ಸೂರ್ಯವಂಶಿ 30 ರನ್​, ಆರ್‌ಎಸ್ ಅಂಬ್ರೀಶ್ 29 ರನ್, ಕನಿಷ್ಕ್ ಚೌಹಾಣ್ 35 ಮತ್ತು ಖಿಲಾನ್ ಪಟೇಲ್ 21 ರನ್​ಗಳ ಕಾಣಿಕೆ ನೀಡಿದರು.

ಗುರಿ ಬೆನ್ನಟ್ಟುವಲ್ಲಿ ಪಾಕ್ ವಿಫಲ

ಈ ಹಿಂದೆ ನಡೆದಿದ್ದ ಏಷ್ಯಾಕಪ್‌ನಲ್ಲಿ ಇದೇ ಭಾರತ ತಂಡವನ್ನು ಸೋಲಿಸಿದ್ದ ಪಾಕಿಸ್ತಾನ ಈ ಪಂದ್ಯದಲ್ಲೂ ಗೆಲುವಿನ ಇರಾದೆಯಲ್ಲಿತ್ತು. ಆದರೆ ಸೆಮಿಫೈನಲ್‌ಗೇರಬೇಕೆಂದರೆ ಪಾಕಿಸ್ತಾನ ಈ ಪಂದ್ಯವನ್ನು 50 ಓವರ್​ಗಳ ಬದಲಿಗೆ 33.3 ಓವರ್​ಗಳಲ್ಲಿ ಗೆದ್ದುಕೊಳ್ಳಬೇಕಿತ್ತು. ಆದರೆ ಪಾಕಿಸ್ತಾನ ತಂಡಕ್ಕೆ 34 ಓವರ್​ಗಳ ಒಳಗೆ ಗುರಿ ಬೆನ್ನಟ್ಟಲು ಸಾಧ್ಯವಾಗಲಿಲ್ಲ. ಹೀಗಾಗಿ ನೆಟ್ ರನ್​ರೇಟ್ ಆದಾರದ ಮೇಲೆ ಟೀಂ ಇಂಡಿಯಾ ಸೆಮಿಫೈನಲ್​ನಲ್ಲಿ ತನ್ನ ಸ್ಥಾನವನ್ನು ಖಚಿತಪಡಿಸಿಕೊಂಡಿದೆ.

252 ರನ್ ಕಲೆಹಾಕಿದ ಭಾರತ

ಈ ಗುರಿ ಬೆನ್ನಟ್ಟಿದ ಪಾಕಿಸ್ತಾನ ಎಚ್ಚರಿಕೆಯಿಂದ ಇನ್ನಿಂಗ್ಸ್ ಆರಂಭಿಸಿತು. ಹಮ್ಜಾ ಜಹೂರ್ ಮತ್ತು ಸಮೀರ್ ಮಿನ್ಹಾಸ್ 23 ರನ್‌ಗಳ ಜೊತೆಯಾಟ ನಡೆಸಿದರು. ಆದರೆ ಸಮೀರ್ ಮಿನ್ಹಾಸ್ ಕೇವಲ 9 ರನ್‌ಗಳಿಸಿ ಔಟಾದರು. ಇದರಿಂದಾಗಿ, ಪಾಕಿಸ್ತಾನದ ಮೇಲಿನ ಒತ್ತಡ ಹೆಚ್ಚಾಯಿತು. ಆ ನಂತರ, ಹಮ್ಜಾ ಜಹೂರ್ ಮತ್ತು ಉಸ್ಮಾನ್ ಖಾನ್ ತಂಡದ ಇನ್ನಿಂಗ್ಸ್​ಗೆ ಚೇತರಿಕೆ ನೀಡಿದರು. ಎರಡನೇ ವಿಕೆಟ್‌ಗೆ ಈ ಜೋಡಿ 80 ಎಸೆತಗಳಲ್ಲಿ 65 ರನ್ ಗಳಿಸಿತು. ಇದರಿಂದಾಗಿ, ಟೀಂ ಇಂಡಿಯಾದ ಉದ್ವಿಗ್ನತೆ ಹೆಚ್ಚಾಯಿತು. ಆದರೆ ಆರಂಭಿಕ ಹಮ್ಜಾ ಜಹೂರ್ 42 ರನ್​ಗಳಿಗೆ ಔಟಾಗುವ ಮೂಲಕ ಈ ಜೊತೆಯಾಟ ಮುರಿದುಬಿತ್ತು. ನಂತರ ಉಸ್ಮಾನ್ ಖಾನ್ ಮತ್ತು ನಾಯಕ ಫರ್ಹಾನ್ ಯೂಸುಫ್ ನಿಧಾನಗತಿಯಾಗಿ ಇನ್ನಿಂಗ್ಸ್ ಕಟ್ಟಿದರು. ಇದೇ ವೇಳೆ ಉಸ್ಮಾನ್ ಖಾನ್ 77 ಎಸೆತಗಳಲ್ಲಿ 5 ಬೌಂಡರಿಗಳನ್ನು ಬಾರಿಸುವ ಮೂಲಕ ತಮ್ಮ ಅರ್ಧಶತಕ ಪೂರೈಸಿದರು.

ಟಿ20 ವಿಶ್ವಕಪ್‌ನಲ್ಲಿ ಒಂದೇ ತಂಡದ ಪರವಾಗಿ ಆಡಲಿದ್ದಾರೆ ಭಾರತ- ಪಾಕ್ ಮೂಲದ ಆಟಗಾರರು

ಭಾರತದ ಕರಾರುವಕ್ಕಾದ ದಾಳಿ

ಇತ್ತ ಫರ್ಹಾನ್ ಯೂಸುಫ್ 39 ಓವರ್‌ಗಳಲ್ಲಿ 38 ರನ್ ಗಳಿಸಿ ಔಟಾದರು. ಆ ನಂತರ, ಬ್ಯಾಟಿಂಗ್‌ಗೆ ಬಂದ ಅಹ್ಮದ್ ಹುಸೇನ್ ವಿಶೇಷವಾದ ಏನನ್ನೂ ಮಾಡಲು ಸಾಧ್ಯವಾಗದೆ 6 ಎಸೆತಗಳಲ್ಲಿ ಕೇವಲ 2 ರನ್ ಗಳಿಸಿ ಔಟಾದರು. ಹೀಗಾಗಿ ಪಾಕಿಸ್ತಾನ 33.3 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 167 ರನ್ ಗಳಿಸಿತು. ಮೇಲೆ ಹೇಳಿದಂತೆ ಭಾರತ ಗೆಲುವಿಗೆ ನಿಗದಿಪಡಿಸಿದ 252 ರನ್‌ಗಳ ಗುರಿಯನ್ನು 33.3 ಓವರ್‌ಗಳಲ್ಲಿ ಪೂರ್ಣಗೊಳಿಸಬೇಕಾಗಿತ್ತು. ಆದರೆ ಪಾಕಿಸ್ತಾನ ಗುರಿಯನ್ನು ತಲುಪುವಲ್ಲಿ ಯಶಸ್ವಿಯಾಗಲಿಲ್ಲ. ಆದ್ದರಿಂದ, ಈ ಪಂದ್ಯವನ್ನು ಪಾಕಿಸ್ತಾನ ಗೆದ್ದರೂ ಸಹ, ಅದು ಅಪ್ರಸ್ತುತವಾಗುತ್ತದೆ. ಏಕೆಂದರೆ ಭಾರತಕ್ಕೆ ಸೆಮಿಫೈನಲ್‌ಗೆ ಟಿಕೆಟ್ ಸಿಕ್ಕಿದೆ. ಭಾರತದ ನೆಟ್ ರನ್ ದರ ಪಾಕಿಸ್ತಾನಕ್ಕಿಂತ ಉತ್ತಮವಾಗಿದೆ. ಆದ್ದರಿಂದ, ಪಾಕಿಸ್ತಾನ ಈಗ ಗೆದ್ದರೂ ಸಹ, ಉಪಯೋಗಕ್ಕೆ ಬರುವುದಿಲ್ಲ. ಪ್ರಸ್ತುತ ಭಾರತದ ನೆಟ್ ರನ್​ರೇಟ್ +3.337 ಇದ್ದರೆ, ಪಾಕಿಸ್ತಾನದ ನೆಟ್ ರನ್​ರೇಟ್ +1.484 ಆಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 8:22 pm, Sun, 1 February 26

Source link

Leave a Reply

Your email address will not be published. Required fields are marked *