Headlines

Ballari: ತೆಕ್ಕಲಕೋಟೆ ಬಳಿ ಉತ್ಖನನದ ವೇಳೆ ಸಾವಿರಾರು ವರ್ಷಗಳ ಹಿಂದಿನ ಅಸ್ಥಿಪಂಜರ ಪತ್ತೆ – Kannada News | 3,000–5,000 Year Old Human Skeleton Found in Tekkalakote, Ballari

ಬಳ್ಳಾರಿ, ಫೆಬ್ರವರಿ 08: ಜಿಲ್ಲೆಯ ತೆಕ್ಕಲಕೋಟೆ ಪಟ್ಟಣದ ಗೌಡ್ರ ಮೂಲೆ ಬೆಟ್ಟದಲ್ಲಿ ನಡೆದ ಉತ್ಖನನದ ವೇಳೆ ಸುಮಾರು 3-5 ಸಾವಿರ ವರ್ಷಗಳ ಹಿಂದಿನ ಮಾನವ ಅಸ್ಥಿಪಂಜರ ಪತ್ತೆಯಾಗಿದೆ. ಕಳೆದ ವಾರ ಉತ್ಖನನ ನಡೆಸುತ್ತಿದ್ದಾಗ ಮಾನವ ಮೂಳೆಗಳು ಕಂಡುಬಂದಿದ್ದು, ನಂತರ ಆಳವಾಗಿ ಅಗೆದಾಗ 5.5 ಅಡಿ ಉದ್ದದ ಸಂಪೂರ್ಣ ಅಸ್ಥಿಪಂಜರವು ಪತ್ತೆಯಾಗಿದೆ. ಕಲ್ಲುಗಳನ್ನು ಇರಿಸಿ ಶವ ಸಂಸ್ಕಾರ ಮಾಡಿದ ಸ್ಥಿತಿಯಲ್ಲಿ ಈ ಅಸ್ಥಿಪಂಜರ ದೊರೆತಿದೆ. ಇದು ನೂತನ ಶಿಲಾಯುಗ ಕಾಲಕ್ಕೆ ಸಂಬಂಧಪಟ್ಟಿರಬಹುದು ಎಂದು ತಜ್ಞರು ಹೇಳಿದ್ದು, ನಿಖರವಾದ ಮಾಹಿತಿ ಪಡೆಯಲು ಕಾರ್ಬನ್ ಡೇಟಿಂಗ್ ಅಧ್ಯಯನ ನಡೆಸಲು ಅಧಿಕಾರಿಗಳು ಮುಂದಾಗಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Leave a Reply

Your email address will not be published. Required fields are marked *