ಮೆಟ್ರೋ ಟಿಕೆಟ್ ಬೆನ್ನಲ್ಲೇ ಬೆಂಗಳೂರಿನಲ್ಲಿ ಏರಿಕೆಯಾಗುತ್ತಾ ಕಾವೇರಿ ನೀರಿನ ದರ? ಜಲಮಂಡಳಿ ಅಧ್ಯಕ್ಷರಿಂದ ಸ್ಪಷ್ಟನೆ – Kannada News | No Proposal to Hike Cauvery Water Tariff in Bengaluru After Metro Fare Increase, Clarifies BWSSB Chairman

ಬೆಂಗಳೂರು, ಫೆಬ್ರವರಿ 5: ಬೆಂಗಳೂರಿನಲ್ಲಿ ಕುಡಿಯುವ ನೀರಿನ ದರ (Water Price) ಹೆಚ್ಚಳವಾಗಲಿದೆ ಎಂಬ ವದಂತಿಗಳಿಗೆ ಬೆಂಗಳೂರು ಜಲಮಂಡಳಿ (BWSSB) ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಬ್ರೇಕ್ ಹಾಕಿದ್ದಾರೆ. ನೀರಿನ ದರ ಏರಿಕೆ ಮಾಡುವ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಕಾವೇರಿ ನೀರಿನ ಬೆಲೆ ಏರಿಕೆ ಕುರಿತು ವದಂತಿಗಳು ಹಬ್ಬಿರುವ ಕಾರಣ ಬೆಂಗಳೂರಿನಲ್ಲಿ ‘ಟಿವಿ9’ಗೆ ಮಾಹಿತಿ ನೀಡಿದ ಅವರು, ಕಾವೇರಿ ನೀರಿನ ಬೆಲೆ ಏರಿಕೆ ಕುರಿತು ಹರಿದಾಡುತ್ತಿರುವ ಸುದ್ದಿಗಳು ಸಂಪೂರ್ಣ ವದಂತಿ ಎಂದು ಸ್ಪಷ್ಟಪಡಿಸಿದ್ದಾರೆ. ಕುಡಿಯುವ ನೀರಿನ ದರ ಹೆಚ್ಚಿಸುವ ಬಗ್ಗೆ ಜಲಮಂಡಳಿ ಯಾವುದೇ ಮಟ್ಟದಲ್ಲೂ ಚಿಂತನೆ ನಡೆಸಿಲ್ಲ ಹಾಗೂ ಇದಕ್ಕೆ ಸಂಬಂಧಿಸಿದಂತೆ ಯಾವುದೇ ಸಭೆ ಅಥವಾ ಚರ್ಚೆಯೂ ನಡೆದಿಲ್ಲ ಎಂದು ತಿಳಿಸಿದ್ದಾರೆ.

ಇದರಿಂದ ಬೆಂಗಳೂರಿನ ನಾಗರಿಕರು ಸದ್ಯದ ಮಟ್ಟಿಗೆ ನಿರಾಳರಾಗುವಂತಾಗಿದೆ.

ಕಳೆದ ವರ್ಷ (2025) ಏಪ್ರಿಲ್​​ನಲ್ಲಿ ಬೆಂಗಳೂರು ಜಲ ಮಂಡಳಿ ನೀರಿನ ದರ ಏರಿಕೆ ಮಾಡಿತ್ತು. 2014ರ ಅಕ್ಟೋಬರ್ ನಂತರ ನಗರದಲ್ಲಿ ನೀರಿನ ದರ ಏರಿಕೆ ಮಾಡಿಲ್ಲ. ಹೆಚ್ಚುತ್ತಿರುವ ವೆಚ್ಚಗಳನ್ನು ಸರಿದೂಗಿಸಲು ನೀರಿನ ದರ ಏರಿಕೆ ಮಾಡದೆ ಬೇರೆ ವಿಧಿಯಿಲ್ಲ ಎಂದು ಜಲಮಂಡಳಿಯು ದರ ಏರಿಕೆ ನಿರ್ಧಾರವನ್ನು ಸಮರ್ಥಿಸಿಕೊಂಡಿತ್ತು.

ಇದನ್ನೂ ಓದಿ: ಬೆಂಗಳೂರಿಗರಿಗೆ ಮೆಟ್ರೋ ದರ ಏರಿಕೆ ಬಿಸಿ: ಎಲ್ಲಿಂದ ಎಲ್ಲಿಗೆ ಎಷ್ಟಾಯ್ತು ಟಿಕೆಟ್ ಬೆಲೆ?

ಡೊಮೆಸ್ಟಿಕ್ ಕನೆಕ್ಷನ್​ಗೆ ಗರಿಷ್ಠ ಲೀಟರ್​ಗೆ ಒಂದು ಪೈಸೆ ಹೆಚ್ಚಳ ಮಾಡಲಾಗಿತ್ತು 0-8 ಸಾವಿರದೊಳಗೆ ಸ್ಲ್ಯಾಬ್​ಗೆ ಲೀಟರ್​ಗೆ 0.15 ಪೈಸೆ, 8-25 ಸಾವಿರದೊಳಗಿನ ಸ್ಲ್ಯಾಬ್​ಗೆ ಲೀಟರ್​ಗೆ 0.40 ಪೈಸೆ, 25 ಸಾವಿರ ಲೀಟರ್​ಗಿಂತ ಹೆಚ್ಚು ಬಳಕೆ ಮಾಡಿದ್ರೆ 0.80 ಪೈಸೆ, 50 ಸಾವಿರದಿಂದ 1 ಲಕ್ಷ ಲೀಟರ್ ನೀರು ಬಳಕೆಗೆ 1 ಪೈಸೆ ಹೆಚ್ಚಳ ಮಾಡಲಾಗಿತ್ತು. ಆ ಸಂದರ್ಭದಲ್ಲಿ ಮಾತನಾಡಿದ್ದ ರಾಮ ಪ್ರಸಾತ್ ಮನೋಹರ್, ನೀರಿನ ದರ ಪ್ರತಿ ವರ್ಷ ಏಪ್ರಿಲ್ 1ರಿಂದ ಶೇಕಡಾ 3ರಷ್ಟು ಹೆಚ್ಚಳವಾಗಲಿದೆ. ಸದ್ಯ ಗೃಹ ಬಳಕೆದಾರರಿಗೆ ತಿಂಗಳಿಗೆ 20-30 ರೂ. ಹೆಚ್ಚುವರಿ ಹೊರೆಯಾಗಬಹುದು. ವಾಣಿಜ್ಯ ಬಳಕೆದಾರರಿಗೆ ಪ್ರತಿ ತಿಂಗಳು 50-60 ರೂ. ಹೊರೆಯಾಗಬಹುದು ಎಂದು ಹೇಳಿದ್ದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *