Headlines

Ranji Trophy: ಬಲಿಷ್ಠ ಮುಂಬೈ ಮಣಿಸಿ ಸೆಮಿಫೈನಲ್​ಗೇರಿದ ಕರ್ನಾಟಕ – Kannada News | Karnataka Dominates Mumbai in Ranji QF: KL Rahul Century Secures Semis Berth

ಮುಂಬೈನ ಎಂಸಿಎ ಕ್ರೀಡಾಂಗಣದಲ್ಲಿ ನಡೆದ ಕರ್ನಾಟಕ ಹಾಗೂ ಮುಂಬೈನ ನಡುವಿನ ರಣಜಿ ಟ್ರೋಫಿ 2025-26 ರ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬಲಿಷ್ಠ ಮುಂಬೈ ತಂಡವನ್ನು ಮಣಿಸಿದ ಕರ್ನಾಟಕ ತಂಡ ಸೆಮಿಫೈನಲ್ ಸುತ್ತಿಗೆ ಅರ್ಹತೆ ಪಡೆದುಕೊಂಡಿದೆ. ಗೆಲುವಿಗೆ ಮುಂಬೈ ನೀಡಿದ 326 ರನ್​ಗಳ ಗುರಿಯನ್ನು ಕರ್ನಾಟಕ ತಂಡ 6 ವಿಕೆಟ್​ಗಳ ನಷ್ಟಕ್ಕೆ ನಾಲ್ಕನೇ ದಿನದಾಟದ ಎರಡನೇ ಸೆಷನ್​ನಲ್ಲಿ ಬೆನ್ನಟ್ಟುವ ಮೂಲಕ ಜಯದ ನಗೆ ಬೀರಿತು. ಕರ್ನಾಟಕ ತಂಡದ ಈ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಅನುಭವಿ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ 130 ರನ್​ಗಳ ಇನ್ನಿಂಗ್ಸ್ ಆಡಿದರು. ರಾಹುಲ್​ಗೆ ಸಾಥ್ ನೀಡಿದ ಆರ್​. ಸ್ಮರಣ್ ಕೂಡ ಅಜೇಯ 83 ರನ್ ಬಾರಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.

Source link

Leave a Reply

Your email address will not be published. Required fields are marked *