Headlines

ಚಲಿಸುತ್ತಿದ್ದ KSRTC ಬಸ್‌ನ ಆಕ್ಸೆಲ್ ಕಟ್​​: ಕೂದಲೆಳೆಯ ಅಂತರದಲ್ಲಿ ತಪ್ಪಿದ ಭಾರೀ ದುರಂತ – Kannada News | Ksrtc bus axle snaps in chamarajanagar major tragedy averted

ಚಾಮರಾಜನಗರ, ಫೆಬ್ರವರಿ 10: ಜಿಲ್ಲೆಯ ತ್ರಯಂಬಕಪುರ ಗೇಟ್ ಬಳಿ ಚಲಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನ ಆಕ್ಸೆಲ್ ಏಕಾಏಕಿ ಕಟ್ ಆಗಿದ್ದು, ಸಂಭವನೀಯ ದೊಡ್ಡ ದುರಂತವೊಂದು ಕೂದಲೆಳೆಯ ಅಂತರದಲ್ಲಿ ತಪ್ಪಿದೆ. ಚಾಮರಾಜನಗರದಿಂದ ಗುಂಡ್ಲುಪೇಟೆಗೆ ತೆರಳುತ್ತಿದ್ದ ಸಾರಿಗೆ ಬಸ್​ನ ಆಕ್ಸೆಲ್ ಮುರಿದ ಕಾರಣ ಬಸ್ ಮಾರ್ಗ ಮಧ್ಯದಲ್ಲೇ ನಿಂತಿದೆ. ಇದರಿಂದಾಗಿ ಶಾಲೆ-ಕಾಲೇಜುಗಳಿಗೆ ತೆರಳುತ್ತಿದ್ದ ವಿದ್ಯಾರ್ಥಿಗಳು ಮತ್ತು ಪ್ರಯಾಣಿಕರಿಗೆ ತೀವ್ರ ತೊಂದರೆ ಅನುಭವಿಸಿದ್ದಾರೆ. ಬಸ್‌ಗಳ ಸ್ಥಿತಿಗತಿಯನ್ನು ಪರಿಶೀಲಿಸದೆ ಹೇಗೆ ಡಿಪೋದಿಂದ ಹೊರಗೆ ಕಳುಹಿಸಲಾಗುತ್ತದೆ ಎಂದು ಪ್ರಯಾಣಿಕರು ಪ್ರಶ್ನಿಸಿದ್ದು, ಒಂದು ಸಣ್ಣ ಎಡವಟ್ಟಾಗಿದ್ದರೂ ಕೂಡ ದೊಡ್ಡ ಅನಾಹುತವೇ ಸಂಭವಿಸುತ್ತಿತ್ತು ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Leave a Reply

Your email address will not be published. Required fields are marked *