2026 ರ ಟಿ20 ವಿಶ್ವಕಪ್ ಪ್ರಾರಂಭವಾಗಿದೆ. ಹಾಲಿ ಚಾಂಪಿಯನ್ ಟೀಂ ಇಂಡಿಯಾ ತನ್ನ ಮೊದಲ ಪಂದ್ಯವನ್ನು ಯುನೈಟೆಡ್ ಸ್ಟೇಟ್ಸ್ ವಿರುದ್ಧ ಆಡುತ್ತಿದೆ. ಈ ಪಂದ್ಯವನ್ನು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಆಯೋಜಿಸಲಾಗುತ್ತಿದೆ. ಸೂರ್ಯಕುಮಾರ್ ಯಾದವ್ ಮುಂಬೈ ತಂಡದ ನಾಯಕರಾಗಿದ್ದಾರೆ. ಮೂಲತಃ ಗುಜರಾತ್‌ನವರಾದ ಮೋನಾಂಕ್ ಪಟೇಲ್ ಯುಎಸ್ಎ ತಂಡದ ನಾಯಕರಾಗಿದ್ದಾರೆ. ಟೀಂ ಇಂಡಿಯಾ ಕಳೆದ ವಿಶ್ವಕಪ್‌ನಲ್ಲಿ ಯುಎಸ್ಎಯನ್ನು ಸೋಲಿಸಿತ್ತು. ಅಲ್ಲದೆ, ಯುಎಸ್ಎ ಉತ್ತಮ ಹೋರಾಟ ನೀಡಿತ್ತು. ಇದೀಗ ಎರಡನೇ ಬಾರಿಗೆ ಉಭಯ ತಂಡಗಳು ಮುಖಾಮುಖಿಯಾಗುತ್ತಿದ್ದು, ಯಾರದ್ದು ಮೇಲುಗೈಯಾಗುತ್ತದೆ ಎಂಬುದನ್ನು ಕಾದುನೋಡಬೇಕಿದೆ.
ಭಾರತ ತಂಡದಲ್ಲಿ 3 ಬದಲಾವಣೆ
ಈ ಪಂದ್ಯದಲ್ಲಿ ಟಾಸ್ ಗೆದ್ದ ಅಮೆರಿಕ ಮೊದಲು ಬೌಲಿಂಗ್ ಆಯ್ಕೆ ಮಾಡಿತು. ಹೀಗಾಗಿ ಭಾರತ ಮೊದಲು ಬ್ಯಾಟಿಂಗ್ ಮಾಡಲಿದೆ. ಟಾಸ್ ಬಳಿಕ ಮಾತನಾಡಿದ ಅಮೆರಿಕದ ನಾಯಕ ಮೋನಾಂಕ್ ಪಟೇಲ್ ತಮ್ಮ ಪ್ಲೇಯಿಂಗ್ ಹನ್ನೊಂದರಲ್ಲಿ ಆರು ಬ್ಯಾಟ್ಸ್‌ಮನ್‌ಗಳು, ಇಬ್ಬರು ಆಲ್‌ರೌಂಡರ್‌ಗಳು ಮತ್ತು ಮೂವರು ಬೌಲರ್‌ಗಳು ಸೇರಿದ್ದಾರೆ ಎಂದರು. ಇತ್ತ ವಾಷಿಂಗ್ಟನ್ ಸುಂದರ್, ಸಂಜು ಸ್ಯಾಮ್ಸನ್ ಹಾಗೂ ಜಸ್ಪ್ರೀತ್ ಬುಮ್ರಾ ಟಿ20 ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ಆಡುತ್ತಿಲ್ಲ ಎಂದರು. ಬುಮ್ರಾ ಜ್ವರದಿಂದ ಬಳಲುತ್ತಿದ್ದು, ಅವರಿಗೆ ವಿಶ್ರಾಂತಿ ನೀಡಲಾಗಿದೆ. ಹೀಗಾಗಿ ಹರ್ಷಿತ್ ರಾಣಾ ಬದಲಿಗೆ ಬಂದಿರುವ ಮೊಹಮ್ಮದ್ ಸಿರಾಜ್ ಪ್ಲೇಯಿಂಗ್ 11 ನಲ್ಲಿ ಸ್ಥಾನ ಪಡೆದಿದ್ದಾರೆ.
ಉಭಯ ತಂಡಗಳು
ಭಾರತ ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಶಿವಂ ದುಬೆ, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ಅರ್ಷದೀಪ್ ಸಿಂಗ್, ರಿಂಕು ಸಿಂಗ್, ವರುಣ್ ಚಕ್ರವರ್ತಿ, ಅಕ್ಸರ್ ಪಟೇಲ್, ಮೊಹಮ್ಮದ್ ಸಿರಾಜ್.
ಯುಎಸ್ಎ ತಂಡ: ಸೈತೇಜ ಮುಕ್ಕಮಲ್ಲ, ಆಂಡ್ರೀಸ್ ಗಾಸ್ (ವಿಕೆಟ್ ಕೀಪರ್), ಮೊನಾಂಕ್ ಪಟೇಲ್ (ನಾಯಕ), ಮಿಲಿಂದ್ ಕುಮಾರ್, ಸಂಜಯ್ ಕೃಷ್ಣಮೂರ್ತಿ, ಹರ್ಮೀತ್ ಸಿಂಗ್, ಶುಭಂ ರಂಜನೆ, ಮೊಹಮ್ಮದ್ ಮೊಹ್ಸಿನ್, ಶಾಡ್ಲಿ ವ್ಯಾನ್ ಶಾಲ್ಕ್‌ವಿಕ್, ಸೌರಭ್ ನೇತ್ರವಾಲ್ಕರ್, ಅಲಿ ಖಾನ್.