ಬೆಂಗಳೂರು, (ಫೆಬ್ರವರಿ 08): ಕರ್ನಾಟಕದಾದ್ಯಂತ 100 ಕಡೆಗಳಲ್ಲಿ ಕಾಂಗ್ರೆಸ್ ಭವನ (Congress Bhavana) ನಿರ್ಮಾಣಕ್ಕೆ ಪಕ್ಷ ಮುಂದಾಗಿದೆ. ತಾಲೂಕು ಕೇಂದ್ರಗಳಲ್ಲೂ ಕಾಂಗ್ರೆಸ್ ಭವನ ಮಾಡಲು ತೀರ್ಮಾನಿಸಲಾಗಿದ್ದು, ಇದಕ್ಕಾಗಿ ಕೋಟಿ ಕೋಟಿ ಬೆಲೆ ಬಾಳುವ ಸಿಎ ಸೈಟ್ಗಳನ್ನು ಕಾಂಗ್ರೆಸ್ ಟ್ರಸ್ಟ್ಗೆ ಮಂಜೂರು ಮಾಡುವಂತೆ ರಾಜ್ಯ ಸರ್ಕಾರ ಪತ್ರ ಬರೆದಿದೆ. ಹೌದು. ಪ್ರತಿ ತಾಲೂಕಿನಲ್ಲಿ ಕಾಂಗ್ರೆಸ್ ಭವನಕ್ಕೆ ಮುಂದಾಗಿರೋ ಕೆಪಿಸಿಸಿಗೆ ಈ ಜಾಗವನ್ನ ಪೌರಾಡಳಿತ ಇಲಾಖೆ ಕೊಟ್ಟಿದೆ. ಇನ್ನೂ 13 ಜಿಲ್ಲೆಗಳಲ್ಲಿ ಪುರಸಭೆ, ನಗರ ಸಭೆಗಳ ಜಾಗವನ್ನ ಕಾಂಗ್ರೆಸ್ ಭವನ ಕಟ್ಟಲು ಕೊಟ್ಟಿರೋ ಪೌರಾಡಳಿತ ಇಲಾಖೆ ಕೊಟ್ಟಿದೆ. ಕಾನೂನು ಇಲಾಖೆ ವಿರೋಧದ ನಡುವೆಯೂ ಕಾಂಗ್ರೆಸ್ ಭವನಕ್ಕೆ ಜಾಗ ಕೊಟ್ಟಿರೋ ಬಗ್ಗೆಯೂ ಆರೋಪ ಇದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ವಿಡಿಯೋನಲ್ಲಿ ನೋಡಿ.