ಬೆಂಗಳೂರು, (ಫೆಬ್ರವರಿ 16): ಬಾಗೇಪಲ್ಲಿ (Bagepalli) ಕಾಂಗ್ರೆಸ್ (Congress) ಶಾಸಕ ಸುಬ್ಬಾರೆಡ್ಡಿಯವರ (Subbareddy) ಅವರ ಆಯ್ಕೆ ಶಾಸಕಅಸಿಂಧುಗೊಳಿಸಿ ಹೈಕೋರ್ಟ್ (High Court) ಮಹತ್ವದ ಆದೇಶ ಹೊರಡಿಸಿದೆ. ನಾಮಪತ್ರ ಸಲ್ಲಿಕೆ ವೇಳೆ ಸಂಪೂರ್ಣ ಆಸ್ತಿ ಘೋಷಣೆ ಮಾಡಿಲ್ಲ, ಕ್ರಿಮಿನಲ್ ಕೇಸ್ಗಳ ಮಾಹಿತಿಯನ್ನು ಮರೆಮಾಚಿದ್ದಾರೆ ಎಂದು ಬಿಜೆಪಿ ಪರಾಜಿತ ಅಭ್ಯರ್ಥಿ ಮುನಿರಾಜು ಅವರು 2023 ಜೂನ್ 24ರಂದು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ವೇಳೆ ಆಸ್ತಿ ಮಾಹಿತಿಯನ್ನು ಉಲ್ಲಂಘನೆ ಮಾಡಿದ್ದು ದೃಢಪಟ್ಟ ಹಿನ್ನೆಲೆಯಲ್ಲಿ ಸುಬ್ಬಾರೆಡ್ಡಿ ಶಾಸಕ ಸ್ಥಾನವನ್ನು ಹೈಕೋರ್ಟ್ ಅಸಿಂಧುಗೊಳಿಸಿದೆ.
ಅಸಿಂಧುಗೊಳಿಸಲು ಕಾರಣ ತಿಳಿಸಿದ ಲಾಯರ್
ಇನ್ನು ಈ ಬಗ್ಗೆ ಟಿವಿ9ಗೆ ಹಿರಿಯ ವಕೀಲೆ ನಳೀನಿ ಮಾಯಗೌಡ ಅವರು ಪ್ರತಿಕ್ರಿಯಿಸಿ, ಸುಬ್ಬಾರೆಡ್ಡಿ ಅವರು ಪ್ರಾಪರ್ಟಿ ಡಿಸ್ಲೋಸ್ ಮಾಡಿರಲಿಲ್ಲ. ಜಿಎಸ್ಟಿ ಫೈಲ್ ಮಾಡಿರಲಿಲ್ಲ. ಇದೇ ಕಾರಣಕ್ಕಾಗಿ ಸುಬ್ಬಾರೆಡ್ಡಿ ಅವರನ್ನ ಹೈಕೋರ್ಟ್ ಅಸಿಂಧು ಮಾಡಿದೆ. ಇದರ ಜೊತೆ ನನ್ನನ್ನ ಶಾಸಕನಾಗಿ ಡಿಕ್ಲೇರೇಷನ್ ಕೊಡಿ ಎಂದು ಮುನಿರಾಜು ಅವರು ಕೇಳಿದರು. ಈಗ ಎರಡೂವರೆ ವರ್ಷ ವಾದ ಮಾಡಿ ಕೋರ್ಟ್ ಅಸಿಂಧು ಮಾಡಿದೆ. ಶಾಸಕರನ್ನ ಅನರ್ಹ ಮಾಡಿದೆ, ಈಗ ಅವರು ಶಾಸಕರು ಅಲ್ಲ. ಒಂದು ವೇಳೆ ಸುಬ್ಬಾರೆಡ್ಡಿ ಅವರು ಸುಪ್ರೀಂ ಕೋರ್ಟ್ ಗೆ ಹೋದ್ರೆ ಹೈಕೋರ್ಟ್ ಆದೇಶ ಸ್ಟೇ ಆಗಬಹುದು ಎಂದರು.
ಇದನ್ನೂ ಓದಿ: ಕಾಂಗ್ರೆಸ್ MLAಗೆ ಬಿಗ್ ಶಾಕ್: ಶಾಸಕ ಸುಬ್ಬಾರೆಡ್ಡಿ ಆಯ್ಕೆ ಅಸಿಂಧುಗೊಳಿಸಿದ ಹೈಕೋರ್ಟ್
ಎರಡು ಕೋಟಿ ರೂ. ತೆರಿಗೆ ಕಟ್ಟಿಲ್ಲ
ನಾವು ಪ್ರಾಪರ್ಟಿ ಟ್ಯಾಕ್ಸ್ ಪೇ ಮಾಡಿ ಎಂದು ವಾದ ಮಾಡಿದ್ವಿ. ಹೋಟೆಲ್, ಲಿಕ್ಕರ್ ಅಂಗಡಿಯ ಟ್ಯಾಕ್ಸ್ ಕಟ್ಟಿರಲಿಲ್ಲ. ಅದಕ್ಕೆ ದಾಖಲಾತಿ ಕೊಟ್ಟಿದ್ವಿ. ಜೊತೆ ಜಿಎಸ್ಟಿ ಕಟ್ಟಿರಲಿಲ್ಲ. ಅವರ ಹೆಂಡತಿ, ಪುತ್ರಿಯ ಪ್ರಾಪರ್ಟಿ ಬಹಿರಂಗ ಮಾಡಿರಲಿಲ್ಲ. ಸುಬ್ಬಾರೆಡ್ಡಿ ಅವರು ಸುಪ್ರೀಂ ಕೋರ್ಟ್ ಗೆ ಹೋದ್ರೂ ನಾವು ದಾಖಲೆ ಸಮೇತ ಹೋರಾಟ ಮಾಡುತ್ತೇವೆ. ಎರಡು ಕೋಟಿ ರೂ. ತೆರಿಗೆ ಕಟ್ಟಿಲ್ಲ. ಶಾಸಕರೇ ಟ್ಯಾಕ್ಸ್ ಕಟ್ಟಿಲ್ಲ ಎಂದು ವಾದ ಮಾಡಿದ್ವಿ.ಕರಪ್ಟ್ ಶಾಸಕರನ್ನ ಮುಂದುವರಿಯೋಕೆ ಬಿಡಬಾರದು ಎಂದು ವಾದ ಮಾಡಿದ್ವಿ ಎಂದು ತಿಳಿಸಿದರು.
ಗೆಜೆಟ್ ನೋಟಿಫಿಕೇಷನ್ ಆದ್ರೆ ಅನರ್ಹ
ಸುಪ್ರೀಂ ಕೋರ್ಟ್ ನವರು ಕೂಡ ನಮ್ಮ ವಾದಕ್ಕೆ ಅವರು ತೀರ್ಪು ಕೊಡಬಹುದು. ಇಲ್ಲಂದ್ರೆ ಹೊಸ ಚುನಾವಣೆ ಗೆ ಹೋಗಬಹುದು. ಮುನಿರಾಜು ಗೆಲುವು ಅಂತ ಕೋರ್ಟ್ ಹೇಳಿಲ್ಲ, ಇದಕ್ಕೆ ಕಾರಣವೂ ಕೊಟ್ಟಿಲ್ಲ. ಎರಡನೇ ಅತೀ ಹೆಚ್ಚು ಮತ ತೆಗೆದುಕೊಂಡಿದ್ಧು ಮುನಿರಾಜು. ಅವರು ತೀರ್ಮಾನ ಮಾಡಿದ್ರೆ ಸುಪ್ರೀಂ ಕೋರ್ಟ್ ಗೆ ಹೋಗಬಹುದು. ಗೆಜೆಟ್ ನೋಟಿಫೀಕೇಷನ್ ಆಗಬೇಕು. ಪ್ರೆಸಿಡೆಂಟ್ ನಿಂದ ಅಪ್ರೊವಲ್ ಆಗಿ ಬರಬೇಕು. ಗೆಜೆಟ್ ನೋಟಿಫಿಕೇಷನ್ ಆದ್ರೆ ಅನರ್ಹ ಎಂದು ಆದೇಶ ಆಗುತ್ತದೆ ಎಂದು ಹಿರಿಯ ವಕೀಲೆ ನಳೀನಿ ಮಾಯಗೌಡ ಮಾಹಿತಿ ನೀಡಿದರು.