Headlines

ಕೆಲಸವಿಲ್ಲದೆ ಕರಾವಳಿ ಗುತ್ತಿಗೆದಾರರ ಕೈ ಖಾಲಿ: ರಾಜ್ಯ ಸರ್ಕಾರದಿಂದ ನಿರ್ಲಕ್ಷ್ಯ ಆರೋಪ – Kannada News | Contractor Alleges Government Neglect of Coastal Areas; Development Works Decline Sharply

ಮಂಗಳೂರು, ಫೆಬ್ರವರಿ 13: ಕರಾವಳಿ ಭಾಗಕ್ಕೆ ರಾಜ್ಯ ಸರ್ಕಾರ ನಿರೀಕ್ಷೆಯಷ್ಟು ಅನುದಾನ ನೀಡುತ್ತಿಲ್ಲ. ಹೀಗಾಗಿ ಕೆಲಸವಿಲ್ಲದೆ ಗುತ್ತಿಗೆದಾರರು ಕಂಗಾಲಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಟಿವಿ9 ಜೊತೆಗೆ ಗುತ್ತಿಗೆದಾರ ವಸಂತ ನಾಯ್ಕ್​​ ಮಾತನಾಡಿದ್ದು, ಹಿಂದಿನ ಸರ್ಕಾರದ ಅವಧಿಯಲ್ಲಿ ನಡೆಯುತ್ತಿದ್ದ ಅರ್ಧ ಕಾಮಗಾರಿಗಳೂ ಈಗ ನಡೆಯುತ್ತಿಲ್ಲ. ಹೀಗಾಗಿ ನಮ್ಮಲ್ಲಿರುವ ವಾಹನಗಳು, ಯಂತ್ರೋಪಕರಣಗಳು ಎರಡು ವರ್ಷದಿಂದ ತುಕ್ಕು ಹಿಡಿಯುತ್ತಿವೆ.  ನಮ್ಮಲ್ಲಿ 1,600ಕ್ಕೂ ಹೆಚ್ಚು ಗುತ್ತಿಗೆದಾರರು ಇದ್ದು, ಜಿಲ್ಲೆಯ ಗುತ್ತಿಗೆದಾರರಿಗೆ ಈವರೆಗೆ 1,162 ಕೋಟಿ ರೂಪಾಯಿ ಬಿಲ್ ಪೆಂಡಿಂಗ್ ಇದೆ. ಸ್ಪೀಕರ್ ಆಗಿ ಉಳ್ಳಾಲದ ಶಾಸಕರೇ ಇದ್ದಾರೆ. ಮನಸ್ಸು ಮಾಡಿದ್ರೆ ಅವರು ಈ ಸಮಸ್ಯೆ ಬಗೆಹರಿಸಬಹುದು.ಆದರೆ ಯಾರೂ ಸಹ ಈ ಬಗ್ಗೆ ಮನಸ್ಸು ಮಾಡುತ್ತಿಲ್ಲ ಎಂದು ಅಲವತ್ತುಕೊಂಡಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Leave a Reply

Your email address will not be published. Required fields are marked *