Headlines

Spiritual Reasons: ದೇವಸ್ಥಾನದಲ್ಲಿ ದೇವರ ವಿಗ್ರಹದ ಮುಂದೆ ಯಾಕೆ ಫೋಟೋ, ಸೆಲ್ಫಿ ತೆಗೆಯಬಾರದು? ಆಧ್ಯಾತ್ಮಿಕ ಕಾರಣ ಇಲ್ಲಿದೆ – Kannada News | Temple Photography Rules: Why Garbhagudi Photos are Forbidden? Expert Vastu Guide

ದೇವಸ್ಥಾನದಲ್ಲಿ ದೇವರ ವಿಗ್ರಹದ ಮುಂದೆ ಯಾಕೆ ಫೋಟೋ

ಸಾಕಷ್ಟು ಜನರಿಗೆ ಹೋದಲ್ಲಿ ಬಂದಲ್ಲಿ ಫೋಟೋ ತೆಗೆದುಕೊಳ್ಳುವ ಆಸೆ ಇರುತ್ತದೆ. ಹಿರಿಯರೊಂದಿಗೆ, ಕುಟುಂಬ ಸಮಾರಂಭಗಳಲ್ಲಿ ಅಥವಾ ಸುಂದರ ಪ್ರಕೃತಿಯ ಮಧ್ಯದಲ್ಲಿ ಸೆಲ್ಫಿ ತೆಗೆದುಕೊಳ್ಳುವುದು ಹೆಚ್ಚಾಗಿ ಬಿಟ್ಟಿದೆ. ಆದರೆ, ಕೆಲವು ನಿರ್ದಿಷ್ಟ ಸ್ಥಳಗಳಲ್ಲಿ ಸೆಲ್ಫಿ ತೆಗೆಸಿಕೊಳ್ಳುವುದು ಇದು ಅಷ್ಟು ಶುಭವಲ್ಲ. ಅದರಲ್ಲಿ ಮುಖ್ಯವಾಗಿ ದೇವಾಲಯಗಳಲ್ಲಿ, ವಿಶೇಷವಾಗಿ ಮೂಲ ವಿಗ್ರಹ ಅಥವಾ ಗರ್ಭಗುಡಿಯೊಳಗೆ ಸೆಲ್ಫಿ ಅಥವಾ ಫೋಟೋಗಳನ್ನು ತೆಗೆದುಕೊಳ್ಳುವುದು ಶುಭವಲ್ಲ ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ.

ಗುರೂಜಿಯವರು ಹೇಳುವಂತೆ, ದೇವಸ್ಥಾನಗಳಲ್ಲಿ ಮೂಲ ವಿಗ್ರಹಗಳನ್ನು ವಾಸ್ತು ಶಾಸ್ತ್ರದ ಪ್ರಕಾರ ಅತ್ಯಂತ ಶ್ರದ್ಧೆಯಿಂದ ಪ್ರತಿಷ್ಠಾಪಿಸಲಾಗುತ್ತದೆ. ಈ ವಿಗ್ರಹಗಳಿಗೆ ನಿರಂತರವಾಗಿ ಅಭಿಷೇಕಗಳು ನಡೆದು, ಅವು ಶಾಸ್ತ್ರೋಕ್ತವಾಗಿ ಪ್ರಾಣಪ್ರತಿಷ್ಠಾಪನೆಗೊಂಡಿರುತ್ತವೆ. ಭೂಸ್ಪರ್ಶದಲ್ಲಿರುವ ಇಂತಹ ವಿಗ್ರಹಗಳು ಪಂಚಭೂತಗಳ ನಿಯಂತ್ರಣದಲ್ಲಿರುತ್ತವೆ ಮತ್ತು ಅತೀಂದ್ರಿಯ ಶಕ್ತಿಯನ್ನು ಹೊಂದಿರುತ್ತವೆ. ನಾವು, ಮನುಷ್ಯರು, ನಿರಂತರವಾಗಿ ಚಲಿಸುತ್ತಿರುತ್ತೇವೆ ಮತ್ತು ನಮ್ಮ ದೇಹದಲ್ಲಿ ಅನೇಕ ನಕಾರಾತ್ಮಕ ಶಕ್ತಿಗಳೂ ಸಹ ಇರಬಹುದು. ಇಂತಹ ನಕಾರಾತ್ಮಕ ಅಂಶಗಳನ್ನು ಹೊಂದಿರುವ ದೇಹದಿಂದ, ದೈವಿಕ ಶಕ್ತಿಯ ಮೂಲವಾಗಿರುವ ಮೂಲ ವಿಗ್ರಹಗಳೊಂದಿಗೆ ಫೋಟೋ ತೆಗೆದುಕೊಳ್ಳುವುದು ಸೂಕ್ತವಲ್ಲ.

ದೇವತಾ ಮೂರ್ತಿಗಳೊಂದಿಗೆ ತೆಗೆದ ಫೋಟೋವನ್ನು ನೋಡಿದಾಗ, ಹಂಚಿಕೊಂಡಾಗ ಅಥವಾ ಅದು ಸಾರ್ವಜನಿಕವಾದಾಗ, ನಮ್ಮಲ್ಲಿರುವ ಧನಾತ್ಮಕ ಶಕ್ತಿಯು ಕ್ರಮೇಣ ಹೊರಟುಹೋಗುತ್ತದೆ. ಇದಕ್ಕೆ ಉದಾಹರಣೆಯಾಗಿ, ಸೂರ್ಯನ ಜೊತೆ ಯಾವುದೇ ಗ್ರಹವಿದ್ದರೂ ಅದು ತನ್ನ ಬಲವನ್ನು ಕಳೆದುಕೊಳ್ಳುತ್ತದೆ. ಪ್ರಸ್ತುತ ಸೂರ್ಯನ ಜೊತೆ ಶುಕ್ರನಿದ್ದು, ಶುಕ್ರನಿಗೆ ಬಲವಿಲ್ಲ. ಅಂತಹ ಸೂರ್ಯನ ಶಕ್ತಿಯ ಮುಂದೆ ಗ್ರಹಗಳೇ ತಮ್ಮ ಶಕ್ತಿ ಕಳೆದುಕೊಳ್ಳುವಾಗ, ಜಗದ್ವ್ಯಾಪಕ, ಸರ್ವಾಂತರ್ಯಾಮಿ, ಸರ್ವಶಕ್ತನಾದ ಭಗವಂತನ ವಿಗ್ರಹದ ಜೊತೆ ಫೋಟೋ ತೆಗೆದರೆ ನಮ್ಮ ಶಕ್ತಿ ಕುಂದುತ್ತದೆ.

ಇದನ್ನೂ ಓದಿ: ಈ ರಾಶಿಯವರು ತಪ್ಪಿಯೂ ಬೆಳ್ಳಿ ಧರಿಸಬೇಡಿ, ಆರ್ಥಿಕ ನಷ್ಟಕ್ಕೆ ಕಾರಣವಾಗಬಹುದು!

ಆದ್ದರಿಂದ, ಪ್ರತಿಷ್ಠಾಪಿತ ದೇವತಾ ಮೂರ್ತಿಗಳ ಜೊತೆ, ವಿಶೇಷವಾಗಿ ಗರ್ಭಗುಡಿಯ ಆ ಭಾಗದಲ್ಲಿ, ಫೋಟೋಗಳನ್ನು ತೆಗೆದುಕೊಳ್ಳಬಾರದು. ದೇವಸ್ಥಾನದ ಹೊರಗಡೆ ಅಥವಾ ಪರಿವಾರ ದೇವತೆಗಳಿರುವ ಸ್ಥಳಗಳಲ್ಲಿ ಫೋಟೋಗಳನ್ನು ತೆಗೆದುಕೊಳ್ಳಬಹುದೇ ಎಂದು ಪ್ರಶ್ನಿಸಿದರೆ, ಹೊರಗಿನ ಸ್ಥಳಗಳಲ್ಲಿ ಅಥವಾ ಸುಂದರವಾದ ಗಿಡಗಳು, ವಾತಾವರಣದ ಫೋಟೋಗಳನ್ನು ತೆಗೆದುಕೊಳ್ಳಬಹುದು. ಆದರೆ ಅಭಿಷೇಕ ಮತ್ತು ಅರ್ಚನೆಗೊಳ್ಳುವ ವಿಗ್ರಹಗಳೊಂದಿಗೆ ಫೋಟೋ ತೆಗೆಯುವುದು ನಿಷಿದ್ಧ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *