Headlines

ತಮನ್ನಾರ ಹಾಟ್ ಅವತಾರ ನೋಡುವ ಕಾತರದಲ್ಲಿದ್ದ ಅಭಿಮಾನಿಗಳಿಗೆ ನಿರಾಸೆ – Kannada News | Tamannah Bhatia starrer Ragini MMS 3 movie shelved

ತಮನ್ನಾ ಭಾಟಿಯಾ (Tamannah Bhatia) ಚಿತ್ರರಂಗಕ್ಕೆ ಬಂದು 20 ವರ್ಷಗಳಾದವು ಈಗಲೂ ಸಹ ಅವರು ಬೇಡಿಕೆ ಉಳಿಸಿಕೊಂಡಿದ್ದಾರೆ. ತಮನ್ನಾ ಭಾಟಿಯಾ ಭಾರತ ಚಿತ್ರರಂಗದ ಫಿಟ್, ಗ್ಲಾಮರಸ್ ನಟಿಯರಲ್ಲಿ ಒಬ್ಬರು. ಇತ್ತೀಚೆಗೆ ತಮನ್ನಾ ಭಾಟಿಯಾ ಹಾಟ್ ಆದ ಐಟಂ ಹಾಡುಗಳು, ಹಾಟ್ ಆದ ಪಾತ್ರಗಳಲ್ಲಿ ಹೆಚ್ಚಿಗೆ ನಟಿಸುತ್ತಿದ್ದಾರೆ. ಅಂಥಹಾ ಪಾತ್ರಗಳು ಅವರಿಗೆ ಸೂಟ್ ಸಹ ಆಗುತ್ತವೆ. ಅತಿಯಾದ ಗ್ಲಾಮರ್​​ ಅಂಶಗಳಿಂದಾಗಿಯೇ ಜನಪ್ರಿಯತೆ ಗಳಿಸಿರುವ ಸಿನಿಮಾ ‘ರಾಗಿಣಿ ಎಂಎಂಎಸ್’ ಸರಣಿಯ ಹೊಸ ಸಿನಿಮಾನಲ್ಲಿ ತಮನ್ನಾ ಭಾಟಿಯಾ ನಟಿಸಲಿದ್ದರು. ಇದು ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿತ್ತು. ಆದರೆ ಸಿನಿಮಾ ಇದೀಗ ಅರ್ಧಕ್ಕೆ ನಿಂತು ಹೋಗಿದೆ.

‘ರಾಗಿಣಿ ಎಂಎಂಎಸ್’ ಸಿನಿಮಾ ಒಂದು ರೀತಿಯ ಶೃಂಗಾರಭರಿತ ಸಿನಿಮಾ ಆಗಿದ್ದು, ಈ ಹಿಂದೆ ಸನ್ನಿ ಲಿಯೋನಿ ಇನ್ನೂ ಕೆಲವು ಬಲು ಹಾಟ್ ನಟಿಯರು ಆ ಸಿನಿಮಾಗಳಲ್ಲಿ ನಟಿಸಿದ್ದರು. ಇತ್ತೀಚೆಗಷ್ಟೆ ‘ರಾಗಿಣಿ ಎಂಎಂಎಸ್ 3’ ಸಿನಿಮಾವನ್ನು ಘೋಷಿಸಲಾಗಿತ್ತು. ಸಿನಿಮಾದ ನಾಯಕಿ ಪಾತ್ರದಲ್ಲಿ ತಮನ್ನಾ ಭಾಟಿಯಾ ನಟಿಸಬೇಕಿತ್ತು. ಸಹಜವಾಗಿಯೇ ಅಭಿಮಾನಿಗಳು, ತಮನ್ನಾರನ್ನು ಹಾಟ್​ ಅವತಾರದಲ್ಲಿ ಕಾಣಲು ಉತ್ಸುಕರಾಗಿದ್ದರು ಆದರೆ ಇದೀಗ ಅವರಿಗೆ ನಿರಾಸೆ ಎದುರಾಗಿದೆ.

