ನವದೆಹಲಿ, ಫೆಬ್ರುವರಿ 16: ನಾಲ್ಕನೇ ಆವೃತ್ತಿಯ ಎಐ ಇಂಪ್ಯಾಟ್ ಶೃಂಗಸಭೆಗೆ (AI Impact Summit) ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ಇವತ್ತಿನಿಂದ ಫೆಬ್ರುವರಿ 20ರವರೆಗೂ ಐದು ದಿನಗಳ ಕಾಲ ಭಾರತ್ ಮಂಟಪಂನಲ್ಲಿ ಈ ಸಮಿಟ್ನ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ‘ಜನತೆ, ಭೂಮಿ ಮತ್ತು ಪ್ರಗತಿ’ ಥೀಮ್ನಲ್ಲಿ ಈ ಶೃಂಗಸಭೆ ಆಯೋಜನೆಯಾಗುತ್ತಿದೆ.
ಹಿಂದಿನ ಮೂರು ಎಐ ಇಂಪ್ಯಾಕ್ಟ್ ಸಮಿಟ್ಗಳು ಬ್ರಿಟನ್, ಕೊರಿಯಾ ಮತ್ತು ಫ್ರಾನ್ಸ್ ದೇಶಗಳಲ್ಲಿ ನಡೆದಿದ್ದವು. ಭಾರತದಲ್ಲಿ ಇದೇ ಮೊದಲ ಬಾರಿಗೆ ಈ ಸಮಾವೇಶ ನಡೆಯುತ್ತಿರುವುದು. ಸಮಾವೇಶದಲ್ಲಿ ಏಳು ಅಂಶಗಳ ಥೀಮ್ ಒಳಗೊಳ್ಳಲಾಗಿದೆ. ಮಾನವ ಸಂಪನ್ಮೂಲ, ಒಳಗೊಳ್ಳುವಿಕೆ, ನಂಬಿಕೆ, ಪುಟಿದೇಳುವಿಕೆ, ವಿಜ್ಞಾನ, ಸಂಪನ್ಮೂಲ, ಸಾಮಾಜಿಕ ಒಳಿತು, ಈ ಅಂಶಗಳ ಆಧಾರದ ಮೇಲೆ ಜಾಗತಿಕ ಸಹಭಾಗಿತ್ವಗಳನ್ನು ಸೇರಿಸುವುದಕ್ಕೆ ಗಮನ ಕೊಡಲಾಗುತ್ತದೆ.
ಇದನ್ನೂ ಓದಿ: AI Impact Summit: ಜನಕಲ್ಯಾಣಕ್ಕೆ ಎಐ ಬಳಕೆ, ಇದು ಭಾರತಕ್ಕಿರುವ ಬದ್ಧತೆ: ಅಶ್ವಿನಿ ವೈಷ್ಣವ್
ಎಐ ಇಂಪ್ಯಾಕ್ಟ್ ಸಮಿಟ್ನಲ್ಲಿ ಪ್ರತೀ ದಿನ ಬೇರೆ ಬೇರೆ ರೀತಿಯ ಕಾರ್ಯಕ್ರಮಗಳು ನಡೆಯುತ್ತವೆ. ಎಐ ಕ್ಷೇತ್ರದಲ್ಲಿ ಆಗಿರುವ ಹೊಸ ಹೊಸ ಆವಿಷ್ಕಾರಗಳ ಪ್ರದರ್ಶನಗಳನ್ನು ಕಾಣಬಹುದು. ವಿವಿಧ ಸ್ಟಾರ್ಟಪ್ಗಳು ತಮ್ಮ ಉತ್ಪನ್ನಗಳನ್ನು ತೋರ್ಪಡಿಸುತ್ತಿವೆ. 300ಕ್ಕೂ ಹೆಚ್ಚು ಪ್ರದರ್ಶಕರು ಈ ಸಮಾವೇಶದಲ್ಲಿ ಕಾರ್ಯನಿರತರಾಗಿರುತ್ತಾರೆ.
ವಿವಿಧ ದೇಶಗಳ ಪ್ರಧಾನಿ, ಅಧ್ಯಕ್ಷ ಅಥವಾ ಉನ್ನತ ಸ್ತರದ ನಾಯಕರುಗಳು, ಸಚಿವರುಗಳು ಸಮಾವೇಶದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಓಪನ್ ಎಐ, ಗೂಗಲ್, ಎನ್ವಿಡಿಯಾ, ಮೈಕ್ರೋಸಾಫ್ಟ್, ರಿಲಾಯನ್ಸ್, ಆಂಥ್ರೋಪಿಕ್ ಇತ್ಯಾದಿ ದೈತ್ಯ ಕಂಪನಿಗಳ ಪಾತಿನಿಧ್ಯವನ್ನು ನಿರೀಕ್ಷಿಸಬಹುದು.
ಇದನ್ನೂ ಓದಿ: ಭಾರತದ ಎಐ ಇಂಪ್ಯಾಕ್ಟ್ ಸಮಿಟ್ಗೆ ಇಡೀ ಜಗತ್ತು ಆಕರ್ಷಿತವಾಗಿರುವುದು ಯಾಕೆ? ಅಂಥದ್ದೇನು ವಿಶೇಷತೆ ಇದೆ?
ಜಾಗತಿಕ ಟೆಕ್ ದಿಗ್ಗಜ ಸಂಸ್ಥೆಗಳು ಭಾರತದಲ್ಲಿ ಎಐ ಅಭಿವೃದ್ಧಿಗೆ ಬಂಡವಾಳ ಹೂಡಿಕೆ ಮಾಡಬಹುದು. ಭಾರತದ ಎಐ ಯೋಜನೆಗಳು ಜಗತ್ತಿನ ಗಮನ ಸೆಳೆಯಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