ನವದೆಹಲಿ, ಫೆಬ್ರುವರಿ 17: ಫೆಬ್ರುವರಿ 20ರವರೆಗೆ ನಡೆಯುತ್ತಿರುವ ಎಐ ಇಂಪ್ಯಾಕ್ಟ್ ಸಮಿಟ್ನಲ್ಲಿ (India AI Impact Summit) ಭಾರತೀಯ ಎಐ ಎಕ್ಸ್ಪೋ ಪ್ರಮುಖ ಆಕರ್ಷಣೆ ಆಗಿದೆ. ಭಾರತದಲ್ಲಿ ಮತ್ತು ಭಾರತೀಯರೇ ಸ್ವಂತವಾಗಿ ನಿರ್ಮಿಸಿದ ಎಐ ಮಾಡಲ್ಗಳು, ಎಐ ಏಜೆಂಟ್ಗಳು, ರೋಬೋಗಳ ಪ್ರದರ್ಶನ ನಡೆದಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಪ್ರತೀ ಸ್ಟಾಲ್ಗೂ ಹೋಗಿ ಹೊಸ ಆವಿಷ್ಕಾರಗಳನ್ನು ಕಣ್ಣಾರೆ ಕಂಡಿದ್ದಾರೆ. ಅದರ ಬಗ್ಗೆ ವಿವರಣೆಗಳನ್ನೂ ಪಡೆದಿದ್ದಾರೆ. ಶಿಕ್ಷಣ, ಕೃಷಿ, ತಂತ್ರಜ್ಞಾನ, ಫೈನಾನ್ಸ್ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಎಐ ಅನ್ನು ಹೇಗೆ ಸಮರ್ಥವಾಗಿ ಉಪಯೋಗಿಸಬಹುದು ಎಂಬುದನ್ನು ಈ ಪ್ರದರ್ಶನದಲ್ಲಿ ಕಾಣಬಹುದು. ಸರ್ವಮ್ ಎಐ, ಮೈಕೋ ರೋಬೋ ಇತ್ಯಾದಿ ನಾನಾ ರೀತಿಯ ಎಐ ಮಾಡಲ್ಗಳು, ಎಐ ಆವಿಷ್ಕಾರಗಳು ಎಐ ಇಂಪ್ಯಾಕ್ಟ್ ಸಮಿಟ್ನ ಮೊದಲ ದಿನ ಪ್ರದರ್ಶನಗೊಂಡವು. ಭಾರತವು ಎಐ ಅನ್ನು ಲೋಕಕಲ್ಯಾಣಕ್ಕಾಗಿ ಜವಾಬ್ದಾರಿಯುತವಾಗಿ ಬಳಕೆ ಮಾಡುವ ಮೂಲಕ ಮಾದರಿಯಾಗಿದೆ ಎಂದು ನರೇಂದ್ರ ಮೋದಿ ಹೇಳಿದ್ದಾರೆ. ದೆಹಲಿಯ ಭಾರತ್ ಮಂಟಪಂನಲ್ಲಿ ನಿನ್ನೆ (ಫೆ. 16) ಆರಂಭಗೊಂಡ ಎಐ ಇಂಪ್ಯಾಕ್ಟ್ ಸಮಿಟ್ ಫೆಬ್ರುವರಿ 20ರವರೆಗೂ ಇದೆ.
ಇನ್ನಷ್ಟು ವಿಡಿಯೋ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