Headlines

‘ಸಂಘಕ್ಕೆ ಭೇಟಿ ಕೋಡಿ’; ಪ್ರಕಾಶ್ ರಾಜ್​​​ಗೆ ಜಗ್ಗೇಶ್ ಆಹ್ವಾನ – Kannada News | Jaggesh Invites Critics to Understand RSS: Prakash Belawadi’s Eye Opening Experience

ಇತ್ತೀಚೆಗೆ ಆರ್​​ಎಸ್​​ಎಸ್​ ಬಗ್ಗೆ ಶಾಸಕ ಶಿವಲಿಂಗೇಗೌಡ ಅವರು ಹಗುರವಾಗಿ ಮಾತನಾಡಿದ್ದು, ಸಂಘದವರನ್ನು ಕೆರಳಿಸಿತ್ತು. ಅವರು ಮಾತನಾಡಿದ್ದು ಸರಿ ಇಲ್ಲ ಎಂದು ಸಂಘದ ಅನೇಕ ಕಾರ್ಯಕರ್ತರು ಹೇಳಿದ್ದರು. ಈಗ ನಟ ಹಾಗೂ ರಾಜ್ಯ ಸಭಾ ಸದಸ್ಯ ಜಗ್ಗೇಶ್ ಈ ಬಗ್ಗೆ ಮಾತನಾಡಿದ್ದಾರೆ. ಹಗುರವಾಗಿ ಮಾತನಾಡುವವರಿಗೆ, ಸಂಘದ ಬಗ್ಗೆ ತಪ್ಪು ತಿಳಿದವರಿಗೆ ಅವರು ಸಂಘಕ್ಕೆ ಬರುವಂತೆ ಆಹ್ವಾನ ನೀಡಿದ್ದಾರೆ.

ಪ್ರಕಾಶ್ ರಾಜ್ ಅವರಿಗೆ ಈ ರೀತಿ ಆಹ್ವಾನ ಕೊಡುವಾಗ ಜಗ್ಗೇಶ್ ಅವರು ಪ್ರಕಾಶ್ ಬೆಳವಾಡಿಯ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಪ್ರಕಾಶ್ ಬೆಳವಾಡಿ ಅವರು ರಂಗಭೂಮಿ ಹಿನ್ನೆಲೆಯಿಂದ ಬಂದವರು. ಅವರಿಗೆ ಆರ್​​ಎಸ್​ಎಸ್ ಬಗ್ಗೆ ತಪ್ಪು ತಿಳುವಳಿಕೆ ಇತ್ತಂತೆ. 10ನೇ ವಯಸ್ಸಿನಲ್ಲಿದ್ದಾಗ ಪ್ರಕಾಶ್ ಬೆಳವಾಡಿ ತಾಯಿ ಶಾಖೆಗೆ ಹೋಗುವಂತೆ ಒತ್ತಾಯ ಮಾಡಿದ್ದರು. ಆದರೆ, ಆಗ ಹೋಗೋದಿಲ್ಲ ಎಂದು ಅವರು ಹಠ ಹಿಡಿದರು.

ಪ್ರಕಾಶ್ ಯುವಕರಾಗಿದ್ದಾಗ ಒಮ್ಮೆ 15-20 ಆರ್​ಎಸ್​ಎಸ್​ ಕಾರ್ಯಕರ್ತರು ಇವರ ಮನೆಗೆ ಆಗಮಿಸಿದರಂತೆ. ಅವರು ಬಯ್ಯುತ್ತಾರೆ ಎಂದು ಪ್ರಕಾಶ್ ಬೆಳವಾಡಿ ಅಂದುಕೊಂಡರು. ಆದರೆ, ‘ನಿಮ್ಮ ತಿಳುವಳಿಕೆ ತಪ್ಪು, ಒಮ್ಮೆ ಶಾಖೆಗೆ ಬನ್ನಿ’ ಎಂದು ಆಹ್ವಾನ ಕೊಟ್ಟರಂತೆ. ಪ್ರಕಾಶ್ ಆಹ್ವಾನ ಸ್ವೀಕರಿಸಿ ತೆರಳಿದರು.

ಇದನ್ನೂ ಓದಿ: ಟೆಂಟ್ ಹಾಕಿ ಮಲಗಬಹುದು; ಹೈಲಕ್ಸ್ ಖರೀದಿಸಿ ಮಾಡಿಫಿಕೇಷನ್​ ಮಾಡಿಸಿದ ಪ್ರಕಾಶ್ ರಾಜ್

ಬ್ರಾಹ್ಮಣರು ಮಾತ್ರ ಆರ್​​ಎಸ್​​ಎಸ್​ ಅಲ್ಲಿರ್ತಾರೆ ಅಂದುಕೊಂಡಿದ್ದರು ಪ್ರಕಾಶ್. ಆದರೆ, ಅದು ತಪ್ಪು ಅನ್ನೋದು ಗೊತ್ತಾಯ್ತು. ಎಲ್ಲಾ ಸಮುದಾಯದ ಜನರಿದ್ದಾರೆ, ತುಂಬಾ ಜ್ಞಾನಿಗಳಿದ್ದಾರೆ ಎಂಬುದು ಅವರಿಗೆ ಅರಿವಾಯಿತು.

ಈ ವಿಡಿಯೋನ ಜಗ್ಗೇಶ್ ಹಂಚಿಕೊಂಡಿದ್ದಾರೆ. ಅದಕ್ಕೆ ಜಗ್ಗೇಶ್ ಕ್ಯಾಪ್ಶನ್ ನೀಡಿದ್ದಾರೆ. ‘ಇತ್ತೀಚಿಗೆ ಒಬ್ಬ ದಡ್ಡ ಶಾಸಕ ವಿಧಾನಸಭೆಯಲ್ಲಿ ಹಾಗು ಒಬ್ಬ ಅಜ್ಞಾನಿ ಶಾಸಕ ವಿಧಾನಪರಿಷತ್​ನಲ್ಲಿ ಆರ್​​ಎಸ್​​ಎಸ್​ ಸಂಘಟನೆ ಬಗ್ಗೆ ಲಘುವಾಗಿ ಮಾತಾಡಿದರು. ಸಂಘದ ಬಗ್ಗೆ ಹೀಗೆ ಅರಿವಿರದ ಅನೇಕರು ಇದ್ದಾರೆ. ಜೊತೆಗೆ ಕಲಾವಿದ ಪ್ರಕಾಶ್ ರಾಜ್
ಇವರಂತೆ ಸಂಘಕ್ಕೆ ಒಮ್ಮೆ ಭೇಟಿಕೊಡಿ ಮನಸ್ಥಿತಿ ಬದಲಾಗಿ ಸಂಘದ ದೇಶ ಚಿಂತನೆ ಅರಿವಾಗುತ್ತೆ’ ಎಂದಿದ್ದಾರೆ ಅವರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *