Headlines

ಶೇ.85ರಷ್ಟು ದೃಷ್ಟಿ ಕಳೆದುಕೊಂಡಿದ್ದಾರಂತೆ ಪಾಕ್ ಮಾಜಿ ಪ್ರಧಾನಿ ಇಮ್ರಾನ್​ ಖಾನ್, ಸುಪ್ರೀಂಕೋರ್ಟ್​​ನಲ್ಲಿ ಕಣ್ಣೀರಿಟ್ಟ ಸಹೋದರಿ – Kannada News | Imran Khan Losing Eyesight in Adiala Jail: Sister Pleads in Pakistan Supreme Court

ಇಸ್ಲಾಮಾಬಾದ್, ಫೆಬ್ರವರಿ 13: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್(Imran Khan) ಆರೋಗ್ಯದ ಬಗ್ಗೆ ಪ್ರಮುಖ ಮಾಹಿತಿಯೊಂದು ಹೊರಬಿದ್ದಿದೆ. ಅವರನ್ನು ಜೈಲಿನಲ್ಲಿ ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತಿದೆ, ಅದರ ಪರಿಣಾಮವಾಗಿ ಶೇ.85ರಷ್ಟು ದೃಷ್ಟಿ ಕಳೆದುಕೊಂಡಿದ್ದಾರೆ ಎಂದು ಸುಪ್ರೀಂಕೋರ್ಟ್​ ಎದುರು ಇಮ್ರಾನ್ ಸಹೋದರಿ ಕಣ್ಣೀರಿಟ್ಟಿದ್ದಾರೆ. ಪಾಕಿಸ್ತಾನದ ಸುಪ್ರೀಂ ಕೋರ್ಟ್ ತಕ್ಷಣದ ವೈದ್ಯಕೀಯ ಪರೀಕ್ಷೆಗೆ ಆದೇಶಿಸಿದೆ. ನ್ಯಾಯಾಲಯಕ್ಕೆ ಸಲ್ಲಿಸಲಾದ ವರದಿಯಲ್ಲಿ ಇಮ್ರಾನ್ ಖಾನ್ ಅವರ ಬಲಗಣ್ಣಿನ ಸುಮಾರು ಶೇ. 85 ರಷ್ಟು ದೃಷ್ಟಿ ಕಳೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.

ಮುಖ್ಯ ನ್ಯಾಯಮೂರ್ತಿ ಯಾಹ್ಯಾ ಅಫ್ರಿದಿ ಮತ್ತು ನ್ಯಾಯಮೂರ್ತಿ ಶಾಹಿದ್ ಬಿಲಾಲ್ ಹಸನ್ ಅವರನ್ನೊಳಗೊಂಡ ಇಬ್ಬರು ಸದಸ್ಯರ ಪೀಠದ ಮಂದೆ ಪ್ರಕರಣದ ವಿಚಾರಣೆ ನಡೆಯಿತು. ವಿಚಾರಣೆಯ ಸಮಯದಲ್ಲಿ ಫೆಬ್ರವರಿ 16ರ ಮೊದಲು ಇಮ್ರಾನ್ ಖಾನ್ ಅವರ ಸಂಪೂರ್ಣ ಆರೋಗ್ಯ ತಪಾಸಣೆ ನಡೆಸುವಂತೆ, ಕಣ್ಣಿನ ತಜ್ಞರಿಂದ ಪರೀಕ್ಷೆ ನಡೆಸುವಂತೆ ಸರ್ಕಾರಕ್ಕೆ ನ್ಯಾಯಾಲಯ ನಿರ್ದೇಶನ ನೀಡಿತು.

ನ್ಯಾಯಾಲಯದಿಂದ ನೇಮಿಸಲ್ಪಟ್ಟ ಅಮಿಕಸ್ ಕ್ಯೂರಿ ಬ್ಯಾರಿಸ್ಟರ್ ಸಲ್ಮಾನ್ ಸಫ್ದಾರ್, ರಾವಲ್ಪಿಂಡಿ ಅಡಿಯಾಲ ಜೈಲಿನಲ್ಲಿ ಇಮ್ರಾನ್ ಖಾನ್ ಅವರನ್ನು ಭೇಟಿಯಾದ ನಂತರ ವಿವರವಾದ ವರದಿಯನ್ನು ಮಂಡಿಸಿದ್ದಾರೆ. ವರದಿಯ ಪ್ರಕಾರ, ಇಮ್ರಾನ್ ಖಾನ್ ಅವರ ಬಲಗಣ್ಣಿನಲ್ಲಿ ಈಗ ಕೇವಲ 15 ಪ್ರತಿಶತದಷ್ಟು ದೃಷ್ಟಿ ಉಳಿದಿದೆ.

