Headlines

ಬಾಲವೇ ನಾಯಿಯನ್ನು ಅಲ್ಲಾಡಿಸಿದ್ರೆ ಹೇಗೆ? ನಾಯಕತ್ವ ಬದಲಾವಣೆ ಪ್ರಶ್ನೆಗೆ ಹೀಗ್ಯಾಕಂದ್ರು ಸಚಿವ ಮಹದೇವಪ್ಪ! – Kannada News | Leadership Change Row in Congress: HC Mahadevappa ‘Tail Wagging the Dog’ Remark Sparks Debate

ಬೆಂಗಳೂರು, ಫೆಬ್ರವರಿ 16: ಹಿರಿಯ ಸಚಿವ ಹೆಚ್​ಸಿ ಮಹದೇವಪ್ಪ ನಾಯಕತ್ವ ಬದಲಾವಣೆ ಕುರಿತ ಪ್ರಶ್ನೆಗಳಿಗೆ ನೀಡಿದ ಹೇಳಿಕೆ ಈಗ ಚರ್ಚೆಗೆ ಗ್ರಾಸವಾಗಿದೆ. ಕಾಂಗ್ರೆಸ್‌ನಲ್ಲಿನ ನಾಯಕತ್ವ ಗೊಂದಲ ಮತ್ತು ಹೈಕಮಾಂಡ್ ಮಧ್ಯಪ್ರವೇಶದ ಅಗತ್ಯತೆಯ ಬಗ್ಗೆ ಪತ್ರಕರ್ತರು ಪ್ರಶ್ನಿಸಿದಾಗ, ಮಹದೇವಪ್ಪ ಅವರು ಅದಕ್ಕೆ ನೇರವಾಗಿ ಉತ್ತರಿಸದೆ ಬೀದಿನಾಯಿ ವಿಷಯವನ್ನು ಪ್ರಸ್ತಾಪಿಸಿದರು. ‘ನಾಯಕತ್ವದ ಚರ್ಚೆ ಎಲ್ಲಿದೆ? ಹೈಕೋರ್ಟ್ ಪದೇ ಪದೇ ಬೀದಿನಾಯಿಗಳನ್ನೆಲ್ಲ ಹಿಡಿದು ಒಳಗಾಕಿ ಎಂದು ಹೇಳುತ್ತಿದೆ’ ಎಂದರು. ಈ ಹೇಳಿಕೆ ವಿವಾದಕ್ಕೆ ಗುರಿಯಾಗಬಹುದು ಎಂಬುದು ಅರಿವಿಗೆ ಬರುತ್ತಿದ್ದಂತೆಯೇ ಸ್ಪಷ್ಟನೆ ನೀಡಲು ಮುಂದಾದ ಮಹದೇವಪ್ಪ, ತಾವು ಹೈಕೋರ್ಟ್ ಹೇಳಿದ್ದನ್ನಷ್ಟೇ ಹೇಳಿದ್ದು. ಯಾವುದೇ ಅನಗತ್ಯ ಗೊಂದಲ ಸೃಷ್ಟಿಸಬೇಡಿ ಎಂದು ಮಾಧ್ಯಮಗಳಿಗೆ ಮನವಿ ಮಾಡಿದರು. ಆದಾಗ್ಯೂ, ಅವರ ಈ ಮಾತುಗಳು ಆಡಳಿತಾರೂಢ ಪಕ್ಷದೊಳಗಿನ ಅಸಮಾಧಾನವನ್ನು ಪ್ರತಿಬಿಂಬಿಸುತ್ತಿವೆ ಎನ್ನಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *