Headlines

World Radio Day 2026: ಇಂಟರ್‌ನೆಟ್‌ ಯುಗದಲ್ಲೂ ಜನರ ವಿಶ್ವಾಸಾರ್ಹ ಧ್ವನಿಯಾಗಿ ಉಳಿದಿದೆ ರೇಡಿಯೋ – Kannada News | World Radio Day 2026: Why is Radio Day celebrated on February 13? Know the history and significance of this day

ಇಂದಿನ ಈ ಇಂಟರ್‌ನೆಟ್‌ ಯುಗದಲ್ಲಿ ಯಾವುದೋ ಒಂದು ಮೂಲೆಯಲ್ಲಿ ಕುಳಿತು ಪ್ರಪಂಚದಾದ್ಯಂತ ನಡೆಯುವ ಪ್ರತಿಯೊಂದು ಕ್ಷಣ ಕ್ಷಣದ ಮಾಹಿಯನ್ನು ಬೇಕಾದರೂ ತಿಳಿಯಬಹುದು ಜೊತೆಗೆ ಇಂದು ಸಾಕಷ್ಟು ಮನೋರಂಜನೆಯ ಆಯ್ಕೆಗಳೂ ಇವೆ. ಆದ್ರೆ ಒಂದು ಕಾಲದಲ್ಲಿ ರೇಡಿಯೋವೇ ಎಲ್ಲಾ ಆಗಿತ್ತು. ಹೌದು ಪ್ರಚಲಿತ ಘಟನೆಗಳ ಮಾಹಿತಿಯನ್ನು ನೀಡುವ ಸಂವಹನ ಮಾಧ್ಯಮವಾಗಿತ್ತು, ಇದರ ಮೂಲಕವೇ ಜನ ಸುದ್ದಿಗಳನ್ನು ತಿಳಿಯುತ್ತಿದ್ದರು. ಇಂದಿಗೂ ಕೂಡ ರೇಡಿಯೋ (Radio) ಅತ್ಯಂತ ಪ್ರಭಾವಶಾಲಿ ಸಮೂಹ ಮಾಧ್ಯಮವಾಗಿ, ವಿಶ್ವಾಸಾರ್ಹ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿದೆ. ರೇಡಿಯೋದ ಮಹತ್ವ ಮತ್ತು ಅದರ ಕೊಡುಗೆಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿವರ್ಷ ಫೆಬ್ರವರಿ 13 ರಂದು ವಿಶ್ವ ರೇಡಿಯೋ ದಿನವನ್ನು ಆಚರಿಸಲಾಗುತ್ತದೆ.

ವಿಶ್ವ ರೇಡಿಯೋ ದಿನದ ಇತಿಹಾಸವೇನು?

  • ಅಂತರರಾಷ್ಟ್ರೀಯ ಮಟ್ಟದಲ್ಲಿ ರೇಡಿಯೋ ದಿನವನ್ನು ಆಚರಿಸುವ ಪ್ರಸ್ತಾಪವನ್ನು 2011 ರಲ್ಲಿ ಮುಂದಿಡಲಾಯಿತು.
  • ನಂತರ ಯುನೆಸ್ಕೋದ ಸದಸ್ಯ ರಾಷ್ಟ್ರಗಳು ಇದನ್ನು ವಿಶ್ವಸಂಸ್ಥೆಯ ಸಭೆಗೆ ಪ್ರಸ್ತಾಪಿಸಿದವು, ಇದನ್ನು 2012 ರಲ್ಲಿ ಅಂತರರಾಷ್ಟ್ರೀಯ ದಿನವೆಂದು ಅಂಗೀಕರಿಸಲಾಯಿತು.
  • ಫೆಬ್ರವರಿ 13 ಅಮೆರಿಕದ ರೇಡಿಯೋ ಇತಿಹಾಸದಲ್ಲಿ ಸ್ಮರಣೀಯ ದಿನ. 1946 ರಲ್ಲಿ, ಅಮೆರಿಕದಿಂದ ಮೊದಲ ರೇಡಿಯೋ ಪ್ರಸಾರ ನಡೆಯಿತು. ತರುವಾಯ, ವಿಶ್ವಸಂಸ್ಥೆಯು ರೇಡಿಯೊದಲ್ಲಿಯೂ ಕಾರ್ಯನಿರ್ವಹಿಸಲು ಪ್ರಾರಂಭಿಸಿತು. ಅದಕ್ಕಾಗಿಯೇ ಈ ದಿನವನ್ನು ಆಚರಿಸಲು ಫೆಬ್ರವರಿ 13 ನ್ನು ಆಯ್ಕೆ ಮಾಡಲಾಯಿತು.

ವಿಶ್ವ ರೇಡಿಯೋ ದಿನದ ಮಹತ್ವವೇನು?

  • ವಿಶ್ವಸಂಸ್ಥೆಯ ಪ್ರಕಾರ, ವಿಶ್ವ ರೇಡಿಯೋ ದಿನವು ಸಾರ್ವಜನಿಕರಲ್ಲಿ ಮತ್ತು ಮಾಧ್ಯಮಗಳಲ್ಲಿ ರೇಡಿಯೊದ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ.
  • ಸಾರ್ವಜನಿಕರಿಗೆ ರೇಡಿಯೊದ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ವಿಶ್ವ ರೇಡಿಯೋ ದಿನವನ್ನು ಆಚರಿಸಲಾಗುತ್ತದೆ.
  • ಈ ದಿನವು ರೇಡಿಯೋ ಬಳಕೆ ಬಳಕೆ ಮಾಡಬೇಕೆಂದು ಯುವ ಸಮುದಾಯವನ್ನು ಪ್ರೋತ್ಸಾಹಿಸುತ್ತದೆ.

ಇದನ್ನೂ ಓದಿ: ವಿಜ್ಞಾನ ಕ್ಷೇತ್ರದಲ್ಲಿ ಹೆಣ್ಣುಮಕ್ಕಳ ಭಾಗವಹಿಸುವಿಕೆಯನ್ನು ಉತ್ತೇಜಿಸಲಿರುವ ವಿಶೇಷ ದಿನವಿದು

ಡಿಜಿಟಲ್‌ ಯುಗದಲ್ಲಿ ರೇಡಿಯೋ:

ರೇಡಿಯೋ ಇಂದು ಮರದ ಅಥವಾ ಪ್ಲಾಸ್ಟಿಕ್ ಪೆಟ್ಟಿಗೆಗೆ ಸೀಮಿತವಾಗಿಲ್ಲ. ಇದು ಈಗ  ಸ್ಮಾರ್ಟ್‌ಫೋನ್‌ನಲ್ಲಿ ಅಪ್ಲಿಕೇಶನ್ ಆಗಿ ಅಸ್ತಿತ್ವದಲ್ಲಿದೆ. ಈ ಎಫ್‌ಎಂಗಳ ಮೂಲಕ ಪಾಡ್‌ಕ್ಯಾಸ್ಟ್‌, ಸುದ್ದಿ, ಹಾಡು ಇತ್ಯಾದಿ ಕಾರ್ಯಕ್ರಮಗಳನ್ನೂ ಕೇಳಬಹುದು. ಎಫ್‌ಎಂ ರೇಡಿಯೋ ಸ್ಟೇಷನ್‌ಗಳ ಮುಖಾಂತರ ಮನೋರಂಜನೆಯ ವ್ಯಾಪ್ತಿಯೂ ದೊಡ್ಡದಾಗಿದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *