Headlines

ಮೈಸೂರಿನಲ್ಲಿ ಸಾಮಾಜಿಕ ಬಹಿಷ್ಕಾರ: ವಿದ್ಯುತ್ ಕಂಬ ಮುಟ್ಟಿದ್ದಕ್ಕೆ ಎಲೆಕ್ಟ್ರಿಷಿಯನ್ ಮೇಲೆ ಹಲ್ಲೆಗೆ ಮುಂದಾದ ಗ್ರಾಮಸ್ಥರು – Kannada News | Karnataka Caste Discrimination: Kottagala Villagers Boycott Family, Assault Helper

ಎಲೆಕ್ಟ್ರಿಷಿಯನ್ ಮೇಲೆ ಹಲ್ಲೆಗೆ ಮುಂದಾದ ಗ್ರಾಮಸ್ಥರು

ಮೈಸೂರು, ಫೆ.5: ಇಡೀ ಜಗತ್ತು ಆಧುನಿಕತೆ ಕಡೆ ಸಾಗುತ್ತಿದ್ದಾರೆ. ಆದರೆ ಭಾರತದಲ್ಲಿ ಇಂದಿಗೂ ಸಾಮಾಜಿಕ ಅನಿಷ್ಟಗಳು ಜೀವಂತವಾಗಿದೆ. ಅದರಲ್ಲೂ ಕರ್ನಾಟಕ ಇಂತಹ ಕೆಟ್ಟ ಪದ್ಧತಿಗಳು ಇಂದಿಗೂ ಆಚರಣೆಯಲ್ಲಿದೆ ಎಂದತೆ ನಂಬಲಿ ಅಸಾಧ್ಯ. ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಕೊತ್ತೆಗಾಲ ಗ್ರಾಮದಲ್ಲಿ ಸಾಮಾಜಿಕ ಬಹಿಷ್ಕಾರ ಮಾಡಿರುವ ಘಟನೆಯೊಂದು ನಡೆದಿದೆ. ಗ್ರಾಮದ ನಿವಾಸಿಗಳಾದ ವಸಂತ ಮತ್ತು ನಟನಾಯಕ ದಂಪತಿಯ ಪುತ್ರಿ ಅಂತರಜಾತಿ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದರು. ಈ ಮದುವೆಯನ್ನು ವಿರೋಧಿಸಿದ ಗ್ರಾಮದ ಕೆಲವು ಗುಂಪುಗಳು, ಆ ಕುಟುಂಬಕ್ಕೆ ಮತ್ತು ಅವರಿಗೆ ಸಹಾಯ ಮಾಡಿದವರಿಗೆ ‘ಸಾಮಾಜಿಕ ಬಹಿಷ್ಕಾರ’ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಈ ಬಹಿಷ್ಕಾರಕ್ಕೆ ಒಳಗಾದವರಲ್ಲಿ ಎಲೆಕ್ಟ್ರಿಷಿಯನ್ ವೆಂಕಟೇಶ್ ನಾಯಕ್ ಕೂಡ ಒಬ್ಬರು.

ವಿದ್ಯುತ್ ರಿಪೇರಿ ಕೆಲಸದ ನಿಮಿತ್ತ ಕರೆ ಬಂದಿದ್ದ ಕಾರಣ, ವೆಂಕಟೇಶ್ ನಾಯಕ್ ಅವರಿಗೆ ಸಂಬಂಧಿಸಿದ ವಿದ್ಯುತ್ ಕಂಬವನ್ನು ಪರಿಶೀಲಿಸುತ್ತಿದ್ದರು. ಈ ವೇಳೆ ಬಹಿಷ್ಕಾರಕ್ಕೆ ಒಳಗಾದ ನೀನು ವಿದ್ಯುತ್ ಕಂಬ ಮುಟ್ಟುವಂತಿಲ್ಲ ಎಂದು ರತ್ನಾಕರ, ರವಿ ಮತ್ತು ಕೆಲವು ಮಹಿಳೆಯರು ಕೆಲಸಕ್ಕೆ ಅಡ್ಡಿಪಡಿಸಿದ್ದಾರೆ. ವೆಂಕಟೇಶ್ ನಾಯಕ್ ಮತ್ತು ಅವರ ಮಗನ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದು, ಜಾತಿನಿಂದನೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಹೇಳಲಾಗಿದೆ. ಈ ಬಗ್ಗೆ ಪೊಲೀಸರಿಗೆ ದೂರು ಕೂಡ ನೀಡಲಾಗಿದೆ.

ಇದನ್ನೂ ಓದಿ: ರಾತ್ರಿ ವೇಳೆ ಮಹಿಳೆಯ ಮನೆಯಲ್ಲಿ ಸಿಕ್ಕಿಬಿದ್ದ ಕಾಂಗ್ರೆಸ್​​ ಮುಖಂಡ: ಹಿಗ್ಗಾಮುಗ್ಗಾ ಥಳಿಸಿದ ಯುವಕರು

ಈ ಅಮಾನವೀಯ ಘಟನೆಯ ಸಂಬಂಧ ವೆಂಕಟೇಶ್ ನಾಯಕ್ ಅವರು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಮತ್ತು ಪೊಲೀಸರಿಗೆ ದೂರು ನೀಡಿದ್ದಾರೆ. ರತ್ನಾಕರ, ರವಿ ಮತ್ತು ಕೆಲವು ಮಹಿಳೆಯರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ. ಪೊಲೀಸರು ಈ ಪ್ರಕರಣವನ್ನು SC/ST ದೌರ್ಜನ್ಯ ತಡೆ ಕಾಯ್ದೆಯಡಿ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಎಲೆಕ್ಟ್ರಿಷಿಯನ್ ವೆಂಕಟೇಶ್ ನಾಯಕ್ ಅವರು ದೂರು ನೀಡಿದ ಬೆನ್ನಲ್ಲೇ ಪೊಲೀಸರು ಮತ್ತು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ಈ ಪ್ರಕರಣದಲ್ಲಿ ಸಂಬಂಧಿಸಿದಂತೆ ಆರೋಪಿಗಳಾದ ರತ್ನಾಕರ, ರವಿ ಮತ್ತು ಇತರರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲಾಗಿದೆ. ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳು ಈಗಾಗಲೇ ಗ್ರಾಮಕ್ಕೆ ಭೇಟಿ ನೀಡಿದ್ದು, ಈ ಬಗ್ಗೆ ತನಿಖೆ ನಡೆಸುವುದಾಗಿ ಹೇಳಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *