
ಈ ದಿನ ಮಹಾಲಕ್ಷ್ಮೀ ಅಷ್ಟಕವನ್ನು ಶ್ರವಣ ಮಾಡಿ. ದಂಪತಿ ಅಥವಾ ಪ್ರೇಮಿಗಳ ಮಧ್ಯೆ ಭಿನ್ನಾಭಿಪ್ರಾಯ ಇದ್ದಲ್ಲಿ ದೂರ ಆಗುತ್ತದೆ. ಇನ್ನು ನಿಮಗೆ ಬರಬೇಕಾದ ಹಣ ಬಾಕಿ ಉಳಿದುಹೋಗಿದ್ದಲ್ಲಿ ಅದು ವಸೂಲಿ ಮಾಡಿಕೊಳ್ಳಲಿಕ್ಕೆ ಮಾರ್ಗೋಪಾಯ ಗೋಚರ ಆಗಲಿದೆ.
ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7):
ನಿಮ್ಮ ಈ ದಿನ ಹೊಸ ಸಾಧ್ಯತೆಗಳಿಂದ ತುಂಬಿರುತ್ತದೆ. ಉದ್ಯೋಗಸ್ಥರಿಗೆ ಹೊಸ ಯೋಜನೆಗಳಿಗೆ ಅವಕಾಶ ಸಿಗುತ್ತದೆ; ಮೇಲಧಿಕಾರಿಗಳ ಬೆಂಬಲ ದೊರೆತು ಕೆಲಸ- ಕಾರ್ಯಗಳು ಸುಗಮವಾಗಿ ಆಗಲಿವೆ. ವ್ಯಾಪಾರಸ್ಥರು ಗ್ರಾಹಕರ ನಿರೀಕ್ಷೆಗಳಿಗೆ ತಕ್ಕಂತೆ ಆರ್ಡರ್ ಗಳನ್ನು ಪೂರ್ತಿ ಮಾಡಿಕೊಡುತ್ತೀರಿ. ರೈತರಿಗೆ ಬೆಳೆಯ ಮಾರಾಟ ಸುಲಭವಾಗಿ ಆಗುತ್ತದೆ. ನಾಟಕ, ಇತರೆ ಬರಹ ಅಥವಾ ಕ್ರಿಯೇಟಿವ್ ಕೆಲಸಗಳಲ್ಲಿ ತೊಡಗಿರುವವರು ಹೊಸ ಚಿಂತನೆಗಳಿಂದ ಪ್ರೋತ್ಸಾಹ ಪಡೆಯುತ್ತೀರಿ.
ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8):
ಮನೆಯವರು, ಹಿರಿಯರು ನಿಮ್ಮ ಸಲಹೆ ಮತ್ತು ಸಹಕಾರದಿಂದ ಸಂತೋಷ ಪಡುತ್ತಾರೆ. ಪ್ರೀತಿಯಲ್ಲಿ ಇರುವವರಿಗೆ ಪರಸ್ಪರ ಮಾತುಕತೆಯಿಂದ ಬಾಂಧವ್ಯ ಬಲವಾಗುತ್ತದೆ. ಖರ್ಚು–ಉಳಿತಾಯ ಸಮತೋಲನ ಸಾಧಿಸುವ ಕಡೆಗೆ ಗಮನವನ್ನು ವಹಿಸಿ. ನಿಮ್ಮ ದೇಹಕ್ಕೆ ಒಗ್ಗುವ ಆಹಾರ ಮತ್ತು ಸರಿಯಾದ ಪ್ರಮಾಣದ ನಿದ್ರೆ ಮುಖ್ಯ. ದಿನಾಂತ್ಯಕ್ಕೆ ಸಾಧನೆಗಳ ಅನುಭವದಿಂದ ಮನಸ್ಸು ಹಿಗ್ಗುತ್ತದೆ.
ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9):
ಸಮತೋಲನದ ಆಹಾರ ಸೇವನೆಗೆ ಆದ್ಯತೆ ನೀಡಿ, ಮನೆಗೆ ತರುವಂಥ ದಿನಸಿ ಪದಾರ್ಥಗಳ ಆಯ್ಕೆಯಲ್ಲೇ ಬದಲಾವಣೆ ಮಾಡಿಕೊಳ್ಳಲಿದ್ದೀರಿ. ಶೀತ- ಕೆಮ್ಮು- ಕಫದಿಂದ ಬಳಲುತ್ತಾ ಇರುವವರು ವೈದ್ಯರನ್ನು ಭೇಟಿ ಮಾಡಿ, ಸೂಕ್ತ ಔಷಧೋಪಚಾರ ಪಡೆಯುವುದಕ್ಕೆ ಆದ್ಯತೆ ನೀಡಿ. ನಿಮಗೆ ಬರಬೇಕಾದ ಬಾಕಿ ಹಣ ವಸೂಲಿಗೆ ಈ ದಿನ ಗಟ್ಟಿಯಾಗಿ ಪ್ರಯತ್ನಿಸಿ.
ಲೇಖನ- ಸ್ವಾತಿ ಎನ್.ಕೆ.