Headlines

Kalaburagi: ದೆಹಲಿ ಪೊಲೀಸರ ಸೋಗಲ್ಲಿ ದರೋಡೆ; ಸಿನಿಮಾ ಸ್ಟೈಲ್​​ನಲ್ಲಿ ಆರೋಪಿಗಳು ಲಾಕ್​​ – Kannada News | Kalaburagi Police Nab Fake Delhi Cops; Interstate Robbery Gang Arrested

ಬಂಧಿತ ಆರೋಪಿಗಳ ಜೊತೆ ಪೊಲೀಸರುImage Credit source: Tv9 Kannada

ಕಲಬುರಗಿ, ಫೆಬ್ರವರಿ 02: ದೆಹಲಿ ಪೊಲೀಸರ ಸೋಗಿನಲ್ಲಿ ದರೋಡೆ ಮಾಡ್ತಿದ್ದ ನಟೋರಿಯಸ್ ಗ್ಯಾಂಗ್​​ನ ಖೆಡ್ಡಾಕ್ಕೆ ಕೆಡವುವಲ್ಲಿ ಕೊನೆಗೂ ಕಲಬುರಗಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಗಳು ದೆಹಲಿ, ಮಹಾರಾಷ್ಟ್ರ, ತೆಲಂಗಾಣ ಸೇರಿದಂತೆ ಐದು ರಾಜ್ಯಗಳ ಪೊಲೀಸರ ನಿದ್ದೆಗೆಡಿಸಿದ್ದರು ಎನ್ನಲಾಗಿದ್ದು, ಅಂತಾರಾಜ್ಯ ದರೋಡೆ ಕೋರರಿಂದ ದೆಹಲಿ ಪೊಲೀಸರ ನಕಲಿ ಐಡಿ ಕಾರ್ಡ್​​ಗಳನ್ನ ವಶಪಡಿಸಿಕೊಳ್ಳಲಾಗಿದೆ. 90 ಗ್ರಾಂ ಚಿನ್ನಾಭರಣ ಸೇರಿದಂರೆ ಬರೋಬ್ಬರಿ 27 ಲಕ್ಷ ಮೌಲ್ಯದ ವಸ್ತುಗಳನ್ನ ಪೊಲೀಸರು ಜಪ್ತಿ ಮಾಡಿದ್ದಾರೆ.

ದೆಹಲಿ ಮತ್ತು ಭೂಪಾಲ್ ಮೂಲದ ಜಹೀರ್ ಅಬ್ಬಾಸ್ ಅಲಿ, ಖಾಸೀಂ ಯೂಸುಫ್ ಅಲಿ, ಅಲಿ ಮಿರ್ಜಾ, ಅಲಿ ರಾಜಾ ಶೇಖ್ ಬೇಗ್, ಲಾಲ್​​ಶೇಖ್​, ಜಫರ್ ಮತ್ತು ಜಫರ್ ಆಸೀಮ್ ಬಂಧಿತ ಆರೋಪಿಗಳಾಗಿದ್ದಾರೆ. ದೆಹಲಿ ಪೊಲೀಸರ ಸೋಗಿನಲ್ಲಿ ಸಾರ್ವಜನಿಕ ಚಿನ್ನಾಭರಣ ಲೂಟಿ ಮಾಡಿ ಗ್ಯಾಂಗ್​​ ಎಸ್ಕೇಪ್​​ ಆಗುತ್ತಿತ್ತು ಎನ್ನಲಾಗಿದ್ದು, ಕಳೆದ ವಾರವಷ್ಟೆ ತೆಲಂಗಾಣ ಮೆಹಬೂಬ್ ನಗರ ಜಿಲ್ಲೆಯ ಎರಡೂ ಕಡೆ ಖದೀಮರು ದರೋಡೆ ನಡೆಸಿದ್ದರು. ಬಳಿಕ ಕಲಬುರಗಿಗೆ ಎಂಟ್ರಿ ಕೊಟ್ಟಿದ್ದ ಈ ತಂಡದ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಸಬ್ ಅರ್ಬನ್ ಪೊಲೀಸರು ನಗರದ ತಾವರಗೇರಾ ಕ್ರಾಸ್ ಬಳಿ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ. ಇನ್ನು ಈ ಗ್ಯಾಂಗ್ ಸುಳಿವು ಕೊಟ್ಟವರಿಗೆ ದೆಹಲಿ ಪೊಲೀಸ್ ಇಲಾಖೆ 2 ಲಕ್ಷ ಬಹುಮಾನ ಘೋಷಣೆ ಮಾಡಿದ್ರೂ ಆರೋಪಿಗಳ ಸುಳಿವು ಸಿಕ್ಕಿರಲಿಲ್ಲ. ಆದರೆ ಕಲಬುರಗಿ ಪೊಲೀಸರ ಕೈಗೀಗ ಖದೀಮರು ಸಿಕ್ಕಿಬಿದ್ದಿದ್ದಾರೆ.

ಇದನ್ನೂ ಓದಿ: ಸಿನಿಮಾ ಸ್ಟೈಲಲ್ಲಿ ಯುವಕನ ಅಡ್ಡಗಟ್ಟಿ, ಲಾಂಗ್ ಬೀಸಿ 31 ಕ್ಷ ರೂ. ದರೋಡೆ; ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಯ್ತು ಭಯಾನಕ ಕೃತ್ಯ

ಇನ್ನು ಈ ಗ್ಯಾಂಗ್​​ನ ಏಳು ಜನರಲ್ಲಿ ಇಬ್ಬರು ಪಿಎಸ್​​ಐ ಎಂದು ಹೇಳಿಕೊಂಡು ಫೀಲ್ಡಿಗಿಳಿಯುತ್ತಿದ್ದರು. ಮುಂದೆ ಕಳ್ಳರು ಇದ್ದಾರೆಂದು ಹೆದ್ದಾರಿಯಲ್ಲಿ ತೆರಳುವ ಕಾರು ಮತ್ತು ಬೈಕ್​​ ಸವಾರರನ್ನು ನಂಬಿಸಿ, ನಿಮ್ಮ ಬಳಿ ಇರುವ ಚಿನ್ನಾಬರಣ ನಮ್ಮ ಬಳಿ ಕೊಡಿ ಎನ್ನುತ್ತಿದ್ದರು. ಅಷ್ಟರಲ್ಲಿ ಉಳಿದವರು ದರೋಡೆಕೋರರಂತೆ ಬಂದಾಗ ಅವರಿಂದ ಕಾಪಾಡಿದ್ದೇವೆ ಎಂಬಂತೆ ಬಿಂಬಿಸಿ ಚಿನ್ನಾಭರಣ ಪಡೆಯುತ್ತಿದ್ದ ಇಬ್ಬರು ನಕಲಿ ಅಧಿಕಾರಿಗಳು ಕ್ಷಣಮಾತ್ರದಲ್ಲಿ ಅವರಿಗೆ ನಕಲಿ ಚಿನ್ನಾಭರಣ ನೀಡುತ್ತಿದ್ದರು. ಇದೇ ರೀತಿ ದೆಹಲಿ, ಮಹಾರಾಷ್ಟ್ರ, ತೆಲಂಗಾಣ , ಮಧ್ಯಪ್ರದೇಶ, ಆಂಧ್ರ ಪ್ರದೇಶದ ಹಲವೆಡೆ ಲಕ್ಷ ಲಕ್ಷ ಮೌಲ್ಯದ ಚಿನ್ನಾಭರಣವನ್ನು ಆರೋಪಿಗಳು ಲೂಟಿ ಮಾಡಿದ್ದರು. ಅಲ್ಲದೇ ಇದೇ ಗ್ಯಾಂಗ್​​ನ ಆರೋಪಿಯೋರ್ವ ಕಲಬುರಗಿಯ ನೆಂಟಸ್ತನ ಮಾಡಿದ್ದ. ಹೀಗಾಗಿ ಇಲ್ಲಿ ರೂಂ ಮಾಡಿಕೊಂಡು ತೆಲಂಗಾಣದದಲ್ಲಿ ದರೋಡೆ ಮಾಡಲಾಗ್ತಿತ್ತು ಎಂಬ ವಿಚಾರವೂ ಬಯಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Leave a Reply

Your email address will not be published. Required fields are marked *