‘ರಾಗಿಣಿ ಎಂಎಂಎಸ್ 3’ ಸಿನಿಮಾ ನಿರ್ದೇಶಿಸಬೇಕಿದ್ದ ಸಾಹಿರ್ ರಜಾ ಸಿನಿಮಾದಿಂದ ಹೊರನಡೆದಿರುವುದು ಚಿತ್ರ ಸ್ಥಗಿತಗೊಳ್ಳಲು ಮುಖ್ಯ ಕಾರಣ ಎನ್ನಲಾಗಿದೆ. ಸಾಹಿರ್ ರಜಾ ಅವರು ಪ್ರಸ್ತುತ ನೆಟ್‌ಫ್ಲಿಕ್ಸ್‌ನ ದೊಡ್ಡ ಸರಣಿಯೊಂದರಲ್ಲಿ ಶೋ-ರನ್ನರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನೆಟ್‌ಫ್ಲಿಕ್ಸ್‌ನ ಹೊಸ ನಿಯಮದಂತೆ ಶೋ-ರನ್ನರ್‌ಗಳು ಪ್ರತಿದಿನ ಸೆಟ್‌ನಲ್ಲಿ ಇರಲೇಬೇಕು. ಈ ಕಾರಣದಿಂದಾಗಿ ಅವರಿಗೆ ‘ರಾಗಿಣಿ ಎಂಎಂಎಸ್ 3’ ಚಿತ್ರಕ್ಕೆ ಸಮಯ ನೀಡಲು ಸಾಧ್ಯವಾಗುತ್ತಿಲ್ಲ. ಕಾಲ್‌ಶೀಟ್ ಸಮಸ್ಯೆ ಎದುರಾದ ಹಿನ್ನೆಲೆಯಲ್ಲಿ ಚಿತ್ರದ ನಿರ್ಮಾಪಕಿ ಏಕ್ತಾ ಕಪೂರ್ ಸದ್ಯಕ್ಕೆ ಚಿತ್ರೀಕರಣವನ್ನು ನಿಲ್ಲಿಸಲು ನಿರ್ಧರಿಸಿದ್ದಾರೆ.

ಇದನ್ನೂ ಓದಿ:ಶೂಟಿಂಗ್ ಮಾಡುವಾಗ ಸಿಟ್ಟಾದ ತಮನ್ನಾ ಭಾಟಿಯಾ: ವಿಡಿಯೋ ನೋಡಿ

ಈ ಮೊದಲು ಸನ್ನಿ ಲಿಯೋನ್ ನಟಿಸಿದ್ದ ‘ರಾಗಿಣಿ ಎಂಎಂಎಸ್ 2’ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿತ್ತು. ಸನ್ನಿ ಲಿಯೋನಿ ಸಖತ್ ಹಾಟ್ ಆಗಿ ‘ರಾಗಿಣಿ ಎಂಎಂಎಸ್ 2’ ಸಿನಿಮಾನಲ್ಲಿ ನಟಿಸಿದ್ದರು. ಈಗ ತಮನ್ನಾ ಭಾಟಿಯಾ ಈ ಸರಣಿಯಲ್ಲಿ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಳ್ಳುತ್ತಾರೆ ಎಂಬ ಸುದ್ದಿ ಕೇಳಿ ಅಭಿಮಾನಿಗಳು ಕಾತರರಾಗಿದ್ದರು. ಅಲ್ಲದೆ, ಈ ಬಾರಿ ಚಿತ್ರವನ್ನು ಕೇವಲ ಶೃಂಗಾರಕ್ಕೆ ಸೀಮಿತಗೊಳಿಸದೆ ‘ಹಾರರ್-ಕಾಮಿಡಿ’ ಶೈಲಿಯಲ್ಲಿ ಪ್ರೇಕ್ಷಕರ ಮುಂದೆ ತರಲು ನಿರ್ಮಾಪಕಿ ಏಕ್ತಾ ಕಪೂರ್ ನಿರ್ಧರಿಸಿದ್ದರು. ಆದರೆ ಅನಿವಾರ್ಯ ಕಾರಣಗಳಿಂದಾಗಿ ಸಿನಿಮಾಕ್ಕೆ ಬ್ರೇಕ್ ಬಿದ್ದಿದೆ.

ಇದೀಗ ಚಿತ್ರತಂಡ ಹೊಸ ನಿರ್ದೇಶಕರಿಗಾಗಿ ಹುಡುಕಾಟ ನಡೆಸುತ್ತಿದೆಯಾದರೂ, ಸದ್ಯಕ್ಕಂತೂ ಸಿನಿಮಾ ಆರಂಭವಾಗುವ ಲಕ್ಷಣಗಳಿಲ್ಲ. ಇನ್ನು ತಮನ್ನಾ ಭಾಟಿಯಾ ಅವರು ಸದ್ಯ ಸಿದ್ಧಾರ್ಥ್ ಮಲ್ಹೋತ್ರಾ ಅವರೊಂದಿಗೆ ‘ವ್ಯಾನ್’, ‘ಪುರುಷನ್’, ‘ವಿ ಶಾಂತಾರಾಮ್’, ‘ಮರಿಯಾ ಐಪಿಎಸ್’, ‘ರೇಂಜರ್’, ತಮಿಳಿನ ‘ಪುರುಷನ್’ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *