
ದಂಪತಿಗೆ ವೀಳ್ಯದೆಲೆ, ಅಡಿಕೆ, ತೆಂಗಿನಕಾಯಿ, ಬಾಳೇಹಣ್ಣು ಸಮೇತ ನೀಡಿ. ಸಂಜೆಯ ವೇಳೆಗೆ ಹೀಗೆ ನೀಡುವುದರಿಂದ ಆರ್ಥಿಕ ಒತ್ತಡ ನಿವಾರಣೆ ಮಾಡಿಕೊಳ್ಳುವ ಮಾರ್ಗೋಪಾಯ ಗೋಚರ ಆಗಲಿದೆ. ಸೈಟು ಖರೀದಿ- ಮನೆ ಖರೀದಿಗೆ ಪ್ರಯತ್ನಿಸುತ್ತಿರುವವರಿಗೆ ಮನಸ್ಸಿಗೆ ಒಪ್ಪುವಂಥದ್ದು ದೊರೆಯಲಿದೆ.
ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)
ಕುಟುಂಬದಲ್ಲಿ ಸಣ್ಣಮಟ್ಟದ ಭಿನ್ನಾಭಿಪ್ರಾಯಗಳು ಉಂಟಾಗಬಹುದು, ಆದರೆ ನಿಮ್ಮ ಸಮಯೋಚಿತ ಮಾತಿನ ಮೂಲಕವೇ ಸಮಸ್ಯೆಗೆ ಪರಿಹಾರ ನೀಡುತ್ತೀರಿ. ಹಣಕಾಸಿನ ವಿಷಯದಲ್ಲಿ ಆಮೇಲೆ ಮಾಡಿದರಾಯಿತು ಎಂಬ ಧೋರಣೆ ಬೇಡ. ಹಳೆಯ ಬಾಕಿ ಹಣ ವಾಪಸ್ ಬರುವ ಸೂಚನೆ ಇದೆ, ಆ ಕಡೆ ಪ್ರಯತ್ನ ಪಡುವುದು ಮುಖ್ಯ. ಕಣ್ಣಿನ ಆರೋಗ್ಯದ ಕಡೆ ಗಮನ ಇರಲಿ.
ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)
ನಿಮ್ಮ ಒಳಗಿನ ಆತ್ಮವಿಶ್ವಾಸ ದೊಡ್ಡ ಮಟ್ಟದಲ್ಲಿ ಹೆಚ್ಚಾಗಲಿದೆ. ಈ ಹಿಂದೆ ನಿಮಗೆ ಅಸಾಧ್ಯ ಎಂದು ಕಂಡಿದ್ದ ಕೆಲಸ- ಕಾರ್ಯಗಳು ಈಗ ಸಲೀಸಾಗಿ ಮಾಡಿ ಮುಗಿಸುವಂಥ ವಿಶ್ವಾಸ ಮೂಡಲಿದೆ. ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ, ಕಾರ್ಯಾಗಾರ ಇಂಥವುಗಳಿಗೆ ನಿಮ್ಮಲ್ಲಿ ಕೆಲವರಿಗೆ ಆಹ್ವಾನ ಬರಲಿದೆ. ಉದ್ಯೋಗ ಅಥವಾ ವ್ಯವಹಾರದಲ್ಲಿ ಹೊಸ ಜವಾಬ್ದಾರಿಗಳು ಹುಡುಕಿಬರುವ ಸೂಚನೆ ಸಿಗಲಿದೆ.
ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)
ನಿಮ್ಮ ಎದುರಿಗೆ ಪ್ರಶಂಸೆ ಮಾಡುತ್ತಿದ್ದಾರೆ ಎಂಬ ಕಾರಣಕ್ಕೆ ಮೈ ಮರೆಯಬೇಡಿ. ಕಾಲು ನೆಲದ ಮೇಲೆ ಇರಲಿ. ಪ್ರಮುಖವಾದ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ನಿಮ್ಮ ಕುಟುಂಬದ ಹಿರಿಯರ ನೀಡುವಂಥ ಸಲಹೆ ಮಹತ್ವದ ದಾರಿ ದೀಪ ಆಗುತ್ತದೆ. ಹಣಕಾಸಿನ ವಿಷಯದಲ್ಲಿ ಅಗತ್ಯವಿಲ್ಲದ ಖರ್ಚು ತಪ್ಪಿಸುವುದು ಒಳಿತು. ಭುಜದ ನೋವು, ಬೆನ್ನಿನ ನೋವು ಇರುವಂಥವರು ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಮಾಡಬೇಡಿ.
ಲೇಖನ- ಸ್ವಾತಿ ಎನ್.ಕೆ.