ಮತ್ತಷ್ಟು ಓದಿ: ಇಮ್ರಾನ್ ಖಾನ್ ಎಲ್ಲಿದ್ದಾರೆ? ಮಾಜಿ ಪ್ರಧಾನಿ ಸಾವಿನ ಬಗ್ಗೆ ಕೊನೆಗೂ ಮೌನ ಮುರಿದ ಪಾಕಿಸ್ತಾನ

ಅಕ್ಟೋಬರ್ 2025ರವರೆಗೆ ಇಮ್ರಾನ್ ಖಾನ್ ಅವರ ಎರಡೂ ಕಣ್ಣುಗಳ ದೃಷ್ಟಿ ಸಾಮಾನ್ಯವಾಗಿತ್ತು ಎಂದು ವೈದ್ಯಕೀಯ ವರದಿಗಳು ಹೇಳುತ್ತವೆ. ಅದರ ನಂತರ ಅವರ ದೃಷ್ಟಿ ಮಸುಕಾಗುತ್ತಿದೆ. ಇಮ್ರಾನ್ ಖಾನ್ ಜೈಲು ಆಡಳಿತಕ್ಕೆ ಹಲವಾರು ಬಾರು ದೂರು ನೀಡಿದ್ದರು. ಆದರೆ ಇದ್ದಕ್ಕಿದ್ದಂತೆ ಬಲಗಣ್ಣ ದೃಷ್ಟಿ ಹೋಗುತ್ತಾ ಬಂದಿದೆ ಎಂದು ತಿಳಿಸಿದ್ದಾರೆ.

ಪಾಕಿಸ್ತಾನದ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನೇತ್ರಜ್ಞರು ಕಣ್ಣಿನಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಆಗಿರುವುದನ್ನು ದೃಢಪಡಿಸಿದ್ದಾರೆ.ಇದರಿಂದಾಗಿ ಗಂಭೀರ ಹಾನಿಯಾಗಿದೆ. ಜನವರಿ 24ರಂದಿ ಪಿಮ್ಸ್​ ಆಸ್ಪತ್ರೆಯಲ್ಲಿ ನಡೆಸಲಾದ ವೈದ್ಯಕೀಯ ವಿಧಾನಗಳ ಮರುಪರೀಕ್ಷೆ ಕೋರಿಕೆಯನ್ನು ನ್ಯಾಯಾಲಯ ತಿರಸ್ಕರಿಸಿತ್ತು. ಯಾವುದೇ ಕೈದಿಯ ಆರೋಗ್ಯಕ್ಕೆ ರಾಜ್ಯವು ಜವಾಬ್ದಾರನಾಗಿರುತ್ತದೆ, ಕೈದಿಯ ಸುರಕ್ಷತೆ ಖಚಿತಪಡಿಸಿಕೊಳ್ಳುವುದು ಸರ್ಕಾರದ ಕರ್ತವ್ಯ ಎಂದು ಮುಖ್ಯ ನ್ಯಾಯಮೂರ್ತಿಗಳು ಹೇಳಿದ್ದಾರೆ.

ಇಮ್ರಾನ್ ಖಾನ್ ಪುತ್ರರಾದ ಖಾಸಿಮ್ ಮತ್ತು ಸುಲೇಮಾನ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಲು ಅವಕಾಶ ನೀಡುವಂತೆ ಸುಪ್ರೀಂಕೋರ್ಟ್ ಅಧಿಕಾರಿಗಳಿಗೆ ನಿರ್ದೇಶನ ನೀಡಿತು. ವಿಚಾರಣೆಯ ನಂತರ ನ್ಯಾಯಾಲಯದ ಆವರಣದ ಹೊರಗೆ ಭಾವನಾತ್ಮಕ ವಾತಾವರಣ ಸೃಷ್ಟಿಯಾಗಿತ್ತು. ಇಮ್ರಾನ್ ಖಾನ್ ಸಹೋದರಿ ಅಲೀಮಾ ಖಾನ್ ಕಣ್ಣೀರು ಹಾಕಿದ್ದರು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Leave a Reply

Your email address will not be published. Required fields are marked *