ಬೆಂಗಳೂರು, (ಫೆಬ್ರವರಿ 05): ನಮ್ಮ ಮೆಟ್ರೋ ಬೆಂಗಳೂರಿಗರ (Bengaluru Namma Metro) ಜೀವನಾಡಿಗಳಲ್ಲಿ ಒಂದು.ಬೆಂಗಳೂರು ಟ್ರಾಫಿಕ್ ಕಿರಿಕಿರಿಯಿಂದ ತಪ್ಪಿಸಿಕೊಳ್ಳಲು ಜನ ಮೆಟ್ರೋ ಹತ್ತುತ್ತಾರೆ. ಆದ್ರೆ ಮೆಟ್ರೋ ಟಿಕೆಟ್ ದರವೇ ಸಿಟಿ ಮಂದಿಗೆ ದೊಡ್ಡ ಕಿರಿಕಿರಿಯಾಗಿ ಬದಲಾಗಿದೆ. ಫೆಬ್ರವರಿ 9ನೇ ತಾರೀಕಿನಿಂದ ಮೆಟ್ರೋ ಪ್ರಯಾಣ ದರ ಏರಿಕೆ ಆಗಲಿದೆ. ಈ ಬಗ್ಗೆ ಏರಿಕೆ ಮಾಡಿದ್ದು ನಾವಲ್ಲ, ನಾವಲ್ಲ ಎಂದು ಬಿಜೆಪಿ, ಕಾಂಗ್ರೆಸ್ ನಡುವೆ ಸಮರ ನಡೆಯುತ್ತಿದೆ. ಇನ್ನು ಈ ಬಗ್ಗೆ ಬಿಎಂಆರ್ಸಿಎಲ್ CPRO ಯಶವಂತ್ ಚೌವ್ಹಾಣ್ ಮಾತನಾಡಿದ್ದು, ನಮ್ಮ ಮೆಟ್ರೋ ಟಿಕೆಟ್ ದರ ಹೆಚ್ಚಳದ ಬಗ್ಗೆ ವಿವರಿಸಿದ್ದಾರೆ.