Headlines

ಫೆಬ್ರವರಿ 14ರಂದು ‘ಕಲರ್ಸ್‌ ದೊಡ್ಮನೆ ಹಬ್ಬ’: ಸತತ 3 ಗಂಟೆಗಳ ಮನರಂಜನೆ – Kannada News | BBK 12 Gilli Nata Colors Dodmane Habba special show on 14 February on Colors Kannada

ಬಿಗ್ ಬಾಸ್ ಮುಗಿಯಿತು, ಮುಂದೇನು ಎಂದು ಕೇಳುತ್ತಿದ್ದ ವೀಕ್ಷಕರಿಗೆ ಇಲ್ಲಿದೆ ಮಸ್ತ್ ಅವಕಾಶ. ‘ಬಿಗ್ ಬಾಸ್ ಕನ್ನಡ 12’ (BBK 12) ಮುಕ್ತಾಯದ ನಂತರವೂ ಆ ಗುಂಗಿನಲ್ಲೇ ಇರುವ ಅಭಿಮಾನಿಗಳಿಗೆ ‘ಕಲರ್ಸ್ ಕನ್ನಡ’ (Colors Kannada) ವಾಹಿನಿಯು ಭರ್ಜರಿ ಉಡುಗೊರೆಯೊಂದನ್ನು ನೀಡಲು ಮುಂದಾಗಿದೆ. ಫೆಬ್ರವರಿ 14ರಂದು ‘ಕಲರ್ಸ್‌ ದೊಡ್ಮನೆ ಹಬ್ಬ’ (Colors Dodmane Habba) ಎಂಬ ಅದ್ದೂರಿ ಕಾರ್ಯಕ್ರಮ ಪ್ರಸಾರ ಆಗಲಿದೆ. ಸತತ ಮೂರು ಗಂಟೆಗಳ ಕಾಲ ವೀಕ್ಷಕರನ್ನು ರಂಜಿಸಲಿದೆ ಈ ಕಾರ್ಯಕ್ರಮ. ಫೆಬ್ರವರಿ 14ರಂದು ಕರುನಾಡಿನ ಮನೆ ಮಂದಿಯೆಲ್ಲ ಕುಳಿತು ನೋಡಬಹುದಾದ ಅತ್ಯುತ್ತಮ ಕಾರ್ಯಕ್ರಮ ಇದಾಗಲಿದೆ ಎಂದು ವಾಹಿನಿ ಹೇಳಿದೆ.

‘ಕಲರ್ಸ್‌ ದೊಡ್ಮನೆ ಹಬ್ಬ’ ಕಾರ್ಯಕ್ರಮ ಫೆ.14ರಂದು ಸಂಜೆ 6 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ‘ಕಲರ್ಸ್‌ ಕನ್ನಡ’ ವಾಹಿನಿಯಲ್ಲಿ ಪ್ರಸಾರವಾಗಲಿದೆ. ‘ಬಿಗ್ ಬಾಸ್ ಕನ್ನಡ ಸೀಸನ್‌ 12’ರ ಎಲ್ಲ ಸ್ಪರ್ಧಿಗಳು ಹೊರಬಂದ ಮೇಲೆ ಇದೇ ಮೊದಲ ಬಾರಿಗೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅದು ಈ ಕಾರ್ಯಕ್ರಮದ ವಿಶೇಷ ಆಗಿರಲಿದೆ.

ಬಿಗ್ ಬಾಸ್ ಮನೆಯೊಳಗಿನ ಗಂಭೀರ ವಾತಾವರಣದ ಬದಲು ಇಲ್ಲಿ ಕೇವಲ ನಗು, ಹರಟೆ ಮತ್ತು ಸಂಭ್ರಮಕ್ಕೆ ಮಾತ್ರ ಆದ್ಯತೆ ನೀಡಲಾಗಿದೆ. ನಕ್ಕು ನಗಿಸುವ ಸಾಕಷ್ಟು ಝಲಕ್‌ಗಳು ‘ಕಲರ್ಸ್‌ ದೊಡ್ಮನೆ ಹಬ್ಬ’ದ ಹೈಲೈಟ್‌ ಆಗಿರಲಿವೆ. ‘ಭಾಗ್ಯಲಕ್ಷ್ಮೀ’ ಸೀರಿಯಲ್‌ ನಟಿ ಹಾಗೂ ನಿರೂಪಕಿ ಸುಷ್ಮಾ ರಾವ್ ಅವರು ಲವಲವಿಕೆಯಿಂದ ಈ ಕಾರ್ಯಕ್ರಮಕ್ಕೆ ಮೆರುಗು ನೀಡಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ಕೇವಲ ಹಾಡು, ಕುಣಿತ ಮಾತ್ರವಲ್ಲದೇ ಬಿಗ್ ಬಾಸ್ ಮನೆಯ ಟಾಸ್ಕ್‌ಗಳನ್ನು ನೆನಪಿಸುವಂತಹ ತಮಾಷೆಯ ಗೇಮ್‌ಗಳನ್ನು ಸುಷ್ಮಾ ಅವರು ಆಡಿಸಿ ರಂಜಿಸಿದ್ದಾರೆ. ಇದು ಸ್ಪರ್ಧಿಗಳ ನಡುವಿನ ಹಳೆಯ ಕಾಲೆಳೆಯುವ ಗುಣವನ್ನು ಮತ್ತೆ ನೆನಪಿಸಲಿದೆ. ಈ ಬಾರಿ ಬಿಗ್ ಬಾಸ್‌ ಮನೆಯಲ್ಲಿ ಅತಿ ಹೆಚ್ಚು ಚರ್ಚೆಗೆ ಒಳಗಾದ ಗಿಲ್ಲಿ ನಟ ಕೂಡ ಇದರಲ್ಲಿ ಭಾಗಿ ಆಗಿದ್ದಾರೆ.

ಇದನ್ನೂ ಓದಿ: ಫೆ.27ಕ್ಕೆ ಗಿಲ್ಲಿ ಸಿನಿಮಾ ‘ಸೂಪರ್ ಹಿಟ್’ ರಿಲೀಸ್; ಈಗಲೇ ಬಂದಿದೆ ಒಟಿಟಿ ಡಿಮ್ಯಾಂಡ್

‘ಬಿಗ್ ಬಾಸ್ ಕನ್ನಡ ಸೀಸನ್ 12’ ವಿನ್ನರ್ ಗಿಲ್ಲಿ ನಟ ಅವರ ಅಭಿಮಾನಿಗಳಿಗಾಗಿಯೇ ಈ ಕಾರ್ಯಕ್ರಮದಲ್ಲಿ ವಿಶೇಷ ವೇದಿಕೆ ಕಲ್ಪಿಸಲಾಗಿದೆ. ಅವರ ಬಿಗ್‌ ಬಾಸ್‌ ಜರ್ನಿಯನ್ನು ಸಂಭ್ರಮಿಸುವ ಜೊತೆಗೆ, ಫ್ಯಾನ್ಸ್‌ ಸಹ ಈ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *